• Home  
  •  ತೆಂಕ ಎರ್ಮಾಳು : ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಮಲ್ಲಿಕಾರವರಿಗೆ ಸನ್ಮಾನ (Tenka Yermalu: Honored for Mallikar who was transferred after serving in the school)
- ಶಾಲಾ ಕಾಲೇಜು - ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

 ತೆಂಕ ಎರ್ಮಾಳು : ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಮಲ್ಲಿಕಾರವರಿಗೆ ಸನ್ಮಾನ (Tenka Yermalu: Honored for Mallikar who was transferred after serving in the school)

Share: ತೆಂಕ ಎರ್ಮಾಳು : ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಮಲ್ಲಿಕಾರವರಿಗೆ ಸನ್ಮಾನ  28 ವರ್ಷಗಳಿಂದ ಸೇವೆ ಸಲ್ಲಿಸಿದ ಮಲ್ಲಿಕಾರವರಿಗೆ ಹಳೆ ವಿದ್ಯಾರ್ಥಿ ಸಂಘದ ಸನ್ಮಾನ (Thenka yermal) ತೆಂಕ ಎರ್ಮಾಳು: ತೆಂಕ ಎರ್ಮಾಳು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 28 ವರ್ಷಗಳಿಂದ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶ್ರೀಮತಿ ಮಲ್ಲಿಕಾರವರಿಗೆ ಹಳೆ ವಿದ್ಯಾರ್ಥಿ ಸಂಘದಿಂದ ಸನ್ಮಾನ ಕಾರ್ಯಕ್ರಮವು ಭಾನುವಾರ ಶಾಲಾ ಸಭಾ ಭವನದಲ್ಲಿ ಜರುಗಿತು.   ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು   ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿ, […]

(Thenka yermal) ತೆಂಕ ಎರ್ಮಾಳು: ತೆಂಕ ಎರ್ಮಾಳು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 28 ವರ್ಷಗಳಿಂದ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶ್ರೀಮತಿ ಮಲ್ಲಿಕಾರವರಿಗೆ ಹಳೆ ವಿದ್ಯಾರ್ಥಿ ಸಂಘದಿಂದ ಸನ್ಮಾನ ಕಾರ್ಯಕ್ರಮವು ಭಾನುವಾರ ಶಾಲಾ ಸಭಾ ಭವನದಲ್ಲಿ ಜರುಗಿತು.

  ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು   ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿ, ಶಿಕ್ಷಕಿ ಮಲ್ಲಿಕಾರವರ ಮುಂದಿನ ಜೀವನವು ಸುಖ ಸಂತೋಷಗಳಿಂದ ಕೂಡಿರಲಿ ಎಂದು ಹಾರೈಸಿದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿಯವರು, ಮಲ್ಲಿಕಾರವರ ವೃತ್ತಿ ಜೀವನವು ಇನ್ನಷ್ಟು ಉತ್ತಮವಾಗಿರಲಿ. ಬಯಸಿದ ಭಾಗ್ಯಗಳು ನಿಮ್ಮದಾಗಲಿ ಎಂದು ಶುಭ ಹಾರೈಸಿದರು.

  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಶೀಲಾ ಕೆ ಶೆಟ್ಟಿ ಉಪಸ್ಥಿತರಿದ್ದು, ಅವರು ಶುಭ ಹಾರೈಸಿದರು.

  ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಶಾರದಾ ಕೆ. ಪೂಜಾರಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೇಶವ ಮೊಯ್ಲಿ, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ವಿನೋದ, ಮಲ್ಲಿಕಾರವರ ಪತಿ, ಅರಣ್ಯಾಧಿಕಾರಿ ಕೇಶವ ಪೂಜಾರಿಯವರು ಸಮಯೋಚಿತವಾಗಿ ಮಾತನಾಡಿದರು.

  ಕಾರ್ಯಕ್ರಮದಲ್ಲಿ ವಿಮಲಾ ಕೆ. ಸಾಲ್ಯಾನ್, ಮುಸ್ತಾಕ್ ಅಹಮದ್, ಸುಕೇಶ್ ಪೂಜಾರಿ, ರವಿಕಿರಣ್ ಶೆಟ್ಟಿ, ಜಯಶ್ರೀ ಪೂಜಾರಿ, ರತ್ನಾಕರ ಕೋಟ್ಯಾನ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳು, ಅಭಿಮಾನಿಗಳು ಉಪಸ್ಥಿತರಿದ್ದರು.

  ಶ್ರೀಮತಿ ರೇಷ್ಮಾರವರು ಪ್ರಾರ್ಥಿಸಿದರು. ಯಶವಂತ್‌  ಸ್ವಾಗತಿಸಿದರು. ಶ್ರೀಮತಿ ಸಂಗೀತ ಸನ್ಮಾನ ಪತ್ರವನ್ನು ವಾಚಿಸಿದರು. ಕೇಶವ ಮೊಯ್ಲಿಯವರು ಕಾರ್ಯಕ್ರಮ ನಿರೂಪಿಸಿದರು. ವಿಮಲಾ ಕೆ ಸಾಲ್ಯಾನ್ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.