• Home  
  • ನಿವೃತ್ತ ಸ್ವಾತಂತ್ರ್ಯ ಯೋಧ ಯು.ಕೆ. ಗೋಪಾಲಕೃಷ್ಣ ರಾವ್‌ ನಿಧನ (Retired freedom fighter U.K. Gopalakrishna Rao passes away)
- ನಿಧನ

ನಿವೃತ್ತ ಸ್ವಾತಂತ್ರ್ಯ ಯೋಧ ಯು.ಕೆ. ಗೋಪಾಲಕೃಷ್ಣ ರಾವ್‌ ನಿಧನ (Retired freedom fighter U.K. Gopalakrishna Rao passes away)

Share: ನಿವೃತ್ತ ಸ್ವಾತಂತ್ರ್ಯ ಯೋಧ ಯು.ಕೆ. ಗೋಪಾಲಕೃಷ್ಣ ರಾವ್‌ ನಿಧನ ಭಾರತೀಯ ಸೇನೆಯ ಅಂಗ ಸಂಸ್ಥೆ ಜಿ.ಆರ್.ಇ.ಏ.ಏಫ್‌ (ಬಿ.ಆರ್.ಓ.) ನಲ್ಲಿ ಫಾರ್ಮಸಿಸ್ಟ್‌ ಸೇವೆ (Udupi) ಉಡುಪಿ: ನಿವೃತ್ತ ಸ್ವಾತಂತ್ರ್ಯ ಯೋಧ ಯು.ಕೆ. ಗೋಪಾಲಕೃಷ್ಣ ರಾವ್‌ (92) ರವರು ಕಳೆದ ಶುಕ್ರವಾರ  ಸ್ವಗೃಹದಲ್ಲಿ ನಿಧನ ಹೊಂದಿದರು. ಗೋಪಾಲಕೃಷ್ಣ ರಾವ್‌ ರವರು ಭಾರತೀಯ ಸೇನೆಯ ಅಂಗ ಸಂಸ್ಥೆ ಜಿ.ಆರ್.ಇ.ಏ.ಏಫ್‌ (ಬಿ.ಆರ್.ಓ.) ನಲ್ಲಿ ಫಾರ್ಮಸಿಸ್ಟ್‌ ವೃತ್ತಿಯಲ್ಲಿ ಸುಮಾರು 24 ವರ್ಷ ಸೇವೆ ಸಲ್ಲಿಸಿದ್ದಾರೆ.   ಉತ್ತರ ಭಾರತದ ಜೋಶಿ ಮಠ, ಅರುಣಾಚಲ […]

(Udupi) ಉಡುಪಿ: ನಿವೃತ್ತ ಸ್ವಾತಂತ್ರ್ಯ ಯೋಧ ಯು.ಕೆ. ಗೋಪಾಲಕೃಷ್ಣ ರಾವ್‌ (92) ರವರು ಕಳೆದ ಶುಕ್ರವಾರ  ಸ್ವಗೃಹದಲ್ಲಿ ನಿಧನ ಹೊಂದಿದರು.

ಗೋಪಾಲಕೃಷ್ಣ ರಾವ್‌ ರವರು ಭಾರತೀಯ ಸೇನೆಯ ಅಂಗ ಸಂಸ್ಥೆ ಜಿ.ಆರ್.ಇ.ಏ.ಏಫ್‌ (ಬಿ.ಆರ್.ಓ.) ನಲ್ಲಿ ಫಾರ್ಮಸಿಸ್ಟ್‌ ವೃತ್ತಿಯಲ್ಲಿ ಸುಮಾರು 24 ವರ್ಷ ಸೇವೆ ಸಲ್ಲಿಸಿದ್ದಾರೆ.

  ಉತ್ತರ ಭಾರತದ ಜೋಶಿ ಮಠ, ಅರುಣಾಚಲ ಪ್ರದೇಶ, ಸಿಕ್ಕಿಂ, ಅಂಡಮಾನ್‌ ನಿಕೋಬಾರ್‌ ಹಾಗೂ ನೆರೆ ರಾಷ್ಟ್ರ ಭೂತಾನ್‌ ನಲ್ಲಿ ತಮ್ಮ ವೃತ್ತಿ ಜೀವನ ನಡೆಸುತ್ತಿದ್ದರು.

 ಇವರ ಉತ್ತಮ ಸೇವೆಯನ್ನು ಗುರುತಿಸಿ ಭಾರತೀಯ ಸೇನೆಯು ಸಂಗ್ರಾಮ್‌ ಸೇವಾ ಮೆಡೆಲ್‌ ಮತ್ತು ವಿದೇಶ್ ಸೇವಾ ಮೆಡಲ್‌ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹಾಗೂ ಉಡುಪಿ ಪಲಿಮಾರು ಮಠದ ವಿದ್ಯಾದೀಶ ಶ್ರೀಪಾದರು ಅವರ ಪರ್ಯಾಯ ಸಮಯದಲ್ಲಿ ಶ್ರೀಕೃಷ್ಣಾನುಗ್ರಹ ಅಭಿನಂದನಾ ಪ್ರಶಸ್ತಿಯನ್ನು ನೀಡಿರುತ್ತಾರೆ.

  ಪತ್ನಿ ಶಾಂತಾ ಜಿ. ರಾವ್‌, ಐದು ಪುತ್ರಿಯರು, ಅಳಿಯಂದಿರು ಮೊಮ್ಮಕ್ಕಳು, ಮರಿ ಮಕ್ಕಳನ್ನು ಗೋಪಾಲಕೃಷ್ಣ ರಾವ್‌ ಅಗಲಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.