• Home  
  • ಚಾಣಕ್ಯ ದಶ ಸಂಭ್ರಮ -2024 : ಜನಮನ ಗೆದ್ದ ಸಾಂಸ್ಕೃತಿಕ ಉತ್ಸವಕ್ಕೆ ಅದ್ದೂರಿ ತೆರೆ (Chanakya Dasha Sambhrama -2024: A grand Closing for the popular cultural festival)
- ಸಂಘ, ಸಂಸ್ಥೆಗಳು

ಚಾಣಕ್ಯ ದಶ ಸಂಭ್ರಮ -2024 : ಜನಮನ ಗೆದ್ದ ಸಾಂಸ್ಕೃತಿಕ ಉತ್ಸವಕ್ಕೆ ಅದ್ದೂರಿ ತೆರೆ (Chanakya Dasha Sambhrama -2024: A grand Closing for the popular cultural festival)

Share: ಚಾಣಕ್ಯ ದಶ ಸಂಭ್ರಮ -2024 : ಜನಮನ ಗೆದ್ದ ಸಾಂಸ್ಕೃತಿಕ ಉತ್ಸವಕ್ಕೆ ಅದ್ದೂರಿ ತೆರೆ (Hebri) ಹೆಬ್ರಿ :ಹೆಬ್ರಿ ಚಾಣಕ್ಯ ಏಜ್ಯುಕೇಶನ್ ಮತ್ತು  ಕಲ್ಚರಲ್ ಅಕಾಡಮಿ ಹೆಬ್ರಿ ಇದರ ಹತ್ತನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಜನಮನ ಗೆದ್ದ  ಚಾಣಕ್ಯ ದಶ ಸಂಭ್ರಮ -2024 ಸಾಂಸ್ಕೃತಿಕ ಉತ್ಸವ  ಅದ್ದೂರಿ ತೆರೆಕಂಡಿತು. ಪರಿಶ್ರಮದ ಸಂಭ್ರಮ – ಚಾರಾ ವಾದಿರಾಜ ಶೆಟ್ಟಿ: ಪ್ರಮಾಣಿಕತೆಯೊಂದಿಗೆ ನಿರಂತರ  ಪರಿಶ್ರಮದ ಮೂಲಕ ಕಳೆದ 10 ವರ್ಷಗಳಿಂದ ಗುಣಮಟ್ಟದ ಶಿಕ್ಷಣದ ಜತೆ ಎಲ್ಲಾ ಕಲಾ […]

ಚಾಣಕ್ಯ ದಶ ಸಂಭ್ರಮ -2024 : ಜನಮನ ಗೆದ್ದ ಸಾಂಸ್ಕೃತಿಕ ಉತ್ಸವಕ್ಕೆ ಅದ್ದೂರಿ ತೆರೆ

(Hebri) ಹೆಬ್ರಿ :ಹೆಬ್ರಿ ಚಾಣಕ್ಯ ಏಜ್ಯುಕೇಶನ್ ಮತ್ತು  ಕಲ್ಚರಲ್ ಅಕಾಡಮಿ ಹೆಬ್ರಿ ಇದರ ಹತ್ತನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಜನಮನ ಗೆದ್ದ  ಚಾಣಕ್ಯ ದಶ ಸಂಭ್ರಮ -2024 ಸಾಂಸ್ಕೃತಿಕ ಉತ್ಸವ  ಅದ್ದೂರಿ ತೆರೆಕಂಡಿತು.

ಪರಿಶ್ರಮದ ಸಂಭ್ರಮಚಾರಾ ವಾದಿರಾಜ ಶೆಟ್ಟಿ: ಪ್ರಮಾಣಿಕತೆಯೊಂದಿಗೆ ನಿರಂತರ  ಪರಿಶ್ರಮದ ಮೂಲಕ ಕಳೆದ 10 ವರ್ಷಗಳಿಂದ ಗುಣಮಟ್ಟದ ಶಿಕ್ಷಣದ ಜತೆ ಎಲ್ಲಾ ಕಲಾ ಪ್ರಕಾರಗಳನ್ನು ಒಂದೇ ಸೂರಿನಡಿ ನೀಡುತ್ತಿರುವ ಉದಯ ಕುಮಾರ್ ಶೆಟ್ಟಿ ದಂಪತಿಗಳ ನೇತೃತ್ವದಲ್ಲಿ ನಡೆಯುವ  ಚಾಣಕ್ಯ ಸಂಸ್ಥೆಯ ಈ ವಾರ್ಷಿಕೋತ್ಸವ ಸಮಾರಂಭ  ಕೇವಲ ದಶ ಸಂಭ್ರಮ ಅಷ್ಟೇ ಅಲ್ಲ ಪರಿಶ್ರಮದ ಸಂಭ್ರಮವಾಗಿದೆ ಎಂದು ಉದ್ಯಮಿ ಚಾರ ವಾದಿರಾಜ ಶೆಟ್ಟಿ ಹೇಳಿದರು.

