• Home  
  • ದಿಲ್ಲಿಯಲ್ಲಿ ಕರ್ನಾಟಕ ಭವನ ಕಾಮಗಾರಿ ನಡೆಸಿಕೊಟ್ಟ ಸುಜಯ್ ಕುಮಾರ್ ಶೆಟ್ಟಿಯವರಿಗೆ ಸನ್ಮಾನ (Sujay Kumar Shetty, who led the construction of Karnataka Bhavan in Delhi, was felicitated.
- ತಂತ್ರಜ್ಞಾನ

ದಿಲ್ಲಿಯಲ್ಲಿ ಕರ್ನಾಟಕ ಭವನ ಕಾಮಗಾರಿ ನಡೆಸಿಕೊಟ್ಟ ಸುಜಯ್ ಕುಮಾರ್ ಶೆಟ್ಟಿಯವರಿಗೆ ಸನ್ಮಾನ (Sujay Kumar Shetty, who led the construction of Karnataka Bhavan in Delhi, was felicitated.

Share: ದಿಲ್ಲಿಯಲ್ಲಿ ಕರ್ನಾಟಕ ಭವನ ಕಾಮಗಾರಿ ನಡೆಸಿಕೊಟ್ಟ ಸುಜಯ್ ಕುಮಾರ್ ಶೆಟ್ಟಿಯವರಿಗೆ ಸನ್ಮಾನ (udupi) ಉಡುಪಿ: ದಿಲ್ಲಿಯಲ್ಲಿ ರಾಜ್ಯ ಸರಕಾರ ನಿರ್ಮಿಸಿರುವ ಕರ್ನಾಟಕ ಭವನ -1  (ಕಾವೇರಿ) ಲೋಕಾರ್ಪಣೆ ಸಂದರ್ಭ ಕಾಮಗಾರಿಯನ್ನು ಸುಂದರವಾಗಿ ನಡೆಸಿಕೊಟ್ಟ ಕಾರ್ಕಳದ ಎಸ್ ಕೆ ಎಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಜಯ್ ಕುಮಾರ್ ಶೆಟ್ಟಿ ಅವರನ್ನು ಸಿಎಂ ಸಿದ್ದರಾಮಯ್ಯ ಸನ್ಮಾನಿಸಿದರು.   ಈ ಸಂದರ್ಭ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸಮಾಜ ಕಲ್ಯಾಣ […]

(udupi) ಉಡುಪಿ: ದಿಲ್ಲಿಯಲ್ಲಿ ರಾಜ್ಯ ಸರಕಾರ ನಿರ್ಮಿಸಿರುವ ಕರ್ನಾಟಕ ಭವನ -1  (ಕಾವೇರಿ) ಲೋಕಾರ್ಪಣೆ ಸಂದರ್ಭ ಕಾಮಗಾರಿಯನ್ನು ಸುಂದರವಾಗಿ ನಡೆಸಿಕೊಟ್ಟ ಕಾರ್ಕಳದ ಎಸ್ ಕೆ ಎಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಜಯ್ ಕುಮಾರ್ ಶೆಟ್ಟಿ ಅವರನ್ನು ಸಿಎಂ ಸಿದ್ದರಾಮಯ್ಯ ಸನ್ಮಾನಿಸಿದರು. 

 ಈ ಸಂದರ್ಭ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ​​ಮುನಿಯಪ್ಪ, ನವದೆಹಲಿಯಲ್ಲಿ ರಾಜ್ಯದ ವಿಶೇಷ ಪ್ರತಿನಿಧಿಗಳಾದ ಟಿ.ಬಿ. ಜಯಂದ್ರ ಮತ್ತು ಪ್ರಕಾಶ್ ಹುಕ್ಕೇರಿ, ರಾಜ್ಯಸಭಾ ಸದಸ್ಯರಾದ ಜೈರಾಮ್ ರಮೇಶ್ ಮತ್ತು ಸುಧಾ ನಾರಾಯಣಮೂರ್ತಿ, ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್, ಕರ್ನಾಟಕ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ದಿಲ್ಲಿಯ ಪ್ರತಿಷ್ಠಿತ ಪ್ರದೇಶವಾದ ಚಾಣಕ್ಯಪುರಿಯ 12,212 ಚದರ ಮೀಟರ್‌ ಪೈಕಿ 3,532 ಚದರ ಮೀಟರ್‌ ಜಾಗದಲ್ಲಿ ತಲೆ ಎತ್ತಿರುವ 9 ಅಂತಸ್ತಿನ ಕಟ್ಟಡವು ಸುಮಾರು 138 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಈ ಕಟ್ಟಡದಲ್ಲಿ ಒಟ್ಟು 52 ಕೊಠಡಿಗಳಿದ್ದು, 2 ವಿವಿಐಪಿ ಸೂಟ್‌, 32 ಸಾಧಾರಣ ಸೂಟ್‌ ರೂಮ್‌, 19 ಸಿಂಗಲ್‌ ರೂಮ್‌, 86 ಶೌಚಾಲಯ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯಗಳೂ ಇವೆ. ಜತೆಗೆ ವಾಹನ ನಿಲುಗಡೆಗೂ ಅಚ್ಚುಕಟ್ಟಾದ ವ್ಯವಸ್ಥೆ ಇದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.