• Home  
  • ತಂದೆ-ತಾಯಂದಿರಿಲ್ಲದ ಅನಾಥ ಮಕ್ಕಳಿಗೂ ಶೇ.1ರಷ್ಟು ಮೀಸಲಾತಿ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ
- ರಾಜಕೀಯ

ತಂದೆ-ತಾಯಂದಿರಿಲ್ಲದ ಅನಾಥ ಮಕ್ಕಳಿಗೂ ಶೇ.1ರಷ್ಟು ಮೀಸಲಾತಿ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ

Share: ಉಡುಪಿ: ತಂದೆ-ತಾಯಂದಿರಿಲ್ಲದ ಅನಾಥ ಮಕ್ಕಳಿಗೂ ಶೇ.1ರಷ್ಟು ಮೀಸಲಾತಿ ಒದಗಿಸುವ ಆಯೋಗದ ಶಿಫಾರಸ್ಸನ್ನು ಹಿಂದಿನ ಸರಕಾರ ಒಪ್ಪಿಕೊಂಡಿದ್ದು, ಅದನ್ನು ಅನುಷ್ಠಾನಗೊಳಿಸಲು ಸರಕಾರ ಮುಂದಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.  ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಆಯೋಗದ ಸಭೆಯಲ್ಲಿ ಉಡುಪಿ ಜಿಲ್ಲೆ ಯಲ್ಲಿ ಹಿಂದುಳಿದ ಜಾತಿ ಮತ್ತು ಸಮುದಾಯದ ಪ್ರಗತಿ ಪರಿಶೀಲನೆ, ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.  ನನ್ನ ನೇತೃತ್ವದ […]

ಉಡುಪಿ: ತಂದೆ-ತಾಯಂದಿರಿಲ್ಲದ ಅನಾಥ ಮಕ್ಕಳಿಗೂ ಶೇ.1ರಷ್ಟು ಮೀಸಲಾತಿ ಒದಗಿಸುವ ಆಯೋಗದ ಶಿಫಾರಸ್ಸನ್ನು ಹಿಂದಿನ ಸರಕಾರ ಒಪ್ಪಿಕೊಂಡಿದ್ದು, ಅದನ್ನು ಅನುಷ್ಠಾನಗೊಳಿಸಲು ಸರಕಾರ ಮುಂದಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.

 ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಆಯೋಗದ ಸಭೆಯಲ್ಲಿ ಉಡುಪಿ ಜಿಲ್ಲೆ ಯಲ್ಲಿ ಹಿಂದುಳಿದ ಜಾತಿ ಮತ್ತು ಸಮುದಾಯದ ಪ್ರಗತಿ ಪರಿಶೀಲನೆ, ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.

 ನನ್ನ ನೇತೃತ್ವದ ಆಯೋಗ ಇದುವರೆಗೆ ಒಟ್ಟು 34 ವರದಿಗಳನ್ನು ಸರಕಾರಕ್ಕೆ ನೀಡಿದೆ. ಇವುಗಳಲ್ಲಿ ಅನಾಥ ಮಕ್ಕಳಿಗೆ ಮೀಸಲಾತಿ ಕಲ್ಪಿಸುವ ವರದಿ ಪ್ರಮುಖವಾಗಿತ್ತು. ಬಾಲ್ಯದಲ್ಲೇ ತಂದೆ-ತಾಯಿ ಇಬ್ಬರನ್ನು ಕಳೆದು ಕೊಂಡ ಅನಾಥ ಮಕ್ಕಳನ್ನು ಅತೀ ಹಿಂದುಳಿದ ವರ್ಗವೆಂದು ಪರಿಗಣಿಸಿ ಶೇ.1ರಷ್ಟು ಮೀಸಲಾತಿ ಒದಗಿಸಬೇಕು.

