“ನಾನು ಸತ್ತಿಲ್ಲ, ಕಾಫಿ ಕುಡಿತಾ ಇದ್ದೀನಿ!” ನೆತನ್ಯಾಹು ಸಾವಿನ ರಹಸ್ಯ ಬಯಲು
ಇರಾನ್ ಸರ್ಕಾರಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ವರದಿಗೆ ನೆತನ್ಯಾಹು ವ್ಯಂಗ್ಯ
(Isrel) ಇಸ್ತೇಲ್: ಇರಾನ್ ಸರ್ಕಾರಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೆತನ್ಯಾಹು ಅವರು ಇರಾನ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಅಥವಾ ತೀವ್ರವಾಗಿ ಗಾಯಗೊಂಡಿದ್ದಾರೆ ಎಂಬ ಸುದ್ದಿಗಳು ಹರಡಿದ್ದು, ಇಸ್ರೇಲ್ ಮುಖ್ಯಸ್ಥ ನೆತನ್ಯಾಹು ಉತ್ತರವಾಗಿ ತಾವು ಕಾಫಿ ಕುಡಿಯುತ್ತಾ ಆಪ್ತರೊಂದಿಗೆ ಹರಟುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ಅದರಲ್ಲಿ, “ನಾನು ಸತ್ತಿದ್ದೇನೆ ಎಂದು ಯಾರು ಹೇಳಿದ್ದು? ನಾನು ಕಾಫಿಗಾಗಿ ಸತ್ತಿದ್ದೇನೆ (ಅಂದರೆ ಕಾಫಿಯೆಂದರೆ ನನಗೆ ಅತಿ ಪ್ರೀತಿ. ಕಾಫಿ ಪ್ರೀತಿಗಾಗಿ ಸತ್ತಿದ್ದೇನೆ” ಎಂದು ಹೀಬ್ರೂ ಭಾಷೆಯ ಪದಬಳಕೆಯ ಮೂಲಕ ವ್ಯಂಗ್ಯವಾಡಿದ್ದಾರೆ.
‘ಆರು ಬೆರಳು’ಗಳ ವಿವಾದಕ್ಕೆ ತೆರೆ: ಕಳೆದ ಗುರುವಾರ ನೆತನ್ಯಾಹು ಅವರು ನಡೆಸಿದ್ದ ಪತ್ರಿಕಾಗೋಷ್ಠಿಯ ವಿಡಿಯೋವೊಂದರಲ್ಲಿ ಅವರ ಬಲಗೈಗೆ ಆರು ಬೆರಳುಗಳಿರುವಂತೆ ಕಂಡಿತ್ತು. ಇದನ್ನು ಗಮನಿಸಿದ ನೆಟ್ಟಿಗರು, “ಇದು ಅಸಲಿ ನೆತನ್ಯಾಹು ಅಲ್ಲ, ಎಐ (AI) ಸೃಷ್ಟಿಸಿದ ನಕಲಿ ವಿಡಿಯೋ”ಎಂದು ವಾದಿಸಿದ್ದರು. ಆದರೆ, ಇಂದಿನ ವಿಡಿಯೋದಲ್ಲಿ ನೆತನ್ಯಾಹು ತಮ್ಮ ಎರಡೂ ಕೈಗಳನ್ನು ತೋರಿಸಿ ತಮಗೆ 10 ಬೆರಳುಗಳೇ ಇವೆ ಎಂದು ಸಾಬೀತುಪಡಿಸಿದ್ದಾರೆ. ಆ ವಿಡಿಯೋದಲ್ಲಿ ಕಂಡುಬಂದಿದ್ದು ಕೇವಲ ಕ್ಯಾಮೆರಾ ಆಂಗಲ್ ಮತ್ತು ಬೆಳಕಿನ ತಪ್ಪು ಎಂದು ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಇಸ್ರೇಲ್ನ ಪ್ರಸ್ತುತ ಸ್ಥಿತಿ: ಯುದ್ಧದ ನಡುವೆಯೂ ನೆತನ್ಯಾಹು ಅವರು ಸಕ್ರಿಯರಾಗಿದ್ದು, ಮಿಲಿಟರಿ ನೆಲೆಗಳು ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದಾರೆ. ಇಸ್ರೇಲ್ನಲ್ಲಿ ಪ್ರಸ್ತುತ ಸಾರ್ವಜನಿಕವಾಗಿ ಸೇರುವುದನ್ನು ನಿಷೇಧಿಸಲಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚಿಸಲಾಗಿದೆ. ಆದರೆ ಜನರು ತಾಜಾ ಗಾಳಿಗಾಗಿ ಹೊರಗೆ ಬರಬಹುದು, ಆದರೆ ಶೆಲ್ಟರ್ಗಳ ಸಮೀಪವೇ ಇರಬೇಕು ಎಂದು ನೆತನ್ಯಾಹು ಇಂದಿನ ವಿಡಿಯೋದಲ್ಲಿ ತಿಳಿಸಿದ್ದಾರೆ.

