• Home  
  • ಚಾಲಕ ರಹಿತ ನಮ್ಮ ಮೆಟ್ರೋ ಸಂಚಾರಕ್ಕೆ ಯೋಜನೆ:
- ತಂತ್ರಜ್ಞಾನ - ದೇಶ-ವಿದೇಶ

ಚಾಲಕ ರಹಿತ ನಮ್ಮ ಮೆಟ್ರೋ ಸಂಚಾರಕ್ಕೆ ಯೋಜನೆ:

Share: ಚಾಲಕ ರಹಿತ ನಮ್ಮ ಮೆಟ್ರೋ ಸಂಚಾರಕ್ಕೆ ಯೋಜನೆ: ಬೆಂಗಳೂರು: ಈ ವರ್ಷಾಂತ್ಯದಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ ಹೊಸ ಮೈಲುಗಲ್ಲು ನೆಡುವ ಸಾಧ್ಯತೆ ಇದೆ. ಚಾಲಕ ರಹಿತ ಮೆಟ್ರೋ ಸಂಚಾರಕ್ಕೆ ಯೋಜನೆ ರೂಪಿಸಲಾಗಿದ್ದು ಆ ನಿಟ್ಟಿನಲ್ಲಿ ಸಿದ್ದತೆ ಭರದಿಂದ ಸಾಗಿದೆ.  ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಬಿಟಿಸಿ) ಮೂಲಕ ಚಲಿಸುವ ಈ ಮಾದರಿಯ ರೈಲು ಮೊದಲ ಬಾರಿ ದಿಲ್ಲಿಯಲ್ಲಿ ಓಡಾಟ ನಡೆಸಿತ್ತು. ಬಳಿಕ ಈ ಮಾದರಿಯನ್ನು ಮುಂಬಯಿಯಲ್ಲೂ ಆರಂಭಿಸಲಾಗಿತ್ತು. ಚೆನ್ನೈ ಮೆಟ್ರೋ ಆಗಸ್ಟ್ ನಲ್ಲಿ ಚಾಲಕ […]

ಚಾಲಕ ರಹಿತ ನಮ್ಮ ಮೆಟ್ರೋ ಸಂಚಾರಕ್ಕೆ ಯೋಜನೆ:

ಬೆಂಗಳೂರು: ಈ ವರ್ಷಾಂತ್ಯದಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ ಹೊಸ ಮೈಲುಗಲ್ಲು ನೆಡುವ ಸಾಧ್ಯತೆ ಇದೆ. ಚಾಲಕ ರಹಿತ ಮೆಟ್ರೋ ಸಂಚಾರಕ್ಕೆ ಯೋಜನೆ ರೂಪಿಸಲಾಗಿದ್ದು ಆ ನಿಟ್ಟಿನಲ್ಲಿ ಸಿದ್ದತೆ ಭರದಿಂದ ಸಾಗಿದೆ.

 ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಬಿಟಿಸಿ) ಮೂಲಕ ಚಲಿಸುವ ಈ ಮಾದರಿಯ ರೈಲು ಮೊದಲ ಬಾರಿ ದಿಲ್ಲಿಯಲ್ಲಿ ಓಡಾಟ ನಡೆಸಿತ್ತು. ಬಳಿಕ ಈ ಮಾದರಿಯನ್ನು ಮುಂಬಯಿಯಲ್ಲೂ ಆರಂಭಿಸಲಾಗಿತ್ತು. ಚೆನ್ನೈ ಮೆಟ್ರೋ ಆಗಸ್ಟ್ ನಲ್ಲಿ ಚಾಲಕ ರಹಿತ ರೈಲು ಓಡಿಸುವ ಯೋಜನೆ ಹೊಂದಿದೆ.

 ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿ.ಎಂ.ಆರ್.ಸಿ.ಎಲ್.) ನಮ್ಮ ಮೆಟ್ರೋದ ಎರಡನೇ ಹಂತದ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಓಡಿಸುವ ಗುರಿ ಇಟ್ಟುಕೊಂಡಿತ್ತು. ಆರ್.ವಿ.ರಸ್ತೆ – ಬೊಮ್ಮಸಂದ್ರ – ಎಲೆಕ್ಟ್ರಾನಿಕ್ ಸಿಟಿ ನಡುವಿನ ಈ ಮಾರ್ಗದ ಶೇ. 99ರಷ್ಟು ಕಾಮಗಾರಿ ಮುಗಿದಿದೆ. ಬರುವ ತಿಂಗಳು ರೈಲು ಓಡಾಟ ನಡೆಸಲಿದೆ. ಆದರೆ ಇದು ಚಾಲಕ ಸಹಿತ ವ್ಯವಸ್ಥೆಯನ್ನೇ ಒಳಗೊಂಡಿರಲಿದೆ.

 ”ನಮ್ಮ ಮೆಟ್ರೋದ ಹೊಸ ಮಾರ್ಗಗಗಳಲ್ಲಿ ಚಾಲಕ ರಹಿತ ಮೆಟ್ರೋ ಸಂಚರಿಸುವಂತೆ ಮಾಡಬೇಕೆಂಬ ಗುರಿ ಇದೆ. ಆದರೆ ಈ ರೀತಿಯ ಮೆಟ್ರೋ ಖರೀದಿ ಪ್ರಕ್ರಿಯೆಗೆ ಕೆಲವು ಸಮಯ ತಗುಲಲಿದೆ” ಎಂದು ಮೆಟ್ರೋ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವಾಣ್ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.