• Home  
  • ನ್ಯೂ ಪನ್ವೆಲ್ ವಿಧಾನ ಸಭಾ ಕ್ಷೇತ್ರ ದಲ್ಲಿ ಬಿಜೆಪಿ ಅಭ್ಯರ್ಥಿಪರ ಬಂಟ್ವಾಳ ಕಾರ್ಯಕರ್ತರಿಂದ ಅಬ್ಬರದ ಪ್ರಚಾರ (Compaigning by Batwala activist fo BJP Canidate in New panvel Vidhna Sabha Constituency)
- ರಾಜಕೀಯ

ನ್ಯೂ ಪನ್ವೆಲ್ ವಿಧಾನ ಸಭಾ ಕ್ಷೇತ್ರ ದಲ್ಲಿ ಬಿಜೆಪಿ ಅಭ್ಯರ್ಥಿಪರ ಬಂಟ್ವಾಳ ಕಾರ್ಯಕರ್ತರಿಂದ ಅಬ್ಬರದ ಪ್ರಚಾರ (Compaigning by Batwala activist fo BJP Canidate in New panvel Vidhna Sabha Constituency)

Share: ನ್ಯೂ ಪನ್ವೆಲ್ ವಿಧಾನ ಸಭಾ ಕ್ಷೇತ್ರ ದಲ್ಲಿ ಬಿಜೆಪಿ ಅಭ್ಯರ್ಥಿಪರ ಬಂಟ್ವಾಳ ಕಾರ್ಯಕರ್ತರಿಂದ ಅಬ್ಬರದ ಪ್ರಚಾರ (Bantwala) ಬಂಟ್ವಾಳ: ಮಹಾರಾಷ್ಟ್ರ ರಾಜ್ಯ ವಿಧಾನ ಸಭೆಗೆ ನಡೆಯಲಿರುವ ಚುನಾವಣೆಗೆ ಅಖಾಡ ಸಿದ್ದವಾಗಿದ್ದು, ಅಬ್ಬರದ ಪ್ರಚಾರ ಕಾರ್ಯವು ನಡೆಯುತ್ತಿದೆ. ಈ ಮಧ್ಯೆ ಬಿಜೆಪಿ ಬಂಟ್ವಾಳ ಮಂಡಲದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ತಂಡ ನ್ಯೂ ಪನ್ವೆಲ್ ವಿಧಾನ ಸಭಾ ಕ್ಷೇತ್ರ ದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ನ್ಯೂ ಪನ್ವೆಲ್ ವಿಧಾನ ಸಭಾ ಕ್ಷೇತ್ರದ ಬಿಜೆಪಿಯ ಹಾಲಿ […]

ನ್ಯೂ ಪನ್ವೆಲ್ ವಿಧಾನ ಸಭಾ ಕ್ಷೇತ್ರ ದಲ್ಲಿ ಬಿಜೆಪಿ ಅಭ್ಯರ್ಥಿಪರ ಬಂಟ್ವಾಳ ಕಾರ್ಯಕರ್ತರಿಂದ ಅಬ್ಬರದ ಪ್ರಚಾರ

(Bantwala) ಬಂಟ್ವಾಳ: ಮಹಾರಾಷ್ಟ್ರ ರಾಜ್ಯ ವಿಧಾನ ಸಭೆಗೆ ನಡೆಯಲಿರುವ ಚುನಾವಣೆಗೆ ಅಖಾಡ ಸಿದ್ದವಾಗಿದ್ದು, ಅಬ್ಬರದ ಪ್ರಚಾರ ಕಾರ್ಯವು ನಡೆಯುತ್ತಿದೆ.

ಈ ಮಧ್ಯೆ ಬಿಜೆಪಿ ಬಂಟ್ವಾಳ ಮಂಡಲದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ತಂಡ ನ್ಯೂ ಪನ್ವೆಲ್ ವಿಧಾನ ಸಭಾ ಕ್ಷೇತ್ರ ದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ನ್ಯೂ ಪನ್ವೆಲ್ ವಿಧಾನ ಸಭಾ ಕ್ಷೇತ್ರದ ಬಿಜೆಪಿಯ ಹಾಲಿ ಶಾಸಕ ಪ್ರಶಾಂತ್ ಠಾಕೂರ್‌ರವರ ಪರವಾಗಿ ರಾಯ್‌ಘಡ್ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಲಕ್ಶ್ಮೀಶ (ಸುಜೀತ್ ) ಪೂಜಾರಿ ನೇತೃತ್ವದಲ್ಲಿ ಪನ್ವೆಲ್  ಪೇಟೆಯಲ್ಲಿ ಮನೆ, ಮನೆ ಸಂಪರ್ಕಿಸುವ ಮೂಲಕ  ಬಿಜೆಪಿ ಬಂಟ್ವಾಳ ಮಂಡಲದ ಕಾರ್ಯಕರ್ತರು ಮಂಗಳವಾರ  ಮತಯಾಚನೆಗೈದರು.

 ಈ ಸಂದರ್ಭದಲ್ಲಿ  ಬಿಜೆಪಿ ಬಂಟ್ವಾಳ ಮಂಡಲ ಬಿಜೆಪಿ ಕಾರ್ಯದರ್ಶಿ ಪ್ರಭಾಕರ ಪ್ರಭು, ಕರ್ಪೆ ಶಕ್ತಿ ಕೇಂದ್ರ ಪ್ರಮುಖ್ ತೇಜಸ್ ಪೂಜಾರಿ, ಪ್ರಮುಖರಾದ ನವೀನ ಪೂಜಾರಿ ಕರ್ಪೆ, ಸದಾನಂದ ಪೂಜಾರಿ ಕರ್ಪೆ, ತೇಜಸ್ವಿನಿ ಲಕ್ಶ್ಮೀಶ ಪೂಜಾರಿ ಪನ್ವೆಲ್, ನ್ಯಾಯವಾದಿ ಸವೀನಾ ಬಂಗೇರ ಪನ್ವೆಲ್, ಶಿವದಾಸನ್ ಪನ್ವೆಲ್, ಸರಸ್ವತಿ ಪನ್ವೆಲ್ ಮತ್ತಿತರ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.