• Home  
  • ಪಡುಬಿದ್ರಿ ರೋಟರಿ ಕ್ಲಬ್ ಅತಿಥ್ಯದಲ್ಲಿ ವಲಯ – 5ರ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ (Zone-5 Zone Level Cultural Competition hosted by Padubidri Rotary Club)
- ಮನೋರಂಜನೆ

ಪಡುಬಿದ್ರಿ ರೋಟರಿ ಕ್ಲಬ್ ಅತಿಥ್ಯದಲ್ಲಿ ವಲಯ – 5ರ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ (Zone-5 Zone Level Cultural Competition hosted by Padubidri Rotary Club)

Share: ಪಡುಬಿದ್ರಿ ರೋಟರಿ ಕ್ಲಬ್ ಅತಿಥ್ಯದಲ್ಲಿ ವಲಯ – 5ರ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಸ್ಪರ್ಧೆ ಉದ್ಘಾಟಿಸಿದ ಪಡುಬಿದ್ರಿ ಸಹಕಾರಿ  ಸೊಸೈಟಿ ಅಧ್ಯಕ್ಷ ವೈ‌. ಸುಧೀರ್ ಕುಮಾರ್  (Padubidri) ಪಡುಬಿದ್ರಿ :  ಪಡುಬಿದ್ರಿ ರೋಟರಿ ಕ್ಲಬ್ ಅತಿಥ್ಯದಲ್ಲಿ ವಲಯ -5 ರ ವತಿಯಿಂದ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಪಡುಬಿದ್ರಿಯ ಸುಜಾತ ಆಡಿಟೋರಿಯಂನಲ್ಲಿ ನಡೆಯಿತು.    ಕಾರ್ಯಕ್ರಮವನ್ನು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷ ವೈ‌. ಸುಧೀರ್ ಕುಮಾರ್  ಉದ್ಘಾಟಿಸಿದರು.    ಅವರು ಮಾತನಾಡಿ, ಸದಾ […]

(Padubidri) ಪಡುಬಿದ್ರಿ :  ಪಡುಬಿದ್ರಿ ರೋಟರಿ ಕ್ಲಬ್ ಅತಿಥ್ಯದಲ್ಲಿ ವಲಯ -5 ರ ವತಿಯಿಂದ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಪಡುಬಿದ್ರಿಯ ಸುಜಾತ ಆಡಿಟೋರಿಯಂನಲ್ಲಿ ನಡೆಯಿತು.

   ಕಾರ್ಯಕ್ರಮವನ್ನು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷ ವೈ‌. ಸುಧೀರ್ ಕುಮಾರ್  ಉದ್ಘಾಟಿಸಿದರು.

   ಅವರು ಮಾತನಾಡಿ, ಸದಾ ಸಾಮಾಜಿಕ ಚಟುವಟಿಕೆಯಿಂದ ಕೂಡಿರುವ ರೋಟರಿ ಸದಸ್ಯರಿಗೆ  ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಿಂದ ಸದಸ್ಯರ ಭಾವನೆ ಬಲಪಡಿಸಲು ಸಾಧ್ಯ. ಒಗ್ಗೂಡಿ ಹಂಚಿಕೆಯ ಅನುಭವಗಳನ್ನು ರೋಟರಿ ಸದಸ್ಯರಿಗೆ ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಉತ್ತೇಜಿಸಲು  ವೇದಿಕೆಯನ್ನು ಒದಗಿಸುತ್ತದೆ ಎಂದರು.  

   ಪಡುಬಿದ್ರಿ ರೋಟರಿ ಅಧ್ಯಕ್ಷ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

  ವೇಷಧಾರಿ ಶ್ರೀನಿವಾಸ್ ಕಂಚಿನಡ್ಕ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

 ಈ ಸಂದರ್ಭದಲ್ಲಿ ವಲಯ ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ, ವಲಯ ಕಾರ್ಯದರ್ಶಿ ಅಲ್ವಿನ್ ನ್ಯಾರಿ  ಪಿಂಟೊ, ವಲಯ ತರಬೇತುದಾರ ಅನಿಲ್ ಡೇಸಾ, ಪೂರ್ವ ಸಹಾಯಕ ಗವರ್ನರ್ ಗಣೇಶ್ ಅಚಾರ್ಯ ಉಚ್ಚಿಲ,  ಜಿಲ್ಲಾ ಸಾಂಸ್ಕೃತಿಕ ವೈಸ್ ಚಯರ್ ಮೆನ್  ಸುರೇಂದ್ರ ನಾಯಕ್, ಸಂಯೋಜಕ ಸಂದೀಪ್ ಬಂಗೇರ , ವಲಯ ಸಾಂಸ್ಕೃತಿಕ ನಿರ್ದೇಶಕ ಸಂತೋಷ್ ಪಡುಬಿದ್ರಿ , ಪವನ್ ಸಾಲ್ಯಾನ್ ಉಪಸ್ಥಿತರಿದ್ದರು

