ಜೇಸಿಐ ಪಡುಬಿದ್ರಿಯ 50ನೇ ವರ್ಷದ ಪದ ಪ್ರದಾನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ

(padubidri) ಪಡುಬಿದ್ರಿ: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಸಹಕಾರ ಸಂಗಮ ಸಭಾಂಗಣದಲ್ಲಿ ನಡೆದ ಜೇಸಿಐ ಪಡುಬಿದ್ರಿಯ ೫೦ನೇ ವರ್ಷದ ಪದ ಪ್ರದಾನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.
ಜೇಸಿಐ ರಾಷ್ಟ್ರೀಯ ತರಬೇತುದಾರ ಕೆ. ರಾಜೇಂದ್ರ ಭಟ್ (Rajendra Bhat) ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಅವರು ಈ ಸಂದರ್ಭ ಮಾತನಾಡಿ, ವ್ಯಕ್ತಿತ್ವ ವಿಕಸನದ ಮೂಲಕ ಆರ್ಥಿಕ ಸಬಲೀಕರಣ ಸಾಧ್ಯವಿದೆ. ಯುವ ಜನರು ವಿವಿಧ ವ್ಯಕ್ತಿತ್ವ ವಿಕಸನ ತರಬೇತಿಗಳ ಮೂಲಕ ಸಬಲರಾಗಬಹುದು. ಜೇಸಿಐಯಂತಹ ಸಂಸ್ಥೆಗಳು ವಿವಿಧ ವ್ಯಕ್ತಿತ್ವ ವಿಕಸನ ತರಬೇತಿಗಳ ಮೂಲಕ ಯುವ ಸಮುದಾಯದ ಮನಗೆದ್ದಿದೆ ಎಂದು ಹೇಳಿದರು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷ ವೈ. ಸುಧೀರ್ ಕುಮಾರ್ (Padubidri Sahakari society’s President Y Sudheer Kumar) ಮತ್ತು ಜೇಸಿಐ ವಲಯ 15ರ ವಲಯ ಉಪಾಧ್ಯಕ್ಷ ವಿಘ್ನೇಶ್ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಪದ ಪ್ರದಾನ: ನಿರ್ಗಮನ ಅಧ್ಯಕ್ಷೆ ಯಶೋದಾರವರು ಜೇಸಿಐ ಪಡುಬಿದ್ರಿಯ 50ನೇ ಅಧ್ಯಕ್ಷ ಸಂಜೀತ್ ಎಸ್.ಎರ್ಮಾಳ್‌ರವರಿಗೆ ಪ್ರಮಾಣ ವಚನ ಬೋಧಿಸಿ ಅಧಿಕಾರ ಹಸ್ತಾಂತರಿಸಿದರು.
ನೂತನ ಪದಾಧಿಕಾರಿಗಳಿಗೆ ಸಂಜೀತ್ ಎಸ್. ಎರ್ಮಾಳ್ ಪ್ರಮಾಣ ವಚನ ಬೋಧಿಸಿ ಮಾತನಾಡಿ, 50 ವರ್ಷಗಳ ಇತಿಹಾಸದ ಜೇಸಿಐ ಪಡುಬಿದ್ರಿಯ ಪ್ರತಿಷ್ಠೆಗೆ ಪೂರಕವಾಗಿ ಕಾರ್ಯನಿರ್ವಹಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಸನ್ಮಾನ: ಸಾಧಕರಾದ ರಂಗ ಕಲಾವಿದ ಹರೀಶ್ ಪಡುಬಿದ್ರಿ ಮತ್ತು ಅಂಗನವಾಡಿ ಕಾರ್ಯಕರ್ತೆ ಅನಿತಾರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಜೇಸಿಐ ಪಡುಬಿದ್ರಿಗೆ ಸೇರ್ಪಡೆಯಾದ ನಾಲ್ವರು ಸದಸ್ಯರಿಗೆ ರಾಜೇಂದ್ರ ಭಟ್ ಪ್ರಮಾಣವಚನ ಬೋಧಿಸಿ ಶುಭ ಹಾರೈಸಿದರು.
ನಿರ್ಗಮನ ಕಾರ್ಯದರ್ಶಿ ಅಶ್ವಿನಿ ಪ್ರದೀಪ್, ನಿರ್ಗಮನ ಜೆಜೆಸಿ ಅಧ್ಯಕ್ಷೆ ವೈಷ್ಣವಿ ಶರ್ಮ, ಮಹಿಳಾ ಜೆಸಿ ಕೋರ್ಡಿನೇಟರ್ ಹರ್ಷಿತಾ ಮಕರಂದ್, ಜೆಜೆಸಿ ಅಧ್ಯಕ್ಷ ದರ್ಶನ್ ಪಿ. ಕುಮಾರ್ ಉಪಸ್ಥಿತರಿದ್ದರು.
ಯಶೋದಾ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಪೂರ್ವಾಧ್ಯಕ್ಷ ಜಯ ಶೆಟ್ಟಿ ಪದ್ರ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಮನು ಉದಯ ಶೆಟ್ಟಿ ವಂದಿಸಿದರು.