ಬದ್ಧತೆಯಿದ್ದಲ್ಲಿ ಯಶಸ್ಸು : ಉದಯಕುಮಾರ್ ಶೆಟ್ಟಿ ಅವರು ಉತ್ತಮ ಉದ್ಯೋಗಾವಕಾಶದಲ್ಲಿದ್ದರೂ, ಕೂಡ ಅದನ್ನು ಬಿಟ್ಟು ತನ್ನ ಹುಟ್ಟೂರಿನ ಸೆಳೆತದಿಂದ ಊರಿಗೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಎಸ್.ಅರ್. ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನಾಗರಾಜ್ ಶೆಟ್ಟಿ ಹೇಳಿದರು.

ಗುಣಮಟ್ಟದ ಶಿಕ್ಷಣ ಗುರಿ ಮುಟ್ಟಿಸುತ್ತದೆ;  ಗುಣ ಮಟ್ಟದ ಶಿಕ್ಷಣದ ಮೂಲಕ ಮನೆಮಾತಾದ ಚಾಣಕ್ಯ ಸಂಸ್ಥೆ ಕಲಿಕೆಯನ್ನು ಅಸಾಧ್ಯ ಎಂದು ಕೈಚೆಲ್ಲಿ ಕುಳಿತವರ ಬದುಕನ್ನು ಬದಲಾಯಿಸಿದೆ. ಎಷ್ಟೋ ಜನರ ಬದುಕಿನ ದಾರಿದೀಪವಾಗಿರುವ ಚಾಣಕ್ಯ ಸಂಸ್ಥೆಯ ಪರಿಶ್ರಮದಿಂದ ಇಂದು ದಶ ಸಂಭ್ರಮನ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಎಲ್ಲರ ಸಹಕಾರವೇ ದಶ ಸಂಭ್ರಮಹೆಬ್ರಿ ಉದಯ ಕುಮಾರ್ ಶೆಟ್ಟಿ :  ಚಾಣಕ್ಯ ಎಜುಕೇಶನ್ ಮತ್ತು ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಹೆಬ್ರಿ ಉದಯ ಕುಮಾರ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆ ಇಂದು 10 ವರ್ಷ ಪೂರೈಸಲು ಪೋಷಕರ ಸಹಕಾರ ಮತ್ತು ಮುಖ್ಯವಾಗಿ ಆತ್ಮೀಯರಾದ ಉದ್ಯಮಿ ವಾದಿರಾಜ್ ಶೆಟ್ಟಿ ಪ್ರೋತ್ಸಾಹ ಹಾಗೂ ವೇದಿಕೆಯಲ್ಲಿ ಇರುವ ಎಲ್ಲಾ ಗಣ್ಯರ ಸಹಕಾರದಿಂದ ಸಾಧ್ಯವಾಯಿತು. ಕಳೆದ ಹತ್ತು ವರ್ಷಗಳಿಂದ ಗುಣಮಟ್ಟದ ಶಿಕ್ಷಣದ ಜೊತೆ ನಿತ್ಯಾನಂದ ಶೆಟ್ಟಿ ಅವರ ಸಹಕಾರದಿಂದ ಉಚಿತವಾಗಿ ಚೆಸ್ ತರಗತಿಯನ್ನು ನಡೆಸುತ್ತಾ ಬರುತ್ತಿದೆ. ಕಳೆದ ಎಂಟು ವರ್ಷಗಳಿಂದ ಸರಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ಚಿತ್ರಕಲಾ ತರಬೇತಿಯನ್ನು ನಮ್ಮ ಸಂಸ್ಥೆ ನೀಡಿದೆ. ಮುಂದೆ ಕೂಡ ಇಂತಹ ಹತ್ತು ಹಲವಾರು ಸಮಾಜಿಕ ಚಟುವಟಿಕೆಗಳ ಯೋಜನೆ ಇದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

  ಸಮಾರಂಭದಲ್ಲಿ ಉದಯ ಕೃಷ್ಣ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು, ಅಮೃತ  ಭಾರತಿ ಟ್ರಸ್ಟ್ ಹೆಬ್ರಿ ಇದರ ಸ್ಥಾಪಕ ಅಧ್ಯಕ್ಷ ಸತೀಶ್ ಪೈ,ಅವಿಭಜಿತ ದ.ಕ. ಜವಳಿ ವರ್ತಕರ ಸಂಘದ ಅಧ್ಯಕ್ಷ ಯೋಗೀಶ್ ಭಟ್, ಉದ್ಯಮಿ ಹರ್ಷ ಶೆಟ್ಟಿ, ಹೆಬ್ರಿ  ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ಪ್ರಾಂಶುಪಾಲ ಡಾ. ವಿದ್ಯಾಧರ್ ಹೆಗ್ಡೆ, ಸೀತಾನದಿ ಸೌಖ್ಯಯೋಗ ಟ್ರಸ್ಟ್ ಅಧ್ಯಕ್ಷ  ಸೀತಾನದಿ ವಿಠ್ಠಲ ಶೆಟ್ಟಿ, ಉದ್ಯಮಿ ಭಾಸ್ಕರ್ ಜೋಯಿಸ್, ತೀರ್ಥಹಳ್ಳಿ ಮಾಳೂರು ಸರಕಾರಿ ಪ್ರೌಢಶಾಲೆಯ  ನಿವೃತ್ತ ಉಪ ಪ್ರಾಂಶುಪಾಲ ಗೋಪಾಲ ಶೆಟ್ಟಿ, ಪತ್ರಕರ್ತ ಮಂಜುನಾಥ್ ಭದ್ರಾವತಿ  ಶುಭ ಹಾರೈಸಿದರು.

