• Home  
  • ತೆಂಕ ಎರ್ಮಾಳು: ಕಿನಾರ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆ (Tenka Yermalu: Congratulations to SSLC students and teachers at Kinara School+
- ಶಾಲಾ ಕಾಲೇಜು - ಸನ್ಮಾನ, ಅಭಿನಂದನೆ

ತೆಂಕ ಎರ್ಮಾಳು: ಕಿನಾರ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆ (Tenka Yermalu: Congratulations to SSLC students and teachers at Kinara School+

Share: ತೆಂಕ ಎರ್ಮಾಳು: ಕಿನಾರ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆ (Thenka Yermal) ತೆಂಕ ಎರ್ಮಾಳು: ತೆಂಕ ಎರ್ಮಾಳು ಕಿನಾರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25ನೇ ಸಾಲಿನ S. S. L. C ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಶನಿವಾರ ಶಾಲಾ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು.  ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ (ರಿ ) ಮುಂಬೈ ಇದರ ಅಧ್ಯಕ್ಷ ಸುರೇಶ್ ಎಸ್ ಕುಂದರ್ ಮತ್ತು ಗಿರೀಶ್ ಎಸ್ ಕುಂದರ್ ಮುಂಬಯಿ […]

(Thenka Yermal) ತೆಂಕ ಎರ್ಮಾಳು: ತೆಂಕ ಎರ್ಮಾಳು ಕಿನಾರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25ನೇ ಸಾಲಿನ S. S. L. C ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಶನಿವಾರ ಶಾಲಾ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು.

 ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ (ರಿ ) ಮುಂಬೈ ಇದರ ಅಧ್ಯಕ್ಷ ಸುರೇಶ್ ಎಸ್ ಕುಂದರ್ ಮತ್ತು ಗಿರೀಶ್ ಎಸ್ ಕುಂದರ್ ಮುಂಬಯಿ ಇವರ ಕುಟುಂಬದ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ  ಹಾಗೂ ಶ್ರಮವಹಿಸಿದ ಶಿಕ್ಷಕರಿಗೆ ರೂ 2 ಲಕ್ಷ ವೆಚ್ಚದಲ್ಲಿ ಪ್ರೋತ್ಸಾಹ ಧನ ನೀಡಿ ಅಭಿನಂದಿಸಲಾಯಿತು.

  ತೆಂಕ ಎಜುಕೇಶನ್ ಸೊಸೈಟಿ ಅಧ್ಯಕ್ಷ ಕಿಶೋರ್ ಕುಮಾರ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ ಮುಂಬೈ ಇದರ ಅಧ್ಯಕ್ಷ ಸುರೇಶ್ ಎಸ್ ಕುಂದರ್, ಎರ್ಮಾಳು ತೆಂಕ ಮೊಗವೀರ ಸಭಾದ ಅಧ್ಯಕ್ಷ ಲಿಂಗಪ್ಪ ಪುತ್ರನ್,   ಕಾರ್ಯದರ್ಶಿ ಪ್ರಭಾಕರ್ ಪುತ್ರನ್, ಮಹಿಳಾ ಮಂಡಳದ ಅಧ್ಯಕ್ಷೆ ನಳಿನಿ ಎಸ್ ಬಂಗೇರ, ಶಿಕ್ಷಕ- ರಕ್ಷಕ ಸಂಘದ ಪ್ರತಿನಿಧಿ ಮೊಹಮ್ಮದ್ ಸಲೀಂ, ಆಡಳಿತ ಮಂಡಳಿ ಸಮಿತಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.

 ಮುಖ್ಯ ಶಿಕ್ಷಕಿ ಶ್ರೀಮತಿ ಪ್ರೀತಿ ಸುವರ್ಣ ಸ್ವಾಗತಿಸಿದರು. ಶ್ರೀಮತಿ ಪ್ರತಿಮಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಕವಿತಾ ಜಿ ಪುತ್ರನ್ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.