• Home  
  • ಜ. 23 : ಮುರಳಿ ಕಡೆಕಾರ್ ರವರಿಗೆ ಶಾರದಾಕೃಷ್ಣ ಪ್ರಶಸ್ತಿ-2027 (Jan 23: Sharadakrishna Award 2027 for Murali Kadekar)
- ಸನ್ಮಾನ, ಅಭಿನಂದನೆ

ಜ. 23 : ಮುರಳಿ ಕಡೆಕಾರ್ ರವರಿಗೆ ಶಾರದಾಕೃಷ್ಣ ಪ್ರಶಸ್ತಿ-2027 (Jan 23: Sharadakrishna Award 2027 for Murali Kadekar)

Share: ಜ. 23 : ಮುರಳಿ ಕಡೆಕಾರ್ ರವರಿಗೆ ಶಾರದಾಕೃಷ್ಣ ಪ್ರಶಸ್ತಿ-2027   ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮ (Udupi) ಉಡುಪಿ : ಹೆಬ್ರಿಯ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ನೀಡುವ ‘ಶಾರದಾಕೃಷ್ಣ’ಪ್ರಶಸ್ತಿಗೆ ಈ ಬಾರಿ ಶಿಕ್ಷಕ, ಸಂಘಟಕ, ಕಲಾವಿದ ಉಡುಪಿಯ ಮುರಳಿ ಕಡೆಕಾರ್  ಆಯ್ಕೆಯಾಗಿದ್ದಾರೆ.   ಜ. 23ರಂದು ಸಂಜೆ 5 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯುವ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ […]

(Udupi) ಉಡುಪಿ : ಹೆಬ್ರಿಯ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ನೀಡುವ ‘ಶಾರದಾಕೃಷ್ಣ’ಪ್ರಶಸ್ತಿಗೆ ಈ ಬಾರಿ ಶಿಕ್ಷಕ, ಸಂಘಟಕ, ಕಲಾವಿದ ಉಡುಪಿಯ ಮುರಳಿ ಕಡೆಕಾರ್  ಆಯ್ಕೆಯಾಗಿದ್ದಾರೆ.

  ಜ. 23ರಂದು ಸಂಜೆ 5 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯುವ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

  ಪ್ರಶಸ್ತಿ ಪತ್ರ, ಫಲಕ ಹಾಗೂ 50 ಸಾವಿರ ಗೌರವಧನ ಒಳಗೊಂಡಿದೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  ಇದೇ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ಉಡುಪಿ ವಿಶ್ವನಾಥ ಶೆಣೈ ಅಧ್ಯಕ್ಷರಾದ ಪ್ರೊ. ಶಂಕರ್, ಉಪಾಧ್ಯಕ್ಷರಾದ ಡಾ. ಭಾರ್ಗವಿ ಐತಾಳ್, ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರಾದ ವಾಸುದೇವ ಅಡಿಗ  ಉಪಸ್ಥಿತರಿದ್ದರು.

   ಬೆಳಕು ಹಂಚುವ ಬದುಕು : ಮುರುಳಿ ಕಡೆಕಾರ್

 ಮುರಳಿ ಕಡೆಕಾರ್ ಅವರು 17-10-1960ರಂದು ಜನಿಸಿದರು. ತಂದೆ ಕೆ. ನಾರಾಯಣ ಭಟ್, ತಾಯಿ ವನಜಾಕ್ಷಿ. ಐದು ಪುತ್ರಿಯರು ಮತ್ತು ಆರು ಪುತ್ರರು ಇರುವ ದೊಡ್ಡ ಕುಟುಂಬದಲ್ಲಿ ಬೆಳೆದ ಅವರು, ಕಡೆಕಾರಿನ ಶ್ರೀ ಮಹಾಗಣಪತಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದರು. ನಂತರ ಕಿದಿಯೂರಿನ ಎಸ್.ವಿ.ಎಸ್. ಶಾಲೆ, ಪೂರ್ಣಪ್ರಜ್ಞ ಕಾಲೇಜು ಉಡುಪಿ ಮತ್ತು ಡಾ. ಟಿ.ಎಂ.ಎ. ಪೈ ಕಾಲೇಜ್ ಆಫ್ ಎಜುಕೇಶನ್ ಉಡುಪಿಯಲ್ಲಿ B.Sc, B.Ed ಪದವಿ ಪಡೆದರು. ಪತ್ನಿ ವಿನೋದ ಎಂ. ಅವರು ಬೀಜಾಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ. ಪುತ್ರಿ ವಲ್ಲರಿ M.Com, ಪುತ್ರ ಸನಕ BE ಪದವೀಧರರು.

