• Home  
  • ನಿಟ್ಟೂರು ಲಾರ್ಡ್ಸ್‌ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಭಾರತದ ಅತಿದೊಡ್ಡ ವಿದ್ಯಾರ್ಥಿವೇತನ ಪರೀಕ್ಷೆ (India’s largest scholarship exam at Lord’s International School, Nittur)
- ಶಾಲಾ ಕಾಲೇಜು

ನಿಟ್ಟೂರು ಲಾರ್ಡ್ಸ್‌ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಭಾರತದ ಅತಿದೊಡ್ಡ ವಿದ್ಯಾರ್ಥಿವೇತನ ಪರೀಕ್ಷೆ (India’s largest scholarship exam at Lord’s International School, Nittur)

Share: ನಿಟ್ಟೂರು ಲಾರ್ಡ್ಸ್‌ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಭಾರತದ ಅತಿದೊಡ್ಡ ವಿದ್ಯಾರ್ಥಿವೇತನ ಪರೀಕ್ಷೆ 1 ನೇ ತರಗತಿಯಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ (Udupi) ಉಡುಪಿ: ಉಡುಪಿಯ ನಿಟ್ಟೂರಿನಲ್ಲಿರುವ ಲಾರ್ಡ್ಸ್‌ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯು 1ನೇ ತರಗತಿಯಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಭಾರತದ ಅತಿದೊಡ್ಡ ವಿದ್ಯಾರ್ಥಿವೇತನ ಪರೀಕ್ಷೆಯನ್ನು ಆಯೋಜಿಸಿದೆ.    ಉತ್ತಮ ರೆಸಿಡೆನ್ಷಿಯಲ್ ಮತ್ತು ಡೇ ಸ್ಕೂಲ್‌ಗಾಗಿ ಅಪೇಕ್ಷಿಸುವ ವಿದ್ಯಾರ್ಥಿಗಳಿಗೆ ಇದು ಒಂದು ಸುವರ್ಣ ಅವಕಾಶವಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.   ಭಾನುವಾರ, ಏಪ್ರಿಲ್ 5 ರಂದು […]

(Udupi) ಉಡುಪಿ: ಉಡುಪಿಯ ನಿಟ್ಟೂರಿನಲ್ಲಿರುವ ಲಾರ್ಡ್ಸ್‌ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯು 1ನೇ ತರಗತಿಯಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಭಾರತದ ಅತಿದೊಡ್ಡ ವಿದ್ಯಾರ್ಥಿವೇತನ ಪರೀಕ್ಷೆಯನ್ನು ಆಯೋಜಿಸಿದೆ.

   ಉತ್ತಮ ರೆಸಿಡೆನ್ಷಿಯಲ್ ಮತ್ತು ಡೇ ಸ್ಕೂಲ್‌ಗಾಗಿ ಅಪೇಕ್ಷಿಸುವ ವಿದ್ಯಾರ್ಥಿಗಳಿಗೆ ಇದು ಒಂದು ಸುವರ್ಣ ಅವಕಾಶವಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

  ಭಾನುವಾರ, ಏಪ್ರಿಲ್ 5 ರಂದು ಮಧ್ಯಾಹ್ನ 2:30 ಗಂಟೆಗೆ ಲಾರ್ಡ್ಸ್‌ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆ,  ಜ್ಞಾನಕಾಶಿ ಕ್ಯಾಂಪಸ್, ರಾಹೆ 66, ನಿಟ್ಟೂರು, ಪುತ್ತೂರು ಪೋಸ್ಟ್, ಉಡುಪಿ – 576105, ಇಲ್ಲಿವಿದ್ಯಾರ್ಥಿವೇತನ ಪರೀಕ್ಷೆ ನಡೆಯಲಿದೆ. ಆಸಕ್ತರು ಈ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು. ಸಂಪರ್ಕ: 7338285811, 7795648500, 7795648501.

  ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡುವುದು ಈ ಪರೀಕ್ಷೆಯ ಉದ್ದೇಶವಾಗಿದೆ. ವಿನಾಯಿತಿಯು   ಮೊದಲಿಗೆ 85% ಅಂಕ ಪಡೆದವರಿಗೆ 30%.

   65-85% ಅಂಕ ಪಡೆದವರಿಗೆ 20% ವಿನಾಯಿತಿ. ಹಾಗೂ  35-65% ಅಂಕ ಪಡೆದವರಿಗೆ (ಪಾಸಾದವರು) 15% ವಿನಾಯಿತಿ ಸಿಗಲಿದೆ.

  ಯಾವುದೇ ಮೌಲ್ಯಮಾಪನ ಮಂಡಳಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆರೆದಿರುತ್ತದೆ. ಯಾವುದೇ ನೋಂದಣಿ ಶುಲ್ಕ ಅಥವಾ ದಾಖಲೆಗಳ ಅಗತ್ಯವಿಲ್ಲ. ವಿದ್ಯಾರ್ಥಿಗಳು ಕೇವಲ ಬರವಣಿಗೆ ಸಾಮಗ್ರಿಗಳನ್ನು ತಂದು ಪರೀಕ್ಷೆ ಬರೆಯಬೇಕು. ಪರೀಕ್ಷೆಯ ಫಲಿತಾಂಶಗಳನ್ನು ಅದೇ ದಿನ ಘೋಷಿಸಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.