ಟೋಲ್ ದರದಲ್ಲಿ ಹೆಚ್ಚಳ: ಸದ್ಯಕ್ಕಿಲ್ಲ ಹೊಸ ದರ,ಹೆಚ್ಚಳಕ್ಕೆ ಚುನಾವಣಾ ಆಯೋಗ ಬ್ರೇಕ್ Increase in toll rate: No new rate yet, Election Commission breaks for increase)
(Hejamaḑ̧y, Sasthana) ಹೆಜಮಾಡಿ\ಸಾಸ್ತಾನ: ಪ್ರತಿ ವರ್ಷ ಮಾರ್ಚ್ ಅಂತ್ಯಕ್ಕೆ ದೇಶಾದ್ಯಂತ ಟೋಲ್ ಶುಲ್ಕ ಪರಿಷ್ಕರಣೆಯಾ ಗುತ್ತಿದ್ದು ಅದರಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಟೋಲ್‌ಗಳಲ್ಲಿ ಟೋಲ್ ದರದಲ್ಲಿ ಹೆಚ್ಚಳವಾಗಿದೆ. ಆದರೆ ಚುನಾವಣೆ ಹಿನ್ನೆಲೆಯಲ್ಲಿ ಹೊಸ ದರ ವಸೂಲಾತಿಗೆ ಚುನಾವಣಾ ಆಯೋಗ ಬ್ರೇಕ್ ಹಾಕಿದೆ.
ಹೊಸ ದರದಂತೆ ಸಾಸ್ತಾನ ಟೋಲ್‌ನಲ್ಲಿ ಕಾರು, ಜೀಪ್, ಲೈಟ್ ಮೋಟಾರ್ ವಾಹನಗಳಿಗೆ ಒಮ್ಮೆ ಸಂಚಾರಕ್ಕೆ 60 ರೂ., ದ್ವಿ ಸಂಚಾರಕ್ಕೆ 90ರೂ. ಮಾಸಿಕ ಪಾಸ್‌ಗಳಿಗೆ 1980ರೂ ಹೆಚ್ಚಳವಾಗಿದೆ. ಕಾರು ಜೀಪ್‌ಗಳ ಒಮ್ಮೆ ಸಂಚಾರಕ್ಕೆ ಈ ಹಿಂದೆ ಇದ್ದ ಬೆಲೆಯೇ ಮುಂದುವರಿದಿದ್ದು, ದ್ವಿಸಂಚಾರಕ್ಕೆ ಮಾತ್ರ 5ರೂ.. ಮಾಸಿಕ ಪಾಸ್‌ನಲ್ಲಿ 50ರೂ. ಹೆಚ್ಚಳವಾಗಿದೆ.
ಮಿನಿ ಬಸ್, ಮಿನಿ ಲಾರಿ ಮುಂತಾದ ವಾಹನಗಳಿಗೆ ಒಮ್ಮೆ ಸಂಚಾರಕ್ಕೆ 95ರೂ., ದ್ವಿಸಂಚಾರಕ್ಕೆ 145 ರೂ., ಮಾಸಿಕ ಪಾಸ್ 3200ರೂ. ಹೆಚ್ಚಾಗಿದೆ. ಇದರಲ್ಲಿ ಒಮ್ಮೆ ಸಂಚಾರಕ್ಕೆ ದರ ಹಿಂದಿನಂತೆ ಇದ್ದು ದ್ವಿಸಂಚಾರಕ್ಕೆ 5ರೂ. ಹಾಗೂ ಮಾಸಿಕ ಪಾಸ್ *ಗೆ 80ರೂ. ಹೆಚ್ಚಳವಾಗಿದೆ.
ಘನ ವಾಹನಗಳಿಗೆ ಏಕಮುಖಕ್ಕೆ 200ರೂ., ದ್ವಿಸಂಚಾರಕ್ಕೆ 300 ರೂ., ಮಾಸಿಕ ಪಾಸ್ 6705ರೂ. ಆಗಿದ್ದು, ಇದರಲ್ಲಿ ಒಮ್ಮೆ ಸಂಚಾರ, ದ್ವಿಸಂಚಾರಕ್ಕೆ 5ರೂ., ಮಾಸಿಕ ಪಾಸ್‌ಗೆ 165 ರೂ. ಹೆಚ್ಚಳ ವಾಗಿದೆ.