ಚಾಣಕ್ಯ ಸಂಸ್ಥೆಯ ಪ್ರಾಂಶುಪಾಲೆ ವೀಣಾ ಉದಯ ಶೆಟ್ಟಿ ವರದಿ ವಾಚಿಸಿದರು. ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಹೆಬ್ರಿ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಮುದ್ರಾಡಿ ಪ್ರೌಢಶಾಲೆಯ ಆಂಗ್ಲ ಭಾಷೆ ಶಿಕ್ಷಕ ಚಂದ್ರಶೇಖರ್ ಭಟ್ ಬಲ್ಲಾಡಿ ಕಾರ್ಯಕ್ರಮ ನಿರೂಪಿಸಿದರು. ದೀಪಿಕಾ ಶೆಟ್ಟಿ  ವಂದಿಸಿದರು.

“ಚಾಣಕ್ಯ ಕಲಾರತ್ನ” ಪ್ರಶಸ್ತಿ ಪುರಸ್ಕಾರ : ಚಾಣಕ್ಯ ಸಂಸ್ಥೆಯಲ್ಲಿ ಕಲಾ ಪ್ರಕಾರದ ತರಬೇತಿಯ ಆರಂಭದ ಮೊದಲ ಗುರುವಾಗಿ ಸೇವೆ ಸಲ್ಲಿಸಿದ ಪ್ರಸ್ತುತ ಅಂತರಾಷ್ಟೀಯ ಮಟ್ಟದ ಚಿತ್ರಕಲಾವಿದರಾಗಿ ಗುರುತಿಸಿಕೊಂಡಿರುವ ಪುನೀತ್ ಎಸ್.ಮೈಸೂರು ಅವರಿಗೆ “ಚಾಣಕ್ಯ ಕಲಾರತ್ನ” ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಸಾಧಕರಿಗೆ ಸನ್ಮಾನ : ಚಾಣಕ್ಯ ಸಂಸ್ಥೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಉಚಿತ ಚೆಸ್ ತರಗತಿಯನ್ನು ನಡೆಸಿ ಕೊಡುತ್ತಿರುವ ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ಚಾಣಕ್ಯ ಸಂಸ್ಥೆಯ ಸಮಾಜಕ್ಕೆ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ  ಭಾರತೀಯ ಮಾನವ ಹಕ್ಕುಗಳ ಮಂಡಳಿ ರಾಜ್ಯಾಧ್ಯಕ್ಷ  ಪ್ರಸಾದ್ ರೈ, ವಾಯ್ಸ್ ಆಫ್ ಚಾಣಕ್ಯ ಸಂಗೀತ ಸ್ಪರ್ಧೆ ಯಶಸ್ವಿಗೆ ನಿರಂತರ ಸಹಕರಿಸುತ್ತಿರುವ ಸಂಗೀತ ನಿರ್ದೇಶಕ  ರಮೇಶ್ ಡಿ.‌ ಚಾಂತಾರು, ಸಂಗೀತ ಶಿಕ್ಷಕಿ ಸ್ಮಿತಾ ಭಟ್ ಉಡುಪಿ, ಕಳೆದ ಏಳು ವರ್ಷಗಳಿಂದ ಸಂಗೀತ ಸ್ಪರ್ಧೆಯನ್ನು ಅತ್ಯುತ್ತಮವಾಗಿ ನಿರೂಪಣೆ ಮಾಡುತ್ತಿರುವ ನಿರೂಪಕಿ ದೀಪಿಕಾ ಶೆಟ್ಟಿ ಚಾರ,ಉದ್ಯಮಿ ಶಶಿಕಾಂತ ಶೆಟ್ಟಿಗಾರ್, ಯಕ್ಷಗಾನ ಗುರು ಸುಬ್ರಹ್ಮಣ್ಯ ಪ್ರಸಾದ್ ಅವರನ್ನು  ಚಾಣಕ್ಯ ದಶಮಾನೋತ್ಸವ ಸಂಭ್ರಮದ ಅಂಗವಾಗಿ  ಸಮ್ಮಾನಿಸಲಾಯಿತು.

 ವಿವಿಧ ಸ್ಪರ್ಧೆ ಬಹುಮಾನ ವಿತರಣೆ : ಚಾಣಕ್ಯ ದಶ ಸಂಭ್ರಮದ ಅಂಗವಾಗಿ  ಚಿತ್ರಕಲೆ, ಭರತನಾಟ್ಯ, ಫಿಲಂ ಡ್ಯಾನ್ಸ್, ಸಂಗೀತ ಸ್ಪರ್ಧೆ, ಚೆಸ್, ಕ್ಯಾರಂ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ  ಟ್ರೋಫಿ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.