ಟೀಮ್ ನೇಷನ್ ಫಸ್ಟ್ ವತಿಯಿಂದ ರಕ್ತದಾನ ಶಿಬಿರ ಆಯೋಜನೆ
(Udupi) ಉಡುಪಿ: ಟೀಮ್ ನೇಷನ್ ಫಸ್ಟ್(ರಿ) ಇದರ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವು ಅಜ್ಜರಕಾಡಿನ ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಯಶಸ್ವಿಯಾಗಿ ನೆರವೇರಿತು.
ಉಡುಪಿ ಶಾಸಕ ಯಶಪಾಲ್ ಎ ಸುವರ್ಣರವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಟೀಮ್ ನೇಷನ್ ಫಸ್ಟ್ ನ ಅಧ್ಯಕ್ಷರಾದ ಸೂರಜ್ ಕಿದಿಯೂರ್ ಮಾತನಾಡಿ, ರಕ್ತದಾನ ಮಹಾದಾನ, ಚಿಕಿತ್ಸೆಯ ಮೂಲಕ ವೈದ್ಯರು ರೋಗಿಯನ್ನು ಗುಣಪಡಿಸಬಹುದು. ಆದರೆ ಒಬ್ಬ ಸಾಮಾನ್ಯ ಮನುಷ್ಯ ರಕ್ತದಾನದ ಮೂಲಕ ಒಬ್ಬರ ಜೀವವನ್ನು ಉಳಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಂಡದ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದುಕೊಂಡು ಅಗ್ನಿವೀರ್ ಯೋಜನೆಯ ಮೂಲಕ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಶಮಂತ್ ಕೆ ಸುಳ್ಯ ಇವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಡಾ. ರಾಜೇಂದ್ರ ಕೆ, ಡಾ. ರಾಮಚಂದ್ರ ಪಾಟ್ಕರ್, ತಂಡದ ಉಪಾಧ್ಯಕ್ಷರಾದ ಡಾ. ಅತುಲ್, ಡಾ. ದೀಪ್, ತಂಡದ ಕಾರ್ಯದರ್ಶಿ ಸಾತ್ವಿಕ್ ಗಡಿಯಾರ್, ಸದಸ್ಯರಾದ ಸಂತೋಷ್ ಕರ್ಕೇರ, ಪೂಜಾ, ಸೂರಜ್ ಉಪಸ್ಥಿತರಿದ್ದರು.