ಬೃಹತ್ ವಾಹನಗಳಿಗೆ ಒಮ್ಮೆ ಸಂಚಾರಕ್ಕೆ 315ರೂ.: ದ್ವಿಸಂಚಾರಕ್ಕೆ 475ರೂ., ಮಾಸಿಕ ಪಾಸ್ 10,515ರೂ. ಹೆಚ್ಚಿಸಲಾಗಿದ್ದು, ಇದರಲ್ಲಿ ಕ್ರಮವಾಗಿ 5, 15, 260ರೂ. ಹೆಚ್ಚಾಗಿದೆ. ಅಧಿಕ ಭಾರದ ಘನ ವಾಹನಗಳಿಗೆ ಒಮ್ಮೆ ಸಂಚಾರಕ್ಕೆ 385 ರೂ., ದ್ವಿ ಸಂಚಾರಕ್ಕೆ 575, ಮಾಸಿಕ ಪಾಸ್ 12,805 ನಿಗದಿಪಡಿಸಲಾ ಗಿದ್ದು, ಇದರಲ್ಲಿ ಹತ್ತು, ಹದಿನೈದು, 320ರೂ.ಹೆಚ್ಚಳವಾಗಿದೆ.
ಹೆಜಮಾಡಿ ಟೋಲ್‌ನಲ್ಲಿ ಕಾರು, ಜೀಪ್, ವ್ಯಾನ್ ಹಾಗೂ ಲೈಟ್ ಮೋಟಾರ್ ವಾಹನ ಗಳಿಗೆ ಏಕಮುಖಕ್ಕೆ 50 ರೂ., ದ್ವಿಮುಖ ಸಂಚಾರಕ್ಕೆ 75ರೂ. ಮಾಸಿಕ ಪಾಸ್ ಗಳಿಗೆ 1675ರೂ. ಪಾವತಿ ಯಾಗುತ್ತಿದ್ದು, ಈ ಹಿಂದಿನ ದರದಲ್ಲಿ ಮಾಸಿಕ ಪಾಸ್‌ನಲ್ಲಿ ಮಾತ್ರ 35ರೂ. ಹೆಚ್ಚಳವಾಗಿದೆ.
ಮಿನಿ ಬಸ್, ಮಿನಿ ಲಾರಿ ಮುಂತಾದ ವಾಹನಗಳಿಗೆ ಒಮ್ಮೆ ಸಂಚಾರಕ್ಕೆ 80ರೂ., ದ್ವಿಮುಖ ಸಂಚಾರಕ್ಕೆ 120ರೂ., ಮಾಸಿಕ ಪಾಸ್ 2705ರೂ. ಪಾವತಿಸಬೇಕಿದ್ದು, ಇದರಲ್ಲಿ ಕೂಡ ಮಾಸಿಕ ಪಾಸ್‌ನಲ್ಲಿ ಮಾತ್ರ 50ರೂ. ಹೆಚ್ಚಳವಾಗಿದೆ.
ಘನ ವಾಹನಗಳಿಗೆ ಏಕಮುಖಕ್ಕೆ 170ರೂ., ದ್ವಿಮುಖ ಸಂಚಾರಕ್ಕೆ 255ರೂ. ಮಾಸಿಕ ಪಾಸ್ 5665ರೂ. ಆಗಲಿದ್ದು, ಈ ಹಿಂದಿನ ದರದಲ್ಲಿ ತಲಾ 5 ರೂ. ಹಾಗೂ ಮಾಸಿಕ ಪಾಸ್‌ಗೆ 105ರೂ. ಹೆಚ್ಚಳವಾಗಿದೆ. ಬೃಹತ್ ವಾಹಗಳಿಗೆ ಒಮ್ಮೆ ಸಂಚಾರಕ್ಕೆ 265ರೂ., ದ್ವಿಮುಖ 400ರೂ., ಮಾಸಿಕ ಪಾಸ್ 8,885 ರೂ. ನಿಗದಿಪಡಿಸ ಲಾಗಿದೆ. ಇದರಲ್ಲೂ ಕೂಡ ತಲಾ ಐದು, ಹತ್ತು, 65ರೂ. ಹೆಚ್ಚಳವಾಗಿದೆ. ಅಧಿಕ ಭಾರದ ಘನವಾಹಗಳಿಗೆ ಒಮ್ಮೆ ಸಂಚಾರಕ್ಕೆ 325 ರೂ., ದ್ವಿಮುಖ 485, ಮಾಸಿಕ ಪಾಸ್ 10,820 ನಿಗದಿಪಡಿಸ ಲಾಗಿದೆ. ಇದರಲ್ಲಿ ಮಾಸಿಕ ಪಾಸ್‌ಗೆ 205 ರೂ. ಇತರ ಐದು ರೂ. ಎರಿಕೆಯಾಗಿದೆ.
