ಪಡುಬಿದ್ರಿ : ತುಳುನಾಡ ಕಲಾವಿದರು ವತಿಯಿಂದ 24ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ
(Padubidri) ಪಡುಬಿದ್ರಿ : ಪಡುಬಿದ್ರಿ ತುಳುನಾಡ ಕಲಾವಿದರು ಇದರ ವತಿಯಿಂದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ 24ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಲ್ಲಟೆ ಶ್ರೀ ಧರ್ಮ ಜಾರಂದಯಾ ಸೇವಾ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು.
“ಕಲೆ ಹಾಗು ನಾಟಕವು ಕಲಿಯುವವರಿಗೆ ಅವರ ಸೃಜನಶೀಲತೆ ಸುಧಾರಿಸಲು ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅವರ ಆತ್ಮ ವಿಶ್ವಾಸವನ್ನು ಸುಧಾರಿಸುತ್ತದೆ. ದೃಷ್ಟಿಗೋಚರ ಕಲಿಕೆಗೆ ಸಹಾಯ ಮಾಡುತ್ತದೆ. ಕಲೆಯು ಜನರಿಗೆ ಮೌಲ್ಯಯುತ ನೀತಿ ಪಾಠವನ್ನು ತಿಳಿಸುವ ಕೊಂಡಿಯಾಗಿದೆ. ಮನಸ್ಸಿಗೆ ನೆಮ್ಮದಿಯಿಂದ ಸದಾ ಕ್ರಿಯಾಶೀಲವಾಗಿರಲು ಕಲೆ ಪ್ರಮುಖ ಭಾಗವಾಗಿದೆ. ಅದ್ದರಿಂದ ಯುವ ಕಲಾವಿದರಿಗೆ ಉತ್ತೇಜನವನ್ನು ನೀಡುವ ಹಾಗೂ ಉತ್ತಮ ಅವಕಾಶವನ್ನು ಕಲ್ಪಿಸುವ ಕೆಲಸ ಕಾರ್ಯಗಳು ಸಂಘ ಸಂಸ್ಥೆಗಳು ಮಾಡಬೇಕಾಗಿದೆ. ಈ ನಿಟ್ಚಿನಲ್ಲಿ ತುಳುನಾಡ ಕಲಾವಿದರು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ರಕ್ಷಣಾ ಇಲಾಖೆಯ ಭಾರತೀಯ ನೌಕದಳದ ಸೇನಾಧಿಕಾರಿ ನಟರಾಜ್ ಪಿ.ಎಸ್ ಹೇಳಿದರು.
ಈ ಸಂದರ್ಭದಲ್ಲಿ ರಕ್ಷಣಾ ಇಲಾಖೆಯ ಭಾರತೀಯ ನೌಕಾದಳದ ನಿವೃತ್ತ ಸೇನಾಧಿಕಾರಿ ನಟರಾಜ್ ಪಿ.ಎಸ್ , ಸಾಮಾಜಿಕ ಹೋರಾಟಗಾರ ಶೇಖರ್ ಹೆಜ್ಮಾಡಿ, ಸಮಾಜ ಸೇವಕ ಕೆ. ಸುರೇಶ್ ಕುಮಾರ್, ರಾಷ್ಟ್ರೀಯ ಅತ್ಲೆಟಿಕ್ ಶಾಟ್ ಪುಟ್ ಕ್ರೀಡಾ ಪಟು ಅನುರಾಗ್. ಜಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
2024-25 ರ ಸಾಲಿನ “ತುಳುನಾಡ ಸಿರಿ ಪ್ರಶಸ್ತಿ” ಯನ್ನು ಕಲಾ ಕ್ಷೇತ್ರದಲ್ಲಿ ಸಾಧನೆಗೈದ ರಂಗಭೂಮಿ ಕಲಾವಿದೆ ಕು. ಯಶೋಧ ಪಡುಬಿದ್ರಿ ರವರಿಗೆ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ್ ಪಡುಬಿದ್ರಿ ವಹಿಸಿದರು.
ಈ ಸಂದರ್ಭದಲ್ಲಿ ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಿಶ್ವಾಸ್ ಅಮೀನ್, ಪಡುಬಿದ್ರಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ, ಗ್ರಾ.ಪಂ. ಸದಸ್ಯ ಗಣೇಶ್ ಕೋಟ್ಯಾನ್, ಓಂಕಾರ ಕಾಸ್ಟೋಮ್ಸ್ & ಕಲಾ ಸಂಗಮದ ಪಾಲುದಾರೆ ಗೀತಾ ಅರುಣ್, ಸಾಮಾಜಿಕ ಹೋರಾಟಗಾರ ಶೇಖರ್ ಹೆಜ್ಮಾಡಿ ಕಡಲ್ ಫಿಶ್ ಕ್ರಿಕೆಟರ್ಸ್ ಸಂಸ್ಥೆಯ ಅಧ್ಯಕ್ಷ ಚೇತನ್ ಪಡುಬಿದ್ರಿ, ಶ್ರೀ ಆದಿಶಕ್ತಿ ಮಂತ್ರದೇವತೆ ಮತ್ತು ಕೂರಗಜ್ಜ ಸನ್ನಿಧಾನದ ಧರ್ಮದರ್ಶಿ ಸುಧಾಕರ್ ಸಾಲ್ಯಾನ್ , ಪಡುಬಿದ್ರಿ ರೋಟರಿ ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ರಾಜ್ಯಧ್ಯಕ್ಷ ರಚನ್ ಸಾಲ್ಯಾನ್, ಭಗವತಿ ಫ್ರೆಂಡ್ಸ್ ಗ್ರೂಪ್ ಸ್ಥಾಪಕಾಧ್ಯಕ್ಷ ಯುವರಾಜ್ ಕುಲಾಲ್ ಉಪಸ್ಥಿತರಿದ್ದರು.
ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಕಾರ್ಯದರ್ಶಿ ಸುಧಾಕರ್ ಕೆ. ವಂದಿಸಿದರು. ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು.