 ವಲಯ ಸಾಂಸ್ಕೃತಿಕ ಸ್ಪರ್ಧೆಯ ವಿಜೇತರು

ಜೂನಿಯರ್ ನೃತ್ಯ ವ್ಯಯಕ್ತಿಕ ವಿಭಾಗದಲ್ಲಿ ಪ್ರಥಮ  ಸಾನ್ವಿ ಕಾರ್ಕಳ, ದ್ವಿತೀಯ ಯಜ್ಞನಿಕ ಭಟ್, ಜಾನಪದ ಗೀತೆ  ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸುಶ್ಮಿತಾ ಎರ್ಮಾಳ್, ದ್ವಿತೀಯ ಲಕ್ಷ್ಮೀ ಹೆಗ್ಡೆ, ಚಿತ್ರ ಗೀತೆ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸುಬ್ರಹ್ಮಣ್ಯ ಉಪಾಧ್ಯಾಯ  ಕಾರ್ಕಳ, ದ್ವಿತೀಯ ಮೋಹನ್ ಕರ್ಕೇರ ಪಡುಬಿದ್ರಿ, ಏಕಪಾತ್ರಾಭಿನಯ ವಿಭಾಗದಲ್ಲಿ ಪ್ರಥಮ ಬಿ. ಎಸ್ ಅಚಾರ್ಯ ಪಡುಬಿದ್ರಿ, ದ್ವಿತೀಯ ಸುಬ್ರಹ್ಮಣ್ಯ ಕಾರ್ಕಳ, ಜೋಡಿ ಹಾಡುಗಾರಿಕೆ ವಿಭಾಗದಲ್ಲಿ ಪ್ರಥಮ ಧಾರಿಣಿ ಮತ್ತು ಸುಬ್ರಹ್ಮಣ್ಯ, ದ್ವಿತೀಯ ಶಿವಕುಮಾರ್ ಮತ್ತು ದೀಪ ಅರುಣ್, ಸೀನಿಯರ್‌ ವೈಯಕ್ತಿಕ ನೃತ್ಯ ವಿಭಾಗದಲ್ಲಿ ಮನೀಶಾ ದೇವಾಡಿಗ ಕಾರ್ಕಳ, ಸುಬ್ರಹ್ಮಣ್ಯ ಕಾರ್ಕಳ,  ಗ್ರೂಪ್  ಡಾನ್ಸ್ ವಿಭಾಗದಲ್ಲಿ ಪ್ರಥಮ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ, ದ್ವಿತೀಯ ರೋಟರಿ ಕ್ಲಬ್ ಕಾರ್ಕಳ, ಸಮೂಹ ಹಾಡುಗಾರಿಕೆ ವಿಭಾಗದಲ್ಲಿ ಪ್ರಥಮ  ರೋಟರಿ ಕ್ಲಬ್ ಕಾರ್ಕಳ, ದ್ವಿತೀಯ ರೋಟರಿ ಕ್ಲಬ್ ಪಡುಬಿದ್ರಿ ಪ್ರಶಸ್ತಿ ಗಳಿಸಿದರು.

 ಚಾಂಪಿಯನ್ ಪ್ರಶಸ್ತಿ

ಪ್ರಥಮ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ, ದ್ವಿತೀಯ  ರೋಟರಿ ಕ್ಲಬ್ ಕಾರ್ಕಳ ಪ್ರಶಸ್ತಿ ಪಡೆದಿದ್ದಾರೆ.

   ಸಮಾರೋಪ ಸಮಾರಂಭ

   ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪಡುಬಿದ್ರಿ ರೋಟರಿ ಅಧ್ಯಕ್ಷ ಸುನಿಲ್ ಕುಮಾರ್ ವಹಿಸಿದ್ದರು.

   ವೇದಿಕೆಯಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ ಸುಕುಮಾರ್, ವಲಯ ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ, ವಲಯ ಸೇನಾನಿಗಳಾದ ಸಂದೀಪ್ ಬಂಗೇರ, ಜಾನ್ ಅರ್ ಡಿಸಿಲ್ವ, ಜಿಲ್ಲಾ ಸಾಂಸ್ಕೃತಿಕ ವೈಸ್ ಚಯರ್ ಮೆನ್ ಸುರೇಂದ್ರ ನಾಯಕ್,  ವಲಯ ಸಾಂಸ್ಕೃತಿಕ ನಿರ್ದೇಶಕ ಸಂತೋಷ್ ಪಡುಬಿದ್ರಿ, ಕ್ಲಬ್ ಸಾಂಸ್ಕೃತಿಕ ನಿರ್ದೇಶಕಿ ಯಶೋಧ ಪಡುಬಿದ್ರಿ ಉಪಸ್ಥಿತರಿದ್ದರು.

  ಸುನಿಲ್ ಕುಮಾರ್ ಸ್ವಾಗತಿಸಿದರು. ಪವನ್ ಸಾಲ್ಯಾನ್ ವಂಸದಿಸಿದರು. ಸಂತೋಷ್ ನಂಬಿಯಾರ್ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.