ತಲಪಾಡಿ: ಟೋಲ್‌ನಲ್ಲಿ ಕಾರು, ಜೀಪ್, ವ್ಯಾನ್ ಹಾಗೂ ಲೈಟ್ ಮೋಟಾರ್ ವಾಹನಗಳಿಗೆ ಒಮ್ಮೆ ಸಂಚಾರಕ್ಕೆ 55 ರೂ., ದ್ವಿಮುಖ ಸಂಚಾರಕ್ಕೆ 80ರೂ. ಮಾಸಿಕ ಪಾಸ್‌ಗಳಿಗೆ 1760ರೂ. ಪಾವತಿ ಯಾಗು ಟಿ. ತ್ತಿದ್ದು, ಈ ಹಿಂದಿನ ದರಲ್ಲಿ ಮಾಸಿಕ ಪಾಸ್‌ಗೆ 40ರೂ. ಇತರ 5 ರೂ. ಏರಿಕೆಯಾಗಿದೆ. ಸಂ ಮಿನಿ ಬಸ್, ಮಿನಿ ಲಾರಿ ಮುಂತಾದ ವಾಹನಗಳಿಗೆ ಏಕಮುಖಕ್ಕೆ 80ರೂ., ದ್ವಿಮುಖ ಸಂಚಾರಕ್ಕೆ 125ರೂ. ಮಾಸಿಕ ಪಾಸ್ 2725ರೂ. ಪಾವತಿಸಬೇಕಿದ್ದು, ಮಾಸಿಕ ಪಾಸ್ 70ರೂ., ದ್ವಿಸಂಚಾರಕ್ಕೆ ಐದು ರೂ. ಹೆಚ್ಚಿದೆ. ಘನ ವಾಹನಗಳಿಗೆ ಒಮ್ಮೆ ಸಂಚಾರಕ್ಕೆ 165ರೂ., ದ್ವಿಮುಖ ಸಂಚಾರಕ್ಕೆ 250ರೂ. ಮಾಸಿಕ ಪಾಸ್ 5555 ರೂ. ಆಗ ಲಿದ್ದು ಮಾಸಿಕ ಪಾಸ್‌ಗೆ 135 ರೂ., ದ್ವಿಸಂಚಾರಕ್ಕೆ 5 ರೂ. ಹೆಚ್ಚಳ ವಾಗಿದೆ. ಬೃಹತ್ ವಾಹನಗಳಿಗೆ ಒಮ್ಮೆ ಸಂಚಾರಕ್ಕೆ 255ರೂ., ದ್ವಿಮುಖ 380ರೂ.. ಮಾಸಿಕ ಪಾಸ್ 8,460ರೂ. ನಿಗದಿಪಡಿಸ ಲಾಗಿದ್ದು, ಒಮ್ಮೆ ಸಂಚಾರಕ್ಕೆ 5 ರೂ., ದ್ವಿಸಂಚಾರಕ್ಕೆ 10 ರೂ., ಮಾಸಿಕ ಪಾಸ್ 210ರೂ. ಏರಿಕೆ ಯಾಗಿದೆ. ಅಧಿಕ ಭಾರದ ಘನವಾಹನಗಳಿಗೆ ಒಮ್ಮೆ ಸಂಚಾರಕ್ಕೆ 3250.. 490ರೂ., ಮಾಸಿಕ ಪಾಸ್ 10,895 ರೂ. ನಿಗದಿಪಡಿಸಲಾಗಿದ್ದು, ಕ್ರಮವಾಗಿ 5, 10, 170ರೂ. ಹೆಚ್ಚಳವಾಗಿದೆ.

