ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಯೋಗ ಮತ್ತು ರೆಡ್ ಕ್ರಾಸ್ ಮಾಹಿತಿ ಕಾರ್ಯಕ್ರಮ
ಸಮರ್ಪಕ ಮಾಹಿತಿ ನೀಡಿದ ಯೋಗ ಶಿಕ್ಷಕಿ ಶೀಮತಿ ಶೋಭಾ ಶೆಟ್ಟಿ
(Udupi) ಉಡುಪಿ: ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಯೋಗ ಮತ್ತು ರೆಡ್ ಕ್ರಾಸ್ ಗೆ ಸಂಬಂಧಿಸಿದ ಕಾರ್ಯಕ್ರಮ ನರವೇರಿತು.
ಹಿರೇ ಬೆಟ್ಟು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಯೋಗ ಶಿಕ್ಷಕಿ ಶೀಮತಿ ಶೋಭಾ ಶೆಟ್ಟಿಯವರು ಮಾಹಿತಿ ನೀಡಿದರು.
ಅವರು ವಿದ್ಯಾರ್ಥಿ- ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿ, ಯೋಗ ಕೇವಲ ವಾರ್ಷಿಕ ದಿನಾಚರಣೆ ಆಗದೆ, ನಿತ್ಯ ಜೀವನ ಪದ್ಧತಿ ಯಾಗಬೇಕು. ಶಾಲೆಗಳಲ್ಲಿ ನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ಒಟ್ಟು ವಾತಾವರಣ ಧನಾತ್ಮಕ ವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲೆ ಶ್ರೀಮತಿ ಧನಲಕ್ಷ್ಮಿಯವರು ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯು ನೊಂದ ಜಗದ ಜನರ ಜೀವನವನ್ನು ಹಸನುಗೊಳಿಸಿದೆ. ವಿದ್ಯಾರ್ಥಿ- ಶಿಕ್ಷಕರು ಯೋಗ ಮತ್ತು ರೆಡ್ ಕ್ರಾಸ್ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕು ಎಂದರು.
ಈ ಸಂದರ್ಭ ಅರುಂಧತಿ, ಚೈತ್ರಾ ಎಂ, ಭಾಗ್ಯಲಕ್ಷ್ಮೀ, ಚೈತ್ರಾ ಕೆಸಿ ಹಾಗೂ ತಂಡದವರು ರೆಡ್ ಕ್ರಾಸ್ ಮತ್ತು ಯೋಗಾಭ್ಯಾಸಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಿಕೊಟ್ಟರು.
ರೀಮಾ ರಚನಾ ಸಲ್ದಾನ ಸ್ವಾಗತಿಸಿದರು. ಸೌಜನ್ಯ ಮತ್ತು ಫಾತಿಮಾತ್ ಜಹೀರ ಕಾರ್ಯಕ್ರಮ ನಿರೂಪಿಸಿದರು. ದೀಪಕ್ ಧನುಷಾ ಪೂಜಾರಿ ವಂದಿಸಿದರು.

