• Home  
  • ಡಿ. 20 : ವಿಶ್ವ ದೇವಾಡಿಗ ಮಹಾಮಂಡಳ ಆಯೋಜನೆಯಲ್ಲಿ ಮಹಾಅಧಿವೇಶನ (Dec. 20: General Conference organized by the World Devadiga Mahamandal)
- ಸಂಘ, ಸಂಸ್ಥೆಗಳು

ಡಿ. 20 : ವಿಶ್ವ ದೇವಾಡಿಗ ಮಹಾಮಂಡಳ ಆಯೋಜನೆಯಲ್ಲಿ ಮಹಾಅಧಿವೇಶನ (Dec. 20: General Conference organized by the World Devadiga Mahamandal)

Share: ಡಿ. 20 : ವಿಶ್ವ ದೇವಾಡಿಗ ಮಹಾಮಂಡಳ ಆಯೋಜನೆಯಲ್ಲಿ ಮಹಾಅಧಿವೇಶನ ಮಂಗಳೂರು, ಕಾಟಿಪಳ್ಳ, ಸುರತ್ಕಲ್, ಬಂಟ್ವಾಳ, ಕಣ್ವತೀರ್ಥ, ವಿಟ್ಲ, ಕಾರಿಂಜೆ ಚಿತ್ರಾಪುರದಲ್ಲಿ ಪೂರ್ವಬಾವಿ ಸಭೆ (Mangaluru) ಮಂಗಳೂರು : ವಿಶ್ವ ದೇವಾಡಿಗ ಮಹಾಮಂಡಳದ ಆಶ್ರಯದಲ್ಲಿ ಡಿಸೆಂಬರ್‌ 20  ರಂದು ಉಡುಪಿಯ ಚಿತ್ಪಾಡಿ ಬಯಲು ರಂಗವೇದಿಕೆಯಲ್ಲಿ ನಡೆಯಲಿರುವ ಮಹಾ ಅಧಿವೇಶನದ ಪೂರ್ವಬಾವಿ ಸಭೆಯು ಮಂಗಳೂರು, ಕಾಟಿಪಳ್ಳ, ಸುರತ್ಕಲ್, ಬಂಟ್ವಾಳ, ಕಣ್ವತೀರ್ಥ, ವಿಟ್ಲ, ಕಾರಿಂಜೆ ಚಿತ್ರಾಪುರ ವ್ಯಾಪ್ತಿಯ ದೇವಾಡಿಗ ಸಂಘಗಳ ಸಭೆಯು ಮಂಗಳೂರಿನ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ […]

(Mangaluru) ಮಂಗಳೂರು : ವಿಶ್ವ ದೇವಾಡಿಗ ಮಹಾಮಂಡಳದ ಆಶ್ರಯದಲ್ಲಿ ಡಿಸೆಂಬರ್‌ 20  ರಂದು ಉಡುಪಿಯ ಚಿತ್ಪಾಡಿ ಬಯಲು ರಂಗವೇದಿಕೆಯಲ್ಲಿ ನಡೆಯಲಿರುವ ಮಹಾ ಅಧಿವೇಶನದ ಪೂರ್ವಬಾವಿ ಸಭೆಯು ಮಂಗಳೂರು, ಕಾಟಿಪಳ್ಳ, ಸುರತ್ಕಲ್, ಬಂಟ್ವಾಳ, ಕಣ್ವತೀರ್ಥ, ವಿಟ್ಲ, ಕಾರಿಂಜೆ ಚಿತ್ರಾಪುರ ವ್ಯಾಪ್ತಿಯ ದೇವಾಡಿಗ ಸಂಘಗಳ ಸಭೆಯು ಮಂಗಳೂರಿನ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ  ಸಭಾಭವನದಲ್ಲಿ ನಡೆಯಿತು.

ವಿಶ್ವ ಮಹಾ ಮಂಡಳದ ಅಧ್ಯಕ್ಷರಾದ ಧರ್ಮಪಾಲ್ ಯು ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.

 ಈ ಸಂದರ್ಭ ಅವರು ಮಾತನಾಡಿ, ನಮ್ಮ ಬೇಡಿಕೆಗಳು ಸರಕಾರದ ಮಟ್ಟಕ್ಕೆ ಮುಟ್ಟಲು ಈ ಮಹಾ ಅಧಿವೇಶನ ಅಗತ್ಯವಾಗಿದೆ. ಎಲ್ಲರೂ ಈ ಮಹಾ ಆಧಿವೇಶನದಲ್ಲಿ ಸಹಕರಿಸುವಂತೆ ಮನವಿ ಮಾಡಿದರು.

  ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ್, ಕಾರ್ಯದರ್ಶಿ ಯಾದವ ದೇವಾಡಿಗ, ಮುಂಬೈ ಸಂಘದ ಅಧ್ಯಕ್ಷ ರವಿ ಎಸ್ ದೇವಾಡಿಗ, ವಿಶ್ವ ಮಹಾ ಮಂಡಳದ ಉಪಾಧ್ಯಕ್ಷ ಡಾ. ದೇವರಾಜ್ ಕೆ., ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಉಪಾಧ್ಯಕ್ಷ ಯಂ. ಎಚ್. ಕರುಣಾಕರ ದೇವಾಡಿಗ, ಮಹಾ ಮಂಡಳದ   ಪ್ರದಾನ ಕಾರ್ಯದರ್ಶಿ ಗಣೇಶ್ ಅಂಬಲಪಾಡಿ,  ಸಂಘಟನಾ ಕಾರ್ಯದರ್ಶಿ ಜನಾರ್ದನ ಪಡುಪಣಂಬೂರು, ಉಡುಪಿ ನಗರಪಾಲಿಕೆ ಮಾಜಿ ಸದಸ್ಯ  ವಿಜಯ ಕೊಡವೂರು,  ಸಂಘಟನಾ ಕಾರ್ಯದರ್ಶಿ  ಚೆನ್ನಪ್ಪ ಮೊಯಿಲಿ, ಕೋಶಾಧಿಕಾರಿ ಸುರೇಶ ಕೊಡವೂರು ಉಪಸ್ಥಿತರಿದ್ದರು.

  ಶ್ರೀಮತಿ ವೀಣಾ ಸ್ವಾಗತಿಸಿದರು. ರೋಹಿತಾಕ್ಷ ದೇವಾಡಿಗ  ವಂದಿಸಿದರು.   ಶ್ರೀಮತಿ ಯಶ್ವಿತಾ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.