ನನ್ನ ಸುದ್ದಿ ಚಾನಲ್‌ಗಳಲ್ಲಿ ಬರುತ್ತಿಲ್ಲ. ನಮಗೆ ಪತ್ರಿಕೆಯವರು ಸಾಕೆಂದು ಹರಿಹಾಯ್ದ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ ಎನ್ ರಾಜೇಂದ್ರ ಕುಮಾರ್
(Mangaluru) ಮಂಗಳೂರು : ತನ್ನ ಸುದ್ದಿ ಚಾನಲ್‌ಗಳಲ್ಲಿ ಬರುತ್ತಿಲ್ಲ ಎಂದು ಆಕ್ರೋಶಗೊಂಡ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ ಎನ್ ರಾಜೇಂದ್ರ ಕುಮಾರ್ ಮಾಧ್ಯಮ ಮಂದಿಯ ಮೇಲೆ ಹರಿಹಾಯ್ದ ಘಟನೆ ಗುರುವಾರ ಮಂಗಳೂರಿನಲ್ಲಿ ಘಟಿಸಿದೆ.
“ಒಂದು ಸಣ್ಣ ಸುದ್ದಿಯೂ ನಿಮ್ಮ ಚಾನಲ್ ನಲ್ಲಿ ಬರುವುದಿಲ್ಲ, ಮತ್ತೆ ಎಂತಕ್ಕೆ ನೀವು ಬರುವುದು ನನ್ನ ಪಟ ತೆಗೀಲಿಕ್ಕ ? ಅದಕ್ಕೆ ನನ್ನಲ್ಲಿ ಜನ ಉಂಟು, ನೀವು ಬರಬೇಕಿಲ್ಲ. ದಿನ ಪತ್ರಿಕೆಗಳು ಮಾತ್ರ ಪತ್ರಿಕಾಗೋಷ್ಟಿಗೆ ಬಂದು ವರದಿ ಮಾಡುತ್ತಾರೆ. ಅವರು ಸಾಕು ನನಗೆ. ಯಾವತ್ತಾದರು ನನ್ನ ಒಂರು ಸುದ್ದಿ ನಿಮ್ಮ ಚಾನಲ್ ಗಳಲ್ಲಿ ಬಂದಿದೆಯಾ ? ಮತ್ತೆ ಯಾಕೆ ಈ ದೊಣ್ಣೆ (ಮೈಕ್) ನನ್ನ ಮುಂದೆ ಇಡುವುದು. ನನ್ನನ್ನು ಖುಷಿ ಪಡಿಸಲಿಕ್ಕಾ ! ತೆಗೆದುಕೊಂಡು ಹೋಗಿ ಹೀಗೆಂದು ರಾಜೇಂದ್ರ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ನಮ್ಮ ಯಾವೊಬ್ಬ ಪತ್ರಿಕಾ ಪ್ರತಿನಿಧಿಯೂ ತುಟಿ ಪಿಟಕ್ ಎನ್ನಲಿಲ್ಲ.
ಕಾರ್ಯನಿರತ ಪತ್ರಕರ್ತ ಸಂಘ ಯಾವ ಕ್ರಮ ಕೈಗೊಳ್ಳುತ್ತದೋ ಕಾದು ನೋಡಬೇಕಿದೆ.

