ಚಿಕ್ಕೋಡಿ : ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಆಹಾರ ಅಧಿಕಾರಿಗಳು ಸ್ಮಾರ್ಟ್ ಬಜಾರ್ ಗೆ ದಿಢೀರ್ ದಾಳಿ
ಸ್ಮಾರ್ಟ್ ಬಜಾರ್ ನ ಮ್ಯಾನೇಜರ್ ಗೆ ಆಹಾರ ಸಂರಕ್ಷಣಾ ಕೆಲವು ಮಾಹಿತಿ ನೀಡಿದ ಅಧಿಕಾರಿಗಳು
(Chikkodi) ಚಿಕ್ಕೋಡಿ : ಚಿಕ್ಕೋಡಿ ಪಟ್ಟಣದಾದ್ಯಂತ ಆಹಾರ ಸಂರಕ್ಷಣೆ ಕಾಯ್ದೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉತ್ತಮವಾದ ಆಹಾರ ಪದಾರ್ಥಗಳನ್ನು ವಿತರಣೆ ಮಾಡಬೇಕೆಂಬ ಹಿನ್ನೆಲೆಯಲ್ಲಿ ಚಿಕ್ಕೋಡಿ ಪಟ್ಟಣದ ಅಂಗಡಿ ಮಳಿಗೆಗಳಿಗೆ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಶುಭಾಷ್ ಸಂಪಗಾವಿ ಹಾಗೂ ತಹಸಿಲ್ದಾರ್ ರಾಜೇಶ್ ಬುರ್ಲಿ ಅವರು ದಿಡೀರ್ ಭೇಟಿ ಮಾಡಿ ತಪಾಸಣೆ ನಡೆಸಿದರು.
ಚಿಕ್ಕೋಡಿ ಪಟ್ಟಣದ ಸ್ಮಾರ್ಟ್ ಬಜಾರ್ ಗೆ ಭೇಟಿ ನೀಡಿ ಪ್ರತಿಯೊಂದು ಆಹಾರ ಪದಾರ್ಥಗಳನ್ನು ಪರೀಕ್ಷಿಸಿದರು. ಸ್ಮಾರ್ಟ್ ಬಜಾರ್ ನ ಮ್ಯಾನೇಜರ್ ಗೆ ಆಹಾರ ಸಂರಕ್ಷಣಾ ಕೆಲವು ಮಾಹಿತಿಗಳು ನೀಡಿ ಯಾವುದೇ ಆಹಾರಗಳು ಅದರ ಉಪಯೋಗಿಸುವ ಅವಧಿ ಮುಗಿದ ತಕ್ಷಣ ಅವುಗಳನ್ನು ನಾಶಪಡಿಸಬೇಕು. ಅವಧಿ ಮುಗಿದಿರುವ ವಸ್ತುಗಳನ್ನು ಮಾರಾಟ ಮಾಡಬಾರದು. ಮಾಡಿರುವುದು ಗೊತ್ತಾದಲ್ಲಿ ಹಾಗೂ ಯಾರಾದರು ಸಾರ್ವಜನಿಕರು ದೂರ ನೀಡಿದ್ದಲ್ಲಿ ನಿಮ್ಮ ಮೇಲೆ ಆಹಾರ ಸಂರಕ್ಷಣೆ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸ್ಮಾರ್ಟ್ ಬಜಾರ್ ಮುಂಭಾಗದ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು. ರಸ್ತೆಯಲ್ಲಿ ವಾಹನಗಳು ನಿಲ್ಲದೆ ಹಾಗೆ ಎಚ್ಚರಿಕೆ ವಹಿಸಬೇಕು. ಇದಕ್ಕೆ ಸಂಬಂಧಪಟ್ಟಂತೆ ಒಬ್ಬ ಸಿಬ್ಬಂದಿಯನ್ನು ನೇಮಿಸಿ, ಸೂಕ್ತ ನಿರ್ವಹಣೆ ಮಾಡಿ ಎಂದು ಸಲಹೆ ನೀಡಿದರು.
ಸ್ಮಾರ್ಟ್ ಬಜಾರ್ ನ ವ್ಯವಸ್ಥಾಪಕರಾದ ಗಂಗಾಧರ್ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಿದರು.
ಜಂಟಿ ಕಾರ್ಯಚರಣೆಯಲ್ಲಿ ಚಿಕ್ಕೋಡಿ ಆಹಾರ ಸಂರಕ್ಷಣಾಧಿಕಾರಿ ಪುನೀತ್ ಸನದಿ ಉಪಸ್ಥಿರಿದ್ದರು.

