• Home  
  • ನೃತ್ಯನಿಕೇತನ ಕೊಡವೂರು ಸಂಸ್ಥೆಯ ಕೃಷ್ಣಪ್ರೇಮ,  ವಿಶ್ವ ನೃತ್ಯಪ್ರಭಾ ಪ್ರಶಸ್ತಿ ಪ್ರದಾನ
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ - ಸಾಂಸ್ಕೃತಿಕ

ನೃತ್ಯನಿಕೇತನ ಕೊಡವೂರು ಸಂಸ್ಥೆಯ ಕೃಷ್ಣಪ್ರೇಮ,  ವಿಶ್ವ ನೃತ್ಯಪ್ರಭಾ ಪ್ರಶಸ್ತಿ ಪ್ರದಾನ

Share: ನೃತ್ಯನಿಕೇತನ ಕೊಡವೂರು ಸಂಸ್ಥೆಯ ಕೃಷ್ಣಪ್ರೇಮ,  ವಿಶ್ವ ನೃತ್ಯಪ್ರಭಾ ಪ್ರಶಸ್ತಿ ಪ್ರದಾನ (Presentation of the ‘Krishna Prema’ and ‘Vishwa Nritya Prabha’ awards by the Nrityaniketana Kodavoor institution.) ಉಡುಪಿಯ ಐವೈಸಿ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ (Kodavooru) ಕೊಡವೂರು: ನೃತ್ಯನಿಕೇತನ ಕೊಡವೂರು ಸಂಸ್ಥೆಯಿಂದ ಪ್ರದಾನ ಮಾಡುತ್ತಿರುವ ಕೃಷ್ಣಪ್ರೇಮ ಮತ್ತು ವಿಶ್ವ ನೃತ್ಯಪ್ರಭಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉಡುಪಿಯ ಐವೈಸಿ ಸಭಾಂಗಣದಲ್ಲಿ ನಡೆಯಿತು.    ನೃತ್ಯ ಕ್ಷೇತ್ರದ ಸಂಗೀತ ವಿಭಾಗದಲ್ಲಿ ಸಾಧನೆ […]

(Kodavooru) ಕೊಡವೂರು: ನೃತ್ಯನಿಕೇತನ ಕೊಡವೂರು ಸಂಸ್ಥೆಯಿಂದ ಪ್ರದಾನ ಮಾಡುತ್ತಿರುವ ಕೃಷ್ಣಪ್ರೇಮ ಮತ್ತು ವಿಶ್ವ ನೃತ್ಯಪ್ರಭಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉಡುಪಿಯ ಐವೈಸಿ ಸಭಾಂಗಣದಲ್ಲಿ ನಡೆಯಿತು.

   ನೃತ್ಯ ಕ್ಷೇತ್ರದ ಸಂಗೀತ ವಿಭಾಗದಲ್ಲಿ ಸಾಧನೆ ಮಾಡಿದ ರಾಘವೇಂದ್ರ ಆಚಾರ್ಯ ಮಣಿಪಾಲ, ಸಂಗೀತ ಬಾಲಚಂದ್ರ, ವರ್ಣಾಲಂಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಸನ್ನ ಹಿರಿಯಡ್ಕರವರಿಗೆ ಕೃಷ್ಣಪ್ರೇಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

  ಹಿರಿಯ ನೃತ್ಯ ಗುರುಗಳಾದ ವಿದ್ವಾನ್ ಯು.ಕೆ. ಪ್ರವೀಣ್ ಮಂಗಳೂರು ಇವರಿಗೆ ವಿಶ್ವ ನೃತ್ಯಪ್ರಭಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

  ಪ್ರೊ. ಅರವಿಂದ ಹೆಬ್ಬಾರ್, ವಿಶ್ವನಾಥ್ ಶೆಣೈ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕನಿರ್ದೇಶಕರಾದ ಶ್ರೀಮತಿ ಪೂರ್ಣಿಮಾರವರು ಅತಿಥಿಗಳಾಗಿ ಭಾಗವಹಿಸಿದ್ದರು.

  ಪ್ರೇಮಾ ರಾವ್, ಮಾನಸಿ ಸುಧೀರ್ ಉಪಸ್ಥಿತರಿದ್ದರು.

  ಕು. ಸ್ವಸ್ತಿಭಟ್ ಪ್ರಾರ್ಥಿಸಿದರು. ವಿದ್ವಾನ್ ಸುಧೀರ್ ರಾವ್ ಕೊಡವೂರು ಸ್ವಾಗತಿಸಿದರು. ಚಂದ್ರಶೇಖರ ರಾವ್ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.