• Home  
  • ರಾಜ್ಯ ಪುರುಷ ಆಯೋಗ ರಚನೆಗೆ ಡಾ. ಅರ್ಜುನ ಬಂಡಿ ಆಗ್ರಹ. (Dr. for the formation of State Men’s Commission. Arjuna Bandi Demands).
- PROBLEMS

ರಾಜ್ಯ ಪುರುಷ ಆಯೋಗ ರಚನೆಗೆ ಡಾ. ಅರ್ಜುನ ಬಂಡಿ ಆಗ್ರಹ. (Dr. for the formation of State Men’s Commission. Arjuna Bandi Demands).

Share: ರಾಜ್ಯ ಪುರುಷ ಆಯೋಗ ರಚನೆಗೆ ಡಾ. ಅರ್ಜುನ ಬಂಡಿ ಆಗ್ರಹ.   ಪುರುಷರ ಕಲ್ಯಾಣ ಮತ್ತು ರಕ್ಷಣಾ ಸಮಿತಿಯ ರಾಜ್ಯ ಕಾರ್ಯದರ್ಶಿ ಡಾ. ಅರ್ಜುನ ಬಂಡಿ ಆಗ್ರಹ  (Vijayapura) ವಿಜಯಪುರ : ಪುರುಷರ ಹಕ್ಕುಗಳ ರಕ್ಷಣೆ, ಅನ್ಯಾಯ ಹಾಗೂ ದೌರ್ಜನ್ಯ ತಡೆಗೆ ಪ್ರತ್ಯೇಕ ಆಯೋಗ ಅಗತ್ಯ ಎಂದು ಪುರುಷರ ಕಲ್ಯಾಣ ಮತ್ತು ರಕ್ಷಣಾ ಸಮಿತಿಯ ರಾಜ್ಯ ಕಾರ್ಯದರ್ಶಿ ಡಾ. ಅರ್ಜುನ ಬಂಡಿ ಸರಕಾರವನ್ನು ಆಗ್ರಹಿಸಿದ್ದಾರೆ.   ರಾಜ್ಯದಲ್ಲಿ ಮಹಿಳೆಯರ ಹಕ್ಕುಗಳು, ಸುರಕ್ಷತೆ ಮತ್ತು ಸಮಾನತೆಗೆ ಸರ್ಕಾರ ನೀಡುತ್ತಿರುವ ಮಹತ್ವದಷ್ಟೇ ಪುರುಷರ […]

 (Vijayapura) ವಿಜಯಪುರ : ಪುರುಷರ ಹಕ್ಕುಗಳ ರಕ್ಷಣೆ, ಅನ್ಯಾಯ ಹಾಗೂ ದೌರ್ಜನ್ಯ ತಡೆಗೆ ಪ್ರತ್ಯೇಕ ಆಯೋಗ ಅಗತ್ಯ ಎಂದು ಪುರುಷರ ಕಲ್ಯಾಣ ಮತ್ತು ರಕ್ಷಣಾ ಸಮಿತಿಯ ರಾಜ್ಯ ಕಾರ್ಯದರ್ಶಿ ಡಾ. ಅರ್ಜುನ ಬಂಡಿ ಸರಕಾರವನ್ನು ಆಗ್ರಹಿಸಿದ್ದಾರೆ.

  ರಾಜ್ಯದಲ್ಲಿ ಮಹಿಳೆಯರ ಹಕ್ಕುಗಳು, ಸುರಕ್ಷತೆ ಮತ್ತು ಸಮಾನತೆಗೆ ಸರ್ಕಾರ ನೀಡುತ್ತಿರುವ ಮಹತ್ವದಷ್ಟೇ ಪುರುಷರ ಹಕ್ಕುಗಳು, ಸುರಕ್ಷತೆ, ಮಾನಸಿಕ ಆರೋಗ್ಯ ಹಾಗೂ ನ್ಯಾಯಕ್ಕೂ ಸಮಾನ ಆದ್ಯತೆ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಪುರುಷರ ಹಕ್ಕುಗಳ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಪ್ರತ್ಯೇಕವಾಗಿ ಪುರುಷ ಆಯೋಗವನ್ನು ರಚಿಸಬೇಕು.

   ಸಮಾಜದಲ್ಲಿ ಪುರುಷರು ಕೂಡ ಅನೇಕ ರೀತಿಯ ಕೌಟುಂಬಿಕ ಸಮಸ್ಯೆಗಳು, ಮಾನಸಿಕ ಕಿರುಕುಳ, ಸುಳ್ಳು ಆರೋಪಗಳು, ಆರ್ಥಿಕ ಶೋಷಣೆ, ಸಾಮಾಜಿಕ ಒತ್ತಡ ಹಾಗೂ ಕಾನೂನು ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಮತ್ತು ನ್ಯಾಯ ಪಡೆಯಲು ಸೂಕ್ತ ವೇದಿಕೆ ಇಲ್ಲದೆ ಅನೇಕ ಪುರುಷರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

  ಪುರುಷ ಆಯೋಗ ರಚನೆಯಾದಲ್ಲಿ ಪುರುಷರ ಮೇಲಿನ ಅನ್ಯಾಯ, ದೌರ್ಜನ್ಯ ಮತ್ತು ಶೋಷಣೆಯ ದೂರುಗಳನ್ನು ಪರಿಶೀಲಿಸಲು, ಸಂತ್ರಸ್ತರಿಗೆ ಕಾನೂನು ನೆರವು ಒದಗಿಸಲು, ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಅನುಕೂಲವಾಗಲಿದೆ.

  ಇದು “ಪುರುಷರ ವಿರುದ್ಧ ಮಹಿಳೆಯರ ಹೋರಾಟವಲ್ಲ. ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ನಡೆಯುವ ಹೋರಾಟವಾಗಿದೆ”.

   ಸಮಾನತೆ ಎಂದರೆ ಎಲ್ಲರಿಗೂ ಸಮಾನ ನ್ಯಾಯ ದೊರೆಯುವುದೇ ಆಗಿದೆ ಎಂದು ಡಾ. ಅರ್ಜುನ ಬಂಡಿ ಪ್ರತಿಪಾದಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.