ಪಡುಬಿದ್ರಿ ರೋಟರಿ ಕ್ಲಬ್ ಗೆ 2023-24 ರ ಸಾಲಿನ ಕಾರ್ಯಕ್ರಮಕ್ಕೆ 11 ಜಿಲ್ಲಾ ಪ್ರಶಸ್ತಿಗಳು
(Shimogga) ಶಿವಮೊಗ್ಗ : ಶಿವಮೊಗ್ಗದ ಕೂಸ್ಮ ಕ್ಲಬ್ ಸಭಾಂಗಣದಲ್ಲಿ ನಡೆದ 2023-24 ರ ಸಾಲಿನ ಪ್ರಗತಿ ಜಿಲ್ಲಾ ಅರ್ವಾಡ್ ನೈಟ್ ಕಾರ್ಯಕ್ರಮದಲ್ಲಿ 2023-24 ರ ಸಾಲಿನ ಕಾರ್ಯಕ್ರಮಕ್ಕೆ ಪಡುಬಿದ್ರಿ ರೋಟರಿ ಕ್ಲಬ್ ಗೆ 11 ಜಿಲ್ಲಾ ಪ್ರಶಸ್ತಿ ಲಭಿಸಿದೆ.
ನಿಯೋಜಿತ ಜಿಲ್ಲಾ ಗರ್ವನರ್ ಬಿ.ಎಮ್ ಭಟ್, ನಿಕಟ ಪೂರ್ವ ಜಿಲ್ಲಾ ಗರ್ವನರ್ ಬಿ.ಸಿ ಗೀತಾ, ಜಿಲ್ಲಾ ಕಾರ್ಯದರ್ಶಿ ಡಾ. ಪ್ರೀತಿ ಮೋಹನ್, ಅವಾರ್ಡ್ ಚೇರ್ಮನ್ ಡಾ. ಜಯ ಗೌರಿ ಪ್ರಶಸ್ತಿ ವಿತರಿಸಿದರು.
ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ನ ಪೂರ್ವ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಪೂರ್ವ ಸಹಾಯಕ ಗರ್ವನರ್ ಗಳಾದ ಶೈಲೇಂದ್ರ ರಾವ್, ವೈ. ಸುಧೀರ್ ಕುಮಾರ್, ಪೂರ್ವ ಅಧ್ಯಕ್ಷರಾದ ಪಿ. ಕೃಷ ಬಂಗೇರ, ಗೀತಾ ಅರುಣ್, ಗಣೇಶ್ ಅಚಾರ್ಯ ಎರ್ಮಾಳು, ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ನಿಕಟ ಪೂರ್ವ ಕಾರ್ಯದರ್ಶಿ ಪವನ್ ಸಾಲ್ಯಾನ್ , ಕಾರ್ಯದರ್ಶಿ ಹೇಮಲತಾ ಸುವರ್ಣ ಸದಸ್ಯರಾದ ಶೋಭಾ ಚಂದ್ರಶೇಖರ್ , ಅರತಿ ಘೋರೈ ಉಪಸ್ಥಿತರಿದ್ದರು.