 ತಂದೆ-ತಾಯಿ ಯಾರೆಂದು ತಿಳಿದು ಅವರ ಜಾತಿ ಗೊತ್ತಿದ್ದರೆ, ಅಂಥ ಅನಾಥ ಮಕ್ಕಳಿಗೆ ಅವರ ಜಾತಿಯಲ್ಲೇ ಶೇ.1 ಮೀಸಲಾತಿ ಒದಗಿಸಬೇಕೆಂದು ಆಯೋಗದ ವರದಿಯಲ್ಲಿ ತಿಳಿಸಲಾಗಿದೆ. ಇದರಲ್ಲಿ ಯಾವುದೇ ಬ್ಯಾಕ್ ಲಾಗ್ ಇಡಬಾರದು. ಸಾಕಷ್ಟು ಮಕ್ಕಳ ಸಿಗದಿದ್ದರೆ, ಇತರೆ ಜಾತಿಯವರಿಗೆ ನೀಡಬೇಕು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿದ್ದೇವೆ ಎಂದರು.

 ಕೇಂದ್ರ ಸರಕಾರದ 2015ರ ಗಝಟ್ ನೋಟಿಫಿಕೇಷನ್‌ನಂತೆ ಬೋವಿ ಜನಾಂಗ ಪರಿಶಿಷ್ಟ ಜಾತಿ ಪಟ್ಟಿಯಲ್ಲಿದೆ. ಆದರೆ ಬೋವಿ ಜನಾಂಗದ ಕಲ್ಲು ವಡ್ಡರು ಹಾಗೂ ಮಣ್ಣು ವಡ್ಡರು ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದು, ಇವರಿಗೆ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಉಂಟಾಗಿರುವ ಗೊಂದಲ ಸರಿಪಡಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿ, ಈ ಪಂಗಡವನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈಬಿಟ್ಟು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ ಎಂದು ಜಯಪ್ರಕಾಶ್ ಹೆಗ್ಡೆ ವಿವರಿಸಿದರು.

ವಿವಿಧ ಜಾತಿಗಳ ಜನರಿಗೆ ಜಾತಿ ಪ್ರಮಾಣ ಪತ್ರ ನೀಡುವ ನಿಟ್ಟಿನಲ್ಲಿ ಉಂಟಾಗಿರುವ ಗೊಂದಲಗಳನ್ನು ಸರಿಪಡಿ ಸುವ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ.

ಅದೇ ರೀತಿ ಸಿಆರ್ ಸೆಲ್ ಅಧಿಕಾರಿ ಗಳಿಗೂ ಅಗತ್ಯ ನಿರ್ದೇಶನ ನೀಡಲಾಗಿದೆ. ಈ ಬಗ್ಗೆ ಯಾವುದೇ ಸಮಸ್ಯೆ ಕಂಡುಬಂದರೂ ಅವುಗಳ ಇತ್ಯರ್ಥ ಅಂತಿಮವಾಗಿ ಜಿಲ್ಲಾ ಸಮಿತಿ ಯಲ್ಲೇ ಮಾಡುವಂತೆ ತಿಳಿಸಲಾಗಿದೆ ಎಂದರು.

 ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮೊಗೇರ ಜಾತಿಯ ಹೆಸರು ಪರಿಶಿಷ್ಟ ಜಾತಿ, ಪ್ರವರ್ಗ-1ರಲ್ಲಿ ಇದ್ದು ಗೊಂದಲ ಉಂಟಾಗಿದೆ. ಇದರ ಬಗ್ಗೆ ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆಯುತ್ತಿದ್ದೇವೆ. ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಿಂದ ಮೊಗೇರ ಜಾತಿಯನ್ನು ಕೈಬಿಡಲು ಬೇಡಿಕೆ ಬಂದಿದೆ. ಅದರಂತೆ ಉ.ಕ.ದಲ್ಲಿ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ನಾಳೆ ಅಲ್ಲಿಗೂ ತೆರಳಿ ಪ್ರತಿಭಟನೆ ನಡೆಸುತ್ತಿರುವವರನ್ನು ಭೇಟಿ ಮಾಡಿದ ಬಳಿಕ ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆಯುವ ಬಗ್ಗೆ ನಿರ್ಧರಿಸಲಾಗುವುದು ಎಂದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.