  ನಿಟ್ಟೂರು ಪ್ರೌಢ ಶಾಲೆಯಲ್ಲಿ 32 ವರ್ಷ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ, 5 ವರ್ಷ ಮುಖ್ಯ ಶಿಕ್ಷಕರಾಗಿ ಒಟ್ಟು 37 ವರ್ಷ ಸೇವೆ ಸಲ್ಲಿಸಿದ್ದರು.

   2000ರಲ್ಲಿ ಸರ್ಕಾರಿ ಅನುದಾನವಿಲ್ಲದೆ 6 ವರ್ಷ ನಿರಂತರವಾಗಿ ಗಂಜಿ ಊಟ ಆರಂಭಿಸಿದರು. 2006ರಿಂದ ‘ಮನೆ ಬೆಳಕು’ಯೋಜನೆಯಡಿ ವಿದ್ಯುತ್ ಇಲ್ಲದ 120ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಮತ್ತು ಸೋಲಾರ್ ಸೌಲಭ್ಯ ನೀಡಿದರು. 1991ರಿಂದ 30 ವರ್ಷ ಸಂಚಾಯಿಕಾ ಬ್ಯಾಂಕ್ ನಡೆಸಿ, ಅದರ ಲಾಭಾಂಶದಿಂದಲೇ ಗಂಜಿ ಊಟ ಮತ್ತು ಮನೆ ಬೆಳಕು ಯೋಜನೆಗೆ ನೆರವು ನೀಡಿದರು. 2014ರಿಂದ 90 ವಿದ್ಯಾರ್ಥಿಗಳಿಗೆ L.P.G. ಸೌಲಭ್ಯ, 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 5 ಲೀಟರ್ ಕುಕ್ಕರ್ ನೀಡಿದರು. ವಿದ್ಯಾರ್ಥಿಗಳ ವೈದ್ಯಕೀಯ ವೆಚ್ಚವನ್ನೂ ಭರಿಸಿದರು.

     ಯಕ್ಷಗಾನ ಕ್ಷೇತ್ರದಲ್ಲಿ ಅವರು 1990ರಿಂದ ಯಕ್ಷಗಾನ ಕಲಾರಂಗ (ರಿ.), ಉಡುಪಿಯ ಕಾರ್ಯದರ್ಶಿ. ಕಲಾವಿದರಿಗೆ ತಲಾ 20,000 ರೂಪಾಯಿಯ 27 ಪ್ರಶಸ್ತಿಗಳು, ವಿದ್ವಾಂಸರಿಗೆ 60,000 ರೂಪಾಯಿಯ ತಲ್ಲೂರು ಕನಕ-ಅಣ್ಣಯ್ಯ ಶೆಟ್ಟಿ ಪ್ರಶಸ್ತಿ, ಸಂಸ್ಥೆಗಳಿಗೆ 1 ಲಕ್ಷ ರೂಪಾಯಿಯ ಶ್ರೀ ವಿಶ್ವೇಶ ಪ್ರಶಸ್ತಿ ಆರಂಭಿಸಿದರು. 45 ವರ್ಷಗಳಿಂದ ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯಲ್ಲಿ ವೇಷಧಾರಿ, ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2004ರಲ್ಲಿ ಅಮೇರಿಕಾದ ‘ಅಕ್ಕ” ಸಮ್ಮೇಳನದಲ್ಲಿ 11 ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದರು.

  ಪಬ್ಲಿಕ್ ಹೀರೋ,

 ಡೆಕ್ಕನ್ ಹೆರಾಲ್ಡ್‌ನ The Change Maker 2021, ಅಳ್ವಾಸ್ ವಿದ್ಯಾಸಿರಿ ಗೌರವ ಅವರಿಗೆ ಸಂದಿದೆ. ಇನ್ಫೋಸಿಸ್ ಫೌಂಡೇಶನ್ ಕಲಾರಂಗಕ್ಕೆ 15.8 ಕೋಟಿ ರೂಪಾಯಿ ವೆಚ್ಚದ ಸೌಧ ನಿರ್ಮಿಸಿಕೊಟ್ಟಿದೆ. 1000ಕ್ಕೂ ಹೆಚ್ಚು ಎಕರೆ ಹಡಿಲು ಭೂಮಿಯ ಬೇಸಾಯದಲ್ಲಿ ‘ಕೇದಾರೋತ್ಥಾನ ಟ್ರಸ್ಟ್’ ಕಾರ್ಯದರ್ಶಿಯಾಗಿ ಅವರು ಕೆಲಸ ಮಾಡುತ್ತಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.