• Home  
  •  ಡ್ರಗ್ಸ್ ದಂಧೆ ಮತ್ತು ಭೂಗತಪಾತಕಿಗಳ ಬೆದರಿಕೆಗೆ ಕಡಿವಾಣ ಹಾಕಿ : ದೇವಿಪ್ರಸಾದ್ ಶೆಟ್ಟಿ ಬೆಳಪು (Curb the drug trade and threats from the underworld: Deviprasad Shetty Belapu)
- PROBLEMS - ಅಪರಾಧ

 ಡ್ರಗ್ಸ್ ದಂಧೆ ಮತ್ತು ಭೂಗತಪಾತಕಿಗಳ ಬೆದರಿಕೆಗೆ ಕಡಿವಾಣ ಹಾಕಿ : ದೇವಿಪ್ರಸಾದ್ ಶೆಟ್ಟಿ ಬೆಳಪು (Curb the drug trade and threats from the underworld: Deviprasad Shetty Belapu)

Share: ಡ್ರಗ್ಸ್ ದಂಧೆ ಮತ್ತು ಭೂಗತಪಾತಕಿಗಳ ಬೆದರಿಕೆಗೆ ಕಡಿವಾಣ ಹಾಕಿ : ದೇವಿಪ್ರಸಾದ್ ಶೆಟ್ಟಿ ಬೆಳಪು ಭೂಗತ ಪಾತಕಿಗಳನ್ನು ಸರಕಾರನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಬೇಕೆಂಬ ಒತ್ತಾಯಿಸಿದ ದೇವಿಪ್ರಸಾದ್ (Belapu) ಬೆಳಪು : ಉಡುಪಿ ಜಿಲ್ಲೆಯಲ್ಲಿ ಯುವಜನತೆ ವ್ಯಾಪಕ ಡ್ರಗ್ಸ್ ಹಾವಳಿಗೆ ಬಲಿಯಾಗುತ್ತಿದ್ದಾರೆ. ಹದಿಹರೆಯದ ಯುವಕ ಯುವತಿಯರು ಡ್ರಗ್ಸ್ ಸೇವಿಸಿ ಅಡ್ಡ ಹಾದಿ ಹಿಡಿಯುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಪ್ರತ್ಯೇಕ ತಂಡ ರಚಿಸಿ ಕಾರ್ಯಾಚರಣೆ ಮಾಡಬೇಕೆಂದು ಸಾಮಾಜಿಕ ಸಹಕಾರಿ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ ಒತ್ತಾಯಿಸಿದ್ದಾರೆ.    ಹಿಂದೆ […]

(Belapu) ಬೆಳಪು : ಉಡುಪಿ ಜಿಲ್ಲೆಯಲ್ಲಿ ಯುವಜನತೆ ವ್ಯಾಪಕ ಡ್ರಗ್ಸ್ ಹಾವಳಿಗೆ ಬಲಿಯಾಗುತ್ತಿದ್ದಾರೆ. ಹದಿಹರೆಯದ ಯುವಕ ಯುವತಿಯರು ಡ್ರಗ್ಸ್ ಸೇವಿಸಿ ಅಡ್ಡ ಹಾದಿ ಹಿಡಿಯುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಪ್ರತ್ಯೇಕ ತಂಡ ರಚಿಸಿ ಕಾರ್ಯಾಚರಣೆ ಮಾಡಬೇಕೆಂದು ಸಾಮಾಜಿಕ ಸಹಕಾರಿ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ ಒತ್ತಾಯಿಸಿದ್ದಾರೆ.

   ಹಿಂದೆ ಡ್ರಗ್ಸ್ ದಂಧೆ ಕೇವಲ ನಗರ ಪ್ರದೇಶಗಳಲ್ಲಿತ್ತು, ಇದೀಗ ಗ್ರಾಮೀಣ ಭಾಗಕ್ಕೂ ವಿಸ್ತರಿಸಿದೆ. ಯುವಕರು ಗೂಡಂಗಡಿಗಳಲ್ಲಿ ಡ್ರಗ್ಸ್ ಗಾಗಿ ಕಾಯುತ್ತಿರುತ್ತಾರೆ. ಮಣಿಪಾಲ, ಕರಾವಳಿ ತೀರಗಳಲ್ಲಿ ಬೇಕಾ ಬಿಟ್ಟಿ ಡ್ರಗ್ಸ್ ಮಾಫಿಯ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ರಾತ್ರಿ ಮಹಿಳೆಯರಿಗೆ ರಸ್ತೆಯಲ್ಲಿ ಸಂಚರಿಸುವುದು ಬಹಳ ಅಪಾಯದಂತಿದೆ.

  ಅಲ್ಲಲ್ಲಿ ಗುಂಪುಗಟ್ಟಿ ಯುವಕರು ಡ್ರಗ್ಸ್ ನಶೆಯಲ್ಲಿರುತ್ತಾರೆ. ಒಡ ಹುಟ್ಟಿದವರ, ಸ್ನೇಹಿತರ ಪರಿಚಯವೇ ಆಗದ ರೀತಿ ವರ್ತಿಸಿ ಅಶಾಂತಿ ನಿರ್ಮಿಸುತ್ತಿದ್ದಾರೆ. ಪೊಲೀಸ್ ಇಲಾಖೆ ತೀರಾ ನಿಗಾ ವಹಿಸುವಂತೆ ಗೃಹ ಸಚಿವರಾದ ಪ್ರಿಯಾಂಕ ಖರ್ಗೆಯವರಿಗೆ ಪತ್ರದ ಮೂಲಕ ದೇವಿಪ್ರಸಾದ್ ಶೆಟ್ಟಿ ಬೆಳಪು ಮನವಿ ಮಾಡಿದ್ದಾರೆ.

ಭೂಗತ ಪಾತಕಿಗಳಿಗೆ ಅಂತ್ಯ ಹಾಡಿ

 ಇತ್ತೀಚಿನ ದಿನಗಳಲ್ಲಿ ಕೊಲೆ-ಸುಲಿಗೆ ಜಾಸ್ತಿಯಾಗುತ್ತಿದೆ. ಉದ್ಯಮಿಗಳಿಗೆ ಬೆದರಿಕೆ ಹಾಕುತ್ತಿರುವ ಭೂಗತ ಪಾತಕಿಗಳು ಯಾರೇ ಆದರೂ ಸರಕಾರ ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಬೇಕೆಂದು ದೇವಿಪ್ರಸಾದ್ ಶೆಟ್ಟಿ ಒತ್ತಾಯಿಸಿದ್ದಾರೆ.

  ಮಾನ್ಯ ಮುಖ್ಯಮಂತ್ರಿಗಳು ಕರಾವಳಿ ಅಭಿವೃದ್ಧಿಗೆ ಬಹಳ ಒತ್ತು ನೀಡುತ್ತಿದ್ದಾರೆ. ಆದರೆ ಕರಾವಳಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ. ಡ್ರಗ್ಸ್ ಮಾಫಿಯಾ, ಭೂಗತ ಪಾತಕಿಗಳ ಬೆದರಿಕೆ, ಕೊಲೆ, ಕೋಮು ಗಲಭೆ ಇವುಗಳ ವಿರುದ್ಧ ಕಠಿಣ ಕ್ರಮ ಜರಗಿಸಿ ನೆಮ್ಮದಿಯ ಬದುಕಿಗೆ ಅವಕಾಶ ನೀಡುವಂತೆ ಶೆಟ್ಟಿಯವರು ಗೃಹ ಸಚಿವರನ್ನು ಒತ್ತಾಯಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.