• Home  
  • ಪಟ್ಲ ಟ್ರಸ್ಟ್ ಯಕ್ಷಾಶ್ರಯದಿಂದ ಕಲಾವಿದರಿಗೆ ಮನೆ ನಿರ್ಮಾಣಕ್ಕೆ ಚೆಕ್ ವಿತರಣೆ
- ಕರಾವಳಿ

ಪಟ್ಲ ಟ್ರಸ್ಟ್ ಯಕ್ಷಾಶ್ರಯದಿಂದ ಕಲಾವಿದರಿಗೆ ಮನೆ ನಿರ್ಮಾಣಕ್ಕೆ ಚೆಕ್ ವಿತರಣೆ

Share: ಪಟ್ಲ ಟ್ರಸ್ಟ್ ಯಕ್ಷಾಶ್ರಯದಿಂದ ಕಲಾವಿದರಿಗೆ ಮನೆ ನಿರ್ಮಾಣಕ್ಕೆ ಚೆಕ್ ವಿತರಣೆ ಮಂಗಳೂರು: ಯಕ್ಷಧ್ರುವ  ಫೌಂಡೇಶನ್ ಟ್ರಸ್ಟ್ ನಿಂದ  “ಯಕ್ಷಾಶ್ರಯ” ಯೋಜನೆಯಿಂದ ಕಂಕನಾಡಿ ಬಳಿಯ “ಅಟ್ಟಣೆ” ಹೋಟೆಲ್ ನ ಸಭಾಂಗಣದಲ್ಲಿ  ಆಯೋಜಿಸಲಾಗಿದ್ದ ಕೇಂದ್ರೀಯ ಸಮಿತಿಯ ಸಭೆಯಲ್ಲಿ ರೂಪಾಯಿ 15 ಲಕ್ಷ ಮೊತ್ತವನ್ನು ಫಲಾನುಭವಿ ಕಲಾವಿದರಿಗೆ  ವಿತರಿಸಲಾಯಿತು. ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.  ಕಲಾವಿದರಿಗೆ ಮನೆಕಟ್ಟಲು ದಾನಿಗಳಿಂದ ಸಂಗ್ರಹಿಸಿ ನೀಡುವ ಸಹಾಯ ಧನವನ್ನು ಮನೆ ನಿರ್ಮಾಣದ ಸದ್ಬಳಕೆಯಲ್ಲಿ ಒಳ್ಳೆಯ ಮನೆ ಕಟ್ಟಿ […]

ಪಟ್ಲ ಟ್ರಸ್ಟ್ ಯಕ್ಷಾಶ್ರಯದಿಂದ ಕಲಾವಿದರಿಗೆ ಮನೆ ನಿರ್ಮಾಣಕ್ಕೆ ಚೆಕ್ ವಿತರಣೆ

ಮಂಗಳೂರು: ಯಕ್ಷಧ್ರುವ  ಫೌಂಡೇಶನ್ ಟ್ರಸ್ಟ್ ನಿಂದ  “ಯಕ್ಷಾಶ್ರಯ” ಯೋಜನೆಯಿಂದ ಕಂಕನಾಡಿ ಬಳಿಯ “ಅಟ್ಟಣೆ” ಹೋಟೆಲ್ ನ ಸಭಾಂಗಣದಲ್ಲಿ  ಆಯೋಜಿಸಲಾಗಿದ್ದ ಕೇಂದ್ರೀಯ ಸಮಿತಿಯ ಸಭೆಯಲ್ಲಿ ರೂಪಾಯಿ 15 ಲಕ್ಷ ಮೊತ್ತವನ್ನು ಫಲಾನುಭವಿ ಕಲಾವಿದರಿಗೆ  ವಿತರಿಸಲಾಯಿತು.

ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

 ಕಲಾವಿದರಿಗೆ ಮನೆಕಟ್ಟಲು ದಾನಿಗಳಿಂದ ಸಂಗ್ರಹಿಸಿ ನೀಡುವ ಸಹಾಯ ಧನವನ್ನು ಮನೆ ನಿರ್ಮಾಣದ ಸದ್ಬಳಕೆಯಲ್ಲಿ ಒಳ್ಳೆಯ ಮನೆ ಕಟ್ಟಿ ನೆಮ್ಮದಿಯ ಜೀವನ ನಡೆಸಿ ಎಂದರು.

   ಸಭೆಯಲ್ಲಿ ಉದ್ಯಮಿ ಮುಡಿಪು ಘಟಕದ  ಕರುಣಾಕರ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.

ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿಗಳಾದ  ಪ್ರದೀಪ್ ಆಳ್ವ ಕದ್ರಿ ಮತ್ತು ಬಾಳ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.