• Home  
  • ನ.10 ರಂದು ಕೋಟ ಗಾಂಧಿ ಮೈದಾನದಲ್ಲಿ ಪಂಚವರ್ಣ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ (10th Nov at Kota Gandhi Maidan Panchavarna Kannada Rajyothsava Prashasthi)
- ಕರಾವಳಿ - ಜೀವನಶೈಲಿ

ನ.10 ರಂದು ಕೋಟ ಗಾಂಧಿ ಮೈದಾನದಲ್ಲಿ ಪಂಚವರ್ಣ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ (10th Nov at Kota Gandhi Maidan Panchavarna Kannada Rajyothsava Prashasthi)

Share: ನ.೧೦ ರಂದು ಕೋಟ ಗಾಂಧಿ ಮೈದಾನದಲ್ಲಿ ಪಂಚವರ್ಣ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಚಿತ್ರರಂಗದ ಶ್ರೇಷ್ಠ ನಟ ದೊಡ್ಡಣ್ಣರವರಿಗೆ (Kannada Film Actor Doddanna) ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಸದ್ಭಾವನಾ ೨೦೨೩ ನಾಡುನುಡಿಗೆ ಭಾವ ನಮನ ಎಂಬ ಶೀರ್ಷಿಕೆಯಡಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದ್ದು, ಇದೇ ನ. ೧೦ರ ಶುಕ್ರವಾರ ಸಂಜೆ ೬ಕ್ಕೆ ಕೋಟದ ಗಾಂಧಿ ಮೈದಾನದಲ್ಲಿ ಈ ಕಾರ್ಯಕ್ರಮ […]

ನ.೧೦ ರಂದು ಕೋಟ ಗಾಂಧಿ ಮೈದಾನದಲ್ಲಿ ಪಂಚವರ್ಣ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಚಿತ್ರರಂಗದ ಶ್ರೇಷ್ಠ ನಟ ದೊಡ್ಡಣ್ಣರವರಿಗೆ (Kannada Film Actor Doddanna) ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಸದ್ಭಾವನಾ ೨೦೨೩ ನಾಡುನುಡಿಗೆ ಭಾವ ನಮನ ಎಂಬ ಶೀರ್ಷಿಕೆಯಡಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದ್ದು, ಇದೇ ನ. ೧೦ರ ಶುಕ್ರವಾರ ಸಂಜೆ ೬ಕ್ಕೆ ಕೋಟದ ಗಾಂಧಿ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

 ಪ್ರತಿವರ್ಷ ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಸಾಧಕರಿಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು, ಈ ಬಾರಿ ಕನ್ನಡ ಚಿತ್ರರಂಗದ ಶ್ರೇಷ್ಠ ನಟ ಎಸ್. ದೊಡ್ಡಣ ರವರಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದೆ. ಪ್ರಶಸ್ತಿ ಬೆಳ್ಳಿ ಫಲಕ ಒಳಗೊಂಡಿದೆ.

 ಇದೇ ವೇಳೆ ವಿಶೇಷ ಅಭಿನಂದನೆಯನ್ನು ಅಮ್ಮಚ್ಚಿ ಎಂಬ ನೆನಪು ಚಿತ್ರದ ನಾಯಕ ರಂಗನಟ ಡಾ. ರಾಧಕೃಷ್ಣ ಉರಾಳ (DR Radha Krishna Urala) ಇವರಿಗೆ ನೀಡಲಿದ್ದು, ವಿಶೇಷ ಪುರಸ್ಕಾರವನ್ನು ಪರಿಸರ ಸ್ನೇಹಿ ಸಂಘಟನೆ ಕ್ಲೀನ್ ತ್ರಾಸಿ ಮರವಂತೆ ತಂಡಕ್ಕೆ ನೀಡಲಿದೆ.

 ಅಲ್ಲದೆ ಪಂಚವರ್ಣ ಮಹಿಳಾ ಸಾಧಕಿ  ಪುರಸ್ಕಾರವನ್ನು ಸಮಾಜ ಸೇವಕಿ ಆಶಾ ವಿ ಪಡೆಯಲಿದ್ದಾರೆ.

ಪ್ರತಿಭಾ ಪುರಸ್ಕಾರ, ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ವಿದ್ಯಾರ್ಥಿವೇತನ, ಸ್ಥಳೀಯ ಅಂಗನವಾಡಿಗೆ ಸಮವಸ್ತ್ರ, ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ ದತ್ತಿನಿಧಿ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಈ ವೇದಿಕೆಯಲ್ಲಿ ನಡೆಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ನೃತ್ಯ, ಮಯೂರಿ ನೃತ್ಯ ತಂಡ ಕುಂಭಾಶಿ, ಮಂಗಳೂರಿನ  ಪ್ರಸಿದ್ಧ ನಾಟಕ ತಂಡ ದೇವದಾಸ್ ಕಾಪಿಕಾಡ್ (Devadas Kapikad) ನಿರ್ದೇಶನದ ಹಾಸ್ಯಮಯ ನಾಟಕ ʼಹೆಸರಿಟ್ಟಾಯ್ತುʼ ಪ್ರದರ್ಶನಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಅಜಿತ್ ಆಚಾರ್ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.