• Home  
  •  ಚಂಡಮಾರುತದಿಂದ ಪ್ರಕ್ಷುಬ್ಧಗೊಂಡ ಸಮುದ್ರ; ನೀರುಪಾಲಾದ ಐವರು ಬಾಲಕರು, ಓರ್ವನ ಮೃತದೇಹ ಪತ್ತೆ, ಇಬ್ಬರು ನಾಪತ್ತೆ
- ಅಪರಾಧ

 ಚಂಡಮಾರುತದಿಂದ ಪ್ರಕ್ಷುಬ್ಧಗೊಂಡ ಸಮುದ್ರ; ನೀರುಪಾಲಾದ ಐವರು ಬಾಲಕರು, ಓರ್ವನ ಮೃತದೇಹ ಪತ್ತೆ, ಇಬ್ಬರು ನಾಪತ್ತೆ

Share: ಬಿಪರ್‌ಜೋಯ್ ಚಂಡಮಾರುತದಿಂದ ಪ್ರಕ್ಷುಬ್ಧಗೊಂಡ ಸಮುದ್ರ;ಮುನ್ನೆಚ್ಚರಿಕೆ ಹೊರತೆಗಿಯೂ ಸಮುದ್ರಕ್ಕಿಳಿದ ನೀರುಪಾಲಾದ ಐವರು ಬಾಲಕರು, ಓರ್ವನ ಮೃತದೇಹ ಪತ್ತೆ, ಇಬ್ಬರು ನಾಪತ್ತೆ ಮುಂಬೈ; ಬಿಪರ್‌ಜೋಯ್ ಚಂಡಮಾರುತದ ಪ್ರಭಾವದಿಂದ ಸಮುದ್ರ ಪ್ರಕ್ಷುಬ್ಧವಾಗಿದ್ದು, ನಿನ್ನೆ ಮುಂಬೈನ ಜುಹು ಬೀಚ್‌ನಲ್ಲಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಐದು ಜನರಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಐವರಲ್ಲಿ ಒಬ್ಬರು ಮೃತಪಟ್ಟಿದ್ದು, ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಬ್ಬನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಜುಹು ಕೋಳಿವಾಡದಲ್ಲಿ ಘಟನೆ ಸಂಭವಿಸಿದ್ದು, 12 ರಿಂದ 15 […]

ಬಿಪರ್‌ಜೋಯ್ ಚಂಡಮಾರುತದಿಂದ ಪ್ರಕ್ಷುಬ್ಧಗೊಂಡ ಸಮುದ್ರ;ಮುನ್ನೆಚ್ಚರಿಕೆ ಹೊರತೆಗಿಯೂ ಸಮುದ್ರಕ್ಕಿಳಿದ ನೀರುಪಾಲಾದ ಐವರು ಬಾಲಕರು, ಓರ್ವನ ಮೃತದೇಹ ಪತ್ತೆ, ಇಬ್ಬರು ನಾಪತ್ತೆ

ಮುಂಬೈ; ಬಿಪರ್‌ಜೋಯ್ ಚಂಡಮಾರುತದ ಪ್ರಭಾವದಿಂದ ಸಮುದ್ರ ಪ್ರಕ್ಷುಬ್ಧವಾಗಿದ್ದು, ನಿನ್ನೆ ಮುಂಬೈನ ಜುಹು ಬೀಚ್‌ನಲ್ಲಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಐದು ಜನರಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಐವರಲ್ಲಿ ಒಬ್ಬರು ಮೃತಪಟ್ಟಿದ್ದು, ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಬ್ಬನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಜುಹು ಕೋಳಿವಾಡದಲ್ಲಿ ಘಟನೆ ಸಂಭವಿಸಿದ್ದು, 12 ರಿಂದ 15 ವರ್ಷದೊಳಗಿನ ಐದು ಹುಡುಗರ ಗುಂಪು ಸಂಜೆ 5.30 ರ ಸುಮಾರಿಗೆ ಸಮುದ್ರಕ್ಕೆ ಇಳಿದಾಗ ಘಟನೆ ನಡೆದಿದೆ.

ನೌಕಾಪಡೆಯ ಹೆಲಿಕಾಪ್ಟರ್ ಮೂಲ ಕ‌ಶೋಧ ಕಾರ್ಯ ನಡೆಯುತ್ತಿದೆ ಎಂದು ಮಹಾ ನಗರಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ರಾತ್ರಿ ಸರ್ಚ್ ಲೈಟ್ ಸೇರಿ ಸಲಕರಣೆಗಳೊಂದಿಗೆ ಶೋಧ ನಡೆಸಲಾಗಿತ್ತಾದರೂ ಕಾಣೆಯಾದ ಬಾಲಕರು ಪತ್ತೆಯಾಗಿಲ್ಲ.

ಬೈಪರ್‌ಜೋಯ್ ಚಂಡಮಾರುತವು ಅರಬ್ಬಿ ಸಮುದ್ರದಲ್ಲಿ ಅಲೆಗಳನ್ನು ಸೃಷ್ಟಿಸಿದ್ದು, ಗುಜರಾತ್ ಕರಾವಳಿಗೆ ಅಪ್ಪಳಿಸುವ ಬಗ್ಗೆಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.