• Home  
  • ನಿರಂತರವಾದ ಅಧ್ಯಯನ, ಪರಿಶ್ರಮದಿಂದ ವಕೀಲ ವೃತ್ತಿಯಲ್ಲಿ ಯಶಸ್ಸು ಸಾಧ್ಯ: ಹೈಕೋಟ್೯ ನ್ಯಾಯಾಧೀಶ ರಾಜೇಶ್ ರೈ (High Court Judge Rajesh Rai Kallangala)
- ಪ್ರಚಲಿತ

ನಿರಂತರವಾದ ಅಧ್ಯಯನ, ಪರಿಶ್ರಮದಿಂದ ವಕೀಲ ವೃತ್ತಿಯಲ್ಲಿ ಯಶಸ್ಸು ಸಾಧ್ಯ: ಹೈಕೋಟ್೯ ನ್ಯಾಯಾಧೀಶ ರಾಜೇಶ್ ರೈ (High Court Judge Rajesh Rai Kallangala)

Share: ನಿರಂತರವಾದ ಅಧ್ಯಯನ, ಪರಿಶ್ರಮದಿಂದ ವಕೀಲ ವೃತ್ತಿಯಲ್ಲಿ ಯಶಸ್ಸು ಸಾಧ್ಯ: ಹೈಕೋಟ್೯ ನ್ಯಾಯಾಧೀಶ ರಾಜೇಶ್ ರೈ (Bantwala)  ಬಂಟ್ವಾಳ : ವಕೀಲರ ಸಂಘ (ರಿ) ಬಂಟ್ವಾಳ ಇದರ ವತಿಯಿಂದ ಕರ್ನಾಟಕ ಹೈಕೋಟ್೯ ನ್ಯಾಯಾಧೀಶರಾದ ರಾಜೇಶ್ ರೈ ಕಲ್ಲಂಗಳ ಅವರಿಗೆ ಹುಟ್ಟೂರ ಸನ್ಮಾನ ಹಾಗೂ ಕಾನೂನು ಕಾರ್ಯಗಾರ ಬಿ.ಸಿ. ರೋಡಿನ ಸ್ಪರ್ಶಕಲಾ ಮಂದಿರದಲ್ಲಿ (Sparsha Kala Mandira) ಶನಿವಾರ ನಡೆಯಿತು.   ಕಾನೂನು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಹೈಕೋಟ್ ೯ ನ್ಯಾಯಾಧೀಶರಾದ ರಾಜೇಶ್ ರೈ ಕಲ್ಲಂಗಳ,  ನಿರಂತರವಾದ ಅಧ್ಯಯನ […]

ನಿರಂತರವಾದ ಅಧ್ಯಯನ, ಪರಿಶ್ರಮದಿಂದ ವಕೀಲ ವೃತ್ತಿಯಲ್ಲಿ ಯಶಸ್ಸು ಸಾಧ್ಯ: ಹೈಕೋಟ್೯ ನ್ಯಾಯಾಧೀಶ ರಾಜೇಶ್ ರೈ

(Bantwala)  ಬಂಟ್ವಾಳ : ವಕೀಲರ ಸಂಘ (ರಿ) ಬಂಟ್ವಾಳ ಇದರ ವತಿಯಿಂದ ಕರ್ನಾಟಕ ಹೈಕೋಟ್೯ ನ್ಯಾಯಾಧೀಶರಾದ ರಾಜೇಶ್ ರೈ ಕಲ್ಲಂಗಳ ಅವರಿಗೆ ಹುಟ್ಟೂರ ಸನ್ಮಾನ ಹಾಗೂ ಕಾನೂನು ಕಾರ್ಯಗಾರ ಬಿ.ಸಿ. ರೋಡಿನ ಸ್ಪರ್ಶಕಲಾ ಮಂದಿರದಲ್ಲಿ (Sparsha Kala Mandira) ಶನಿವಾರ ನಡೆಯಿತು.

  ಕಾನೂನು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಹೈಕೋಟ್ ೯ ನ್ಯಾಯಾಧೀಶರಾದ ರಾಜೇಶ್ ರೈ ಕಲ್ಲಂಗಳ,  ನಿರಂತರವಾದ ಅಧ್ಯಯನ ಮತ್ತು ಕಠಿಣವಾದ ಪರಿಶ್ರಮದಿಂದ ವಕೀಲ ವೃತ್ತಿಯಲ್ಲಿ ಯಶಸ್ಸನ್ನು ಕಾಣಬಹುದು ಎಂದರು.
ವಕೀಲ ವೃತ್ತಿಯಲ್ಲಿ ಕಲಿಕೆಗೆ ಮುಗಿಯದಷ್ಟು ವಿಚಾರಗಳಿದ್ದು, ಕಿರಿಯ ವಕೀಲರು ಕೋಟ್೯ ಕಲಾಪದಲ್ಲಿ ಭಾಗವಹಿಸುವಿಕೆಯಿಂದ ಹಿಡಿದು ಪ್ರತಿನಿತ್ಯವು ವಿಷಯಗಳನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದ ಅವರು, ಹಣ ಸಂಪಾದನೆಯೊಂದಕ್ಕೆ ಸೀಮಿತವಾಗದೆ ಸಮಾಜಮುಖಿ ಕಾರ್ಯದಲ್ಲೂ ವಕೀಲರು ತೊಡಗಿಸಿಕೊಳ್ಳಬೇಕು ಎಂದರು.
 ವಿಧಾನಸೌಧದಲ್ಲಿ ಮಾತ್ರವಲ್ಲ, ನ್ಯಾಯಾಲಯದಲ್ಲೂ “ಸರಕಾರದ ಕೆಲಸ ದೇವರ ಕೆಲಸ” ಎಂಬುದನ್ನು ಅಕ್ಷರಶ: ಪಾಲಿಸುವುದು ಕೂಡ ಮುಖ್ಯವಾಗಿದೆ ಎಂದ ಅವರು, ಹೊಸವಿಚಾರವನ್ನು ಅರಿತುಕೊಂಡು ಕೆಲಸ ಮಾಡಿದಾಗ ವೃತ್ತಿಗೂ ಮನ್ನಣೆ ಸಿಗಲಿದೆ  ಎಂದರು. 

ಸಾಕ್ಷಿಯ ಮನಸ್ಸು ಗೆಲ್ಲಬೇಕು:
ಇದೇ ವೇಳೆ “ಪಾಟಿ ಸವಾಲು ಒಂದು ಕಲೆ” ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದ
ನ್ಯಾಯಾಧೀಶರಾದ ರಾಜೇಶ್ ರೈ ಕಲ್ಲಂಗಳ,
 ಸಾಕ್ಷಿಯ ವಿಚಾರಣೆ, ಪಾಟೀಸವಾಲು, ಮರು ಪರೀಕ್ಷೆಯ ಕುರಿತಾಗಿ ವಿಶ್ಲೇಷಿಸಿದರಲ್ಲದೆ ಸಾಕ್ಷಿಗಳಿಗೆ ಯಾವರೀತಿ ಪಾಟೀ ಸವಾಲು ಹಾಕಬೇಕು ಎಂಬುದನ್ನು ಕಿರಿಯ ವಕೀಲರು, ಕಾನೂನು ವಿದ್ಯಾರ್ಥಿಗಳಿಗೆ ವಿವರಿಸಿದರು.
 ಪಾಟೀಸವಾಲು ಸಾಕ್ಷಿಯ ಕೇವಲ ಸತ್ಯ, ಅಸತ್ಯ ತಿಳಿದುಕೊಳ್ಳುವುದಕ್ಕಲ್ಲ. ಇದರಿಂದ ಸಾಕ್ಷಿಗಳ ಚಾತುರ್ಯವನ್ನು ಅರಿತು ಕೊಳ್ಳಲು ಸಾಧ್ಯವಾಗುತ್ತದೆ. ಸಾಕ್ಷಿಯ ಮನಸ್ಸು ಗೆಲ್ಲುವ ಮೂಲಕ ಪಾಟೀಸವಾಲು ಹಾಕಬೇಕು ಎಂದರು.
 ಪಾಟೀ ಸವಾಲಿನ ಹಂತದಲ್ಲಿ ಪ್ರಶ್ನೆಯನ್ನು ಎಲ್ಲಿಂದ ಆರಂಭಿಸಬೇಕು, ಮಧ್ಯದಲ್ಲಿ ಏನು ಕೇಳಬೇಕು ಮತ್ತು ಅದನ್ನು ಹೇಗೆ ಮುಗಿಸಬೇಕೆಂಬ ಅರಿವು ನಮಗಿರಬೇಕು. ಅದಕ್ಕಾಗಿ ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ ಅವರು,  ಚಿಕ್ಕ ಮತ್ತು ಸ್ಪಷ್ಟವಾದ ಪ್ರಶ್ನೆ ಹಾಕಿದಾಗ ನಮಗೆ ಬೇಕಾದಂತ ಉತ್ತರವನ್ನು ಸಾಕ್ಷಿಯಿಂದ ಪಡೆದುಕೊಳ್ಳಬಹುದಾಗಿದೆ ಎಂದರು.
ಯಾವುದೇ ರೀತಿಯ ಉದ್ವೇಗಕ್ಕೆ ಒಳಗಾಗದೆ ಅತ್ಯಂತ ಸಾವಧಾನ, ನಗುಮುಖದಿಂದ ಪಾಟೀ ಸವಾಲು ಮಾಡಬೇಕು. ನಮಗೆ ಬೇಕಾದಂತಹಾ ಉತ್ತರ ಸಿಕ್ಕಿದಾಕ್ಷಣ ಪಾಠೀ ಸವಾಲುವನ್ನು ನಿಲ್ಲಿಸಬೇಕು ಎಂದರು.
 ಹೈಕೋರ್ಟಿನ ಹಿರಿಯ ನ್ಯಾಯವಾದಿ
ಡಾ. ಅರುಣ್ ಶ್ಯಾಮ್ High Court Advocate Dr̤ Arun Shyam) ಅವರು ಕ್ರಿಮಿನಲ್ ಮತ್ತು ಸಿವಿಲ್ ಕೋಟ್೯ ಗಳಲ್ಲಿರುವ ಅಂತರ್ಗತ ಶಕ್ತಿಯ ಕುರಿತು ವಿಚಾರ ಮಂಡಿಸಿದರು.

 ಹೈಕೋರ್ಟ್ ವಕೀಲೆ ಕು. ಅನನ್ಯ ರೈ ಅವರು “ಲೀಗಲ್ ಸ್ಪಕ್ಟ್ರಮ್, ದಿ ಲಿಗಸಿ, ಸ್ಕೋಪ್ ಆ್ಯಂಡ್ ರೆಸ್ಪಾನ್ಸಿಬಿಲಿಟಿ” ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು‌.
 ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪ್ರಥ್ವಿರಾಜ್ ರೈ ಕೆ. ಅವರು ಅತಿಥಿಯಾಗಿ ಭಾಗವಹಿಸಿದ್ದರು.
 ಬಂಟ್ವಾಳ ಹಿರಿಯ ನ್ಯಾಯಾಲಯದ ನ್ಯಾಯಧೀಶರಾದ ಭಾಗ್ಯಮ್ಮ, ಪ್ರಧಾನ ಸಿವಿಲ್ ನ್ಯಾಯಲಯದ ನ್ಯಾಯದೀಶರಾದ ಚಂದ್ರಶೇಖರ ಯಲ್ಲಪ್ಪ ತಲವಾರ್ ಉಪಸ್ಥಿತರಿದ್ದರು.

 ಈ ಸಂದರ್ಭದಲ್ಲಿ ಮೂಲತ: ಬಂಟ್ವಾಳ ತಾಲೂಕಿನವರೇ ಆಗಿದ್ದು, ಇದೇ ಮೊದಲ ಬಾರಿಗೆ ಕರ್ನಾಟಕ ಹೈಕೋಟ್೯ ನ್ಯಾಯಾಧೀಶರಾಗಿ ನಿಯೋಜನೆಗೊಂಡ ಹಿನ್ನಲೆಯಲ್ಲಿ  ರಾಜೇಶ್ ರೈ ಕಲ್ಲಂಗಳ ಅವರಿಗೆ ಹುಟ್ಟೂರ ಸನ್ಮಾನ ನೆರವೇರಿಸಲಾಯಿತು.

 ಹಾಗೆಯೇ ಹೈಕೋರ್ಟಿನ ಹಿರಿಯ ವಕೀಲರಾದ ಅರುಣ್ ಶ್ಯಾಮ್ ಅವರನ್ನು ಗೌರವಿಸಲಾಯಿತು.

ಬಂಟ್ವಾಳದ ಹಿರಿಯ ವಕೀಲರುಗಳಾದ ಪುಂಡಿಕಾಯಿ ನಾರಾಯಣ ಭಟ್, ಮಿತ್ತೂರು ಈಶ್ವರ ಉಪಾಧ್ಯಾಯ, ಜೆ. ಶಂಕರ ಭಟ್, ಅಶ್ವನಿ ಕುಮಾರ್ ರೈ, ವೆಂಕಟರಮಣ ಶೆಣೈ ಅವರು ಹಾಜರಿದ್ದರು.
ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚಾಡ್೯ ಕೋಸ್ತ ಎಂ. ಸ್ವಾಗತಿಸಿದರು.

 ಸುದರ್ಶನ್ ಮುಳಿಯಾರು ಪರಿಚಯಿಸಿದರು. ನ್ಯಾಯವಾದಿ ಕೆ.ಎನ್.ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

 ರಾಮಚಂದ್ರ ಶೆಟ್ಟಿ ದಂಡೆ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.