• Home  
  • ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಹಗಲು ರಥೋತ್ಸವ ಸಂಪನ್ನ (Padubidri Sri Mahalingeshwara Temple Rathothsava)
- ಧಾರ್ಮಿಕ - ವಿಡಿಯೋ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಹಗಲು ರಥೋತ್ಸವ ಸಂಪನ್ನ (Padubidri Sri Mahalingeshwara Temple Rathothsava)

Share: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಹಗಲು ರಥೋತ್ಸವ ಸಂಪನ್ನ  (ಚಿತ್ರ ಕೃಪೆ: ರವಿ ಡಿಜಿಟಲ್ಸ್‌ ಪಡುಬಿದ್ರಿ) ಪಡುಬಿದ್ರಿ : ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಮಹೋತ್ಸವವು ಗುರುವಾರ ಸಹಸ್ರಾರು ಭಕ್ತಾದಿಗಳ ಕೂಡುವಿಕೆಯೊಂದಿಗೆ ಸಂಪನ್ನಗೊಂಡಿತು. ಇದರ ಸಲುವಾಗಿ ಶ್ರೀ ದೇವರ ಮಧ್ಯಾಹ್ನ ರಥಾರೋಹಣವು ಶ್ರೀ ಕ್ಷೇತ್ರದ ತಂತ್ರಿವರ್ಯರಾದ ವೇದಮೂರ್ತಿ ಕಂಬ್ಳಕಟ್ಟ ಶಿವರಾಜ ಉಪಾಧ್ಯಾಯರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಯಿತು. ಬೆಳಿಗ್ಗೆ ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ನಿತ್ಯಬಲಿಗಳು ನಡೆದ ಬಳಿಕ ರಥಶುದ್ಧಿ, […]

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಹಗಲು ರಥೋತ್ಸವ ಸಂಪನ್ನ 

(ಚಿತ್ರ ಕೃಪೆ: ರವಿ ಡಿಜಿಟಲ್ಸ್‌ ಪಡುಬಿದ್ರಿ)

ಪಡುಬಿದ್ರಿ : ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಮಹೋತ್ಸವವು ಗುರುವಾರ ಸಹಸ್ರಾರು ಭಕ್ತಾದಿಗಳ ಕೂಡುವಿಕೆಯೊಂದಿಗೆ ಸಂಪನ್ನಗೊಂಡಿತು.

ಇದರ ಸಲುವಾಗಿ ಶ್ರೀ ದೇವರ ಮಧ್ಯಾಹ್ನ ರಥಾರೋಹಣವು ಶ್ರೀ ಕ್ಷೇತ್ರದ ತಂತ್ರಿವರ್ಯರಾದ ವೇದಮೂರ್ತಿ ಕಂಬ್ಳಕಟ್ಟ ಶಿವರಾಜ ಉಪಾಧ್ಯಾಯರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಯಿತು.

ಬೆಳಿಗ್ಗೆ ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ನಿತ್ಯಬಲಿಗಳು ನಡೆದ ಬಳಿಕ ರಥಶುದ್ಧಿ, ಸಾಮೂಹಿಕ ಪ್ರಾರ್ಥನೆ  ನೆರವೇರಿತು. ತದನಂತರ ಉತ್ಸವ ಬಲಿ ನಡೆದು ಶ್ರೀ ದೇವರ ರಥಾರೋಹಣ ಜರಗಿತು.

ಶ್ರೀ ದೇಗುಲದ ಅರ್ಚಕರಾದ ವೈ. ಗುರುರಾಜ ಭಟ್, ಪದ್ಮನಾಭ ಭಟ್ ಹೆಜಮಾಡಿ, ಶ್ರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರರಾಜ ಅರಸು ಕಿನ್ಯಕ್ಕ ಬಲ್ಲಾಳರು ಮತ್ತು ಪಡುಬಿದ್ರಿ ಪೇಟೆಮನೆ ಭವಾನಿ ಶಂಕರ ಹೆಗ್ಡೆ, ಕಾರ್ಯನಿರ್ವಹಣಾಧಿಕಾರಿ ಅಶೋಕ್ ಕೋಟೆಕಾರ್, ವೈ. ಗಣಪತಿ ಭಟ್, ವಿವಿಧ ಗುತ್ತುಬರ್ಕೆಗಳ ಪ್ರಮುಖರು, ಸೀಮೆಯ ಭಕ್ತಾದಿಗಳು, ಶ್ರೀ ದೇವಸ್ಥಾನದ ಸಿಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ, (Kaup MLA Gurme Suresh Shetty) ನವೀನ್‌ಚಂದ್ರ ಜೆ.ಶೆಟ್ಟಿ, ವಿಶುಕುಮಾರ್ ಶೆಟ್ಟಿಬಾಲ್, ವೈ.ಸುಕುಮಾರ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪ್ರಶಾಂತ್ ಶೆಣೈ, ರಾಜೇಶ್ ಕೋಟ್ಯಾನ್, ಮಾಧವ ಸಿ. ಶೆಟ್ಟಿ, ಪ್ರಸಾದ್ ಅಂಚನ್, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಗಣೇಶ್ ಕೋಟ್ಯಾನ್, ವಿಷ್ಣುಮೂರ್ತಿ ಅಚಾರ್ಯ, ಶರತ್ ಶೆಟ್ಟಿ, ನವೀನ್ ಎನ್.ಶೆಟ್ಟಿ, ಸಂಪತ್ ಆಚಾರ್ಯ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಸಂತೋಷ್ ಶೆಟ್ಟಿ ಪಲ್ಲವಿ, ಮಿಥುನ್ ಆರ್.ಹೆಗ್ಡೆ, ಅಶೋಕ್ ಸಾಲ್ಯಾನ್, ಶಶಿಕಾಂತ್ ಪಡುಬಿದ್ರಿ ಮತ್ತಿತರ ಗಣ್ಯರು ಭಾಗವಹಿಸಿದ್ದರು.

ರಾತ್ರಿ ಶ್ರೀಮನ್ಮಹಾರಥೋತ್ಸವ, ಭೂತ ಬಲಿ, ಕವಾಟ ಬಂಧನ ