ಪಡುಬಿದ್ರಿ ಗಣಪತಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
(Padubidri) ಪಡುಬಿದ್ರಿ : ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ಶರಣ್ಯ ಪರಿಸರ ಸಂಘದ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಶಾಲೆಯ ಸಮೀಪದ ಪಡುಬಿದ್ರಿಯ ಪರಿಸರದಲ್ಲಿ ಬೇವು, ತೇಗ, ಗಂಧ, ರಕ್ತಚಂದನ, ಹಲಸು ಮೊದಲಾದ ಗಿಡಗಳನ್ನು ನೆಟ್ಟು ನೀರೆರೆದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಇವರು ಆಗಮಿಸಿ, ಸಸ್ಯ ಸಂಪತ್ತಿನ ವರ್ಧನೆ ಮತ್ತು ಸಂರಕ್ಷಣೆಯ ವಿಧಾನದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪಡುಬಿದ್ರಿ ಸಿ.ಎ.ಬ್ಯಾಂಕಿನ ಅಧ್ಯಕ್ಷ ವೈ. ಸುಧೀರ್ ಕುಮಾರ್, ಪಡುಬಿದ್ರಿ ಪಂಚಾಯತ್ ಸದಸ್ಯ ಗಣೇಶ ಕೋಟ್ಯಾನ್, ಸದಾಶಿವ ಆಚಾರ್ಯ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಾರಾಯಣ ರಾವ್ ದಂಪತಿಗಳು ಮತ್ತು ಹಳೆ ವಿದ್ಯಾರ್ಥಿ ಸಂಘದ ರಮಾಕಾಂತ ರಾವ್ರವರು ಕಾರ್ಯಕ್ರಮದ ಆಯೋಜನೆಗೆ ಪೂರ್ಣ ಸಹಕಾರ ನೀಡಿದರು.
ಸಂಸ್ಥೆಯ ಅಧ್ಯಾಪಕರು, ಹಳೆ ವಿದ್ಯಾರ್ಥಿ ಸಂಘದ ಗಣೇಶ ರಾವ್, ಶ್ರೀ ರಾಜೇಶ ಶೇರಿಗಾರ್ , ಶ್ರೀ ಶಶಿಕಾಂತ , ಶ್ರೀ ಕೇಶವ ರಾವ್, ಸತೀಶ ಆಚಾರ್ಯ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಬಳಿಕ ನಾರಾಯಣ ರಾವ್ರವರು ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದರು.

