• Home  
  •  ಜುಲೈ 28 : ಬೆಂಗಳೂರಿನ ರಂಗಶಂಕರದಲ್ಲಿ ಮಂಗಳೂರಿನ ಕಲಾಭಿ ಥಿಯೇಟರ್ಸ್‌ ನಾಟಕ ಪ್ರದರ್ಶನ (July 28th : Mangaluru’s Kalabhi Theaters play ar Ranga Shankara Bengaluru)
- ಮನೋರಂಜನೆ

 ಜುಲೈ 28 : ಬೆಂಗಳೂರಿನ ರಂಗಶಂಕರದಲ್ಲಿ ಮಂಗಳೂರಿನ ಕಲಾಭಿ ಥಿಯೇಟರ್ಸ್‌ ನಾಟಕ ಪ್ರದರ್ಶನ (July 28th : Mangaluru’s Kalabhi Theaters play ar Ranga Shankara Bengaluru)

Share: ಜುಲೈ 28 : ಬೆಂಗಳೂರಿನ ರಂಗಶಂಕರದಲ್ಲಿ ಮಂಗಳೂರಿನ ಕಲಾಭಿ ಥಿಯೇಟರ್ಸ್‌ ನಾಟಕ ಪ್ರದರ್ಶನ (Mangaluru) ಮಂಗಳೂರು : ಪ್ರತಿಷ್ಠಿತ ಮಂಗಳೂರಿನ ಕಲಾಭಿ ಥಿಯೇಟರ್ಸ್‌ ಕಲಾವಿದರು ಪ್ರದರ್ಶಿಸಿ ಜನ ಮೆಚ್ಚುಗೆ ಗಳಿಸಿದ “ಎ ಫ್ರೇಂಡ್ ಬಿಯೋಂಡ್ ದಿ. ಫೆನ್ಸ್” ಕನ್ನಡ ನಾಟಕವು ಬೆಂಗಳೂರಿನ ಜೆ.ಪಿ. ನಗರದ ರಂಗಶಂಕರದಲ್ಲಿ ಜುಲೈ 28ರಂದು ಸಂಜೆ 3-30 ಮತ್ತು 7-30ಕ್ಕೆ ಎರಡು ಪ್ರದರ್ಶನ ನೀಡಲಿದೆ.  ಶ್ರವಣ್ ಹೆಗ್ಗೊಡು ನಿರ್ದೇಶನದಲ್ಲಿ ನೀನಾಸಂ ಕಲಾವಿದರು ಹೊಸ ಸಂಚಲನ ಮೂಡಿಸಲಿದ್ದಾರೆ.   ಮಂಗಳೂರಿನ ಪುರಭವನದಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡು […]

ಜುಲೈ 28 : ಬೆಂಗಳೂರಿನ ರಂಗಶಂಕರದಲ್ಲಿ ಮಂಗಳೂರಿನ ಕಲಾಭಿ ಥಿಯೇಟರ್ಸ್‌ ನಾಟಕ ಪ್ರದರ್ಶನ

(Mangaluru) ಮಂಗಳೂರು : ಪ್ರತಿಷ್ಠಿತ ಮಂಗಳೂರಿನ ಕಲಾಭಿ ಥಿಯೇಟರ್ಸ್‌ ಕಲಾವಿದರು ಪ್ರದರ್ಶಿಸಿ ಜನ ಮೆಚ್ಚುಗೆ ಗಳಿಸಿದ “ಎ ಫ್ರೇಂಡ್ ಬಿಯೋಂಡ್ ದಿ. ಫೆನ್ಸ್” ಕನ್ನಡ ನಾಟಕವು ಬೆಂಗಳೂರಿನ ಜೆ.ಪಿ. ನಗರದ ರಂಗಶಂಕರದಲ್ಲಿ ಜುಲೈ 28ರಂದು ಸಂಜೆ 3-30 ಮತ್ತು 7-30ಕ್ಕೆ ಎರಡು ಪ್ರದರ್ಶನ ನೀಡಲಿದೆ.

 ಶ್ರವಣ್ ಹೆಗ್ಗೊಡು ನಿರ್ದೇಶನದಲ್ಲಿ ನೀನಾಸಂ ಕಲಾವಿದರು ಹೊಸ ಸಂಚಲನ ಮೂಡಿಸಲಿದ್ದಾರೆ.

  ಮಂಗಳೂರಿನ ಪುರಭವನದಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡು ರಂಗಾಸಕ್ತರ ಮನಗೆದ್ದು, ಹೊಸ ಬಗೆಯ ನಾಟಕ ಎಂದು ಪ್ರಶಂಸಿಲ್ಪಟ್ಟಿದೆ.

  ನಾಟಕದಲ್ಲಿ ನೈಜ ಗಾತ್ರದ ಆನೆ, ಜಪಾನ್ ಬರ್ನಾಕು ಗೊಂಬೆಗಳು ಹಾಗೂ ವಿಶೇಷ ತಂತ್ರಗಳಿಂದ ಪ್ರೇಕ್ಷಕರನ್ನು ಆಕರ್ಷಿಸಲಿದೆ.

  ನೀನಾಸಂನ ಭುವನ್ ಮಣಿಪಾಲ್ ಮತ್ತು ಉಜ್ವಲ್ ತಮ್ಮ ತಂಡದೊಂದಿಗೆ ಅಭಿನಯಿಸಲಿದ್ದಾರೆ ಎಂದು ಕಲಾಭಿ ಸಂಸ್ಥೆಯ ಗೌರವಾಧ್ಯಕ್ಷ ಸುರೇಶ್ ಬಿ. ವರ್ಕಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  

Leave a comment

Your email address will not be published. Required fields are marked *

eMedia Kannada  @2025. All Rights Reserved.