ತಾಲೂಕು ಮಟ್ಟದ ಶಾಲೆ, ಕಾಲೇಜುಗಳಿಗೆ ಜಾನಪದ, ದೇಶ ಭಕ್ತಿ, ಗೀತಾ ಗಾಯನ ಸ್ಪರ್ಧೆ
ಕಾರ್ಯಕ್ರಮ ಉದ್ಘಾಟಿಸಿದ ಮೂಲ್ಕಿ ಲಯನ್ಸ್ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ. ಎಂ.
(Mulki) ಮೂಲ್ಕಿ : ಶಿಕ್ಷಣ ವ್ಯವಸ್ಥೆಯ ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಎಳೆಯ ವಿದ್ಯಾರ್ಥಿಗಳಿಂದ ಹಿಡಿದು ಬೆಳೆದ ಕಾಲೇಜು ವಿದ್ಯಾರ್ಥಿಗಳ ವ್ಯಾಪ್ತಿಯಲ್ಲಿ ಶಿಸ್ತು, ದೇಶಭಕ್ತಿ, ಪ್ರಾಮಾಣಿಕತೆ ಮತ್ತು ಅವರ ಪ್ರತಿಭೆಗೆ ತಕ್ಕ ವೇದಿಕೆಯನ್ನು ಕಲ್ಪಿಸುವಲ್ಲಿ ಸ್ಕೌಟ್ ಆಂದೋಲನ ವಿಶ್ವ ಮಟ್ಟದಲ್ಲಿ ಉತ್ತಮ ಪ್ರಜೆಗಳನ್ನು ಬೆಳೆಸುವ ಕಾರ್ಯ ಶತಮಾನದಿಂದ ನಡೆಸುತ್ತಿದೆ ಎಂದು ಮೂಲ್ಕಿ ಲಯನ್ಸ್ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ.ಎಂ. ಅವರು ಹೇಳಿದರು.
ಅವರು ಭಾರತ್ ಸ್ಕೌಟ್ ಎಂಡ್ ಗೈಡ್ಸ್ ದಕ್ಷಿಣ ಕನ್ನಡ ಇದರ ಮೂಲ್ಕಿ ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ ಮೂಲ್ಕಿ ಲಯನ್ಸ್ ಲಿಯೋ ಕ್ಲಬ್ ಮತ್ತು ಸಿಎಸ್‌ಐ ಆಂಗ್ಲ ಮಾಧ್ಯಮ ಶಾಲೆ ಕಾರ್ನಾಡು ಮೂಲ್ಕಿ ಇವರ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಶಾಲೆ ಮತ್ತು ಕಾಲೇಜುಗಳ ಜಾನಪದ ಹಾಗೂ ದೇಶ ಭಕ್ತಿ ಗೀತೆ ವಿಭಾಗದ ಗೀತಾ ಗಾಯನ ಸ್ಪರ್ಧೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮೂಲ್ಕಿ ಸ್ಥಳೀಯ ಸಂಸ್ಥೆ ಅಧ್ಯಕ್ಷ ಹಾಗೂ ಜಿಲ್ಲಾ ಸಹಾಯಕ ಆಯುಕ್ತ ಎಂ. ಸರ್ವೋತ್ತಮ ಆಂಚನ್ ಆವರು ವಹಿಸಿ ಮಾತನಾಡಿ, ಸರಕಾರದ ಶಿಕ್ಷಣ ಇಲಾಖೆಯ ಸಹಕಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ವ್ಯವಸ್ಥೆಯಲ್ಲಿ ಸ್ಕೌಟ್ ವಿದ್ಯಾರ್ಥಿಗಳಿಗೆ ಕೆಲವು ರೀತಿಯ ಅವಕಾಶವನ್ನು ಗುರುತಿಸಲಾಗಿದೆ. ಇದನ್ನು ದೊರಕಿಸುವಲ್ಲಿ ಮೂಲ್ಕಿ ಸ್ಥಳೀಯ ಸಂಸ್ಥೆ ಉತ್ತಮ ಸಾಧನೆಯನ್ನು ಮಾಡಿದೆ ಎಂದರು.
ಸಿಎಸ್‌ಐ ಶಾಲಾ ಸಂಚಾಲಕ ರಂಜನ್ ಜತ್ತನ್ನಾ ಅವರು ಮಾತನಾಡಿ, ಸ್ಕೌಟ್ ಸಂಸ್ಥೆಯ ಜೊತೆಗೆ ನಮ್ಮ ಶಾಲೆಗೆ ಉತ್ತಮ ಸಂಬಧ ಹಾಗೂ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ನಮ್ಮ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ದೊರಕಿದೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್, ಲಯನ್ಸ್ ಕೋಶಾಧಿಕಾರಿ ಸುಶೀಲ್ ಬಂಗೇರ, ಸಿಎಸ್‌ಐ ಶಾಲಾ ಪ್ರಾಂಶುಪಾಲೆ ಶಾಂತಿ ಸುಹಾಸಿನಿ ಮತ್ತು ಲಯನ್ಸ್ ಜಿಲ್ಲಾ ಪದಾಧಿಕಾರಿಗಳಾದ ಸದಾಶಿವ ಹೊಸದುರ್ಗಾ, ಪ್ರಶಾಂತ್ ಶೆಟ್ಟಿ, ತೀರ್ಪುಗಾರರಾದ ಕಲಾವತಿ ಪ್ರೇಮನಾಥ್ ಮತ್ತು ಪೂಜಾ ಎಸ್. ಆಚಾರ್ ಕುಳಾಯಿ ಉಪಸ್ಥಿತರಿದ್ದರು.
ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಹಾಗು ಕೋಶಾಧಿಕಾರಿ ಧಿತಾ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಹರೀಶ್ಚಂದ್ರ ಎಂ. ನಿರೂಪಿಸಿದರು.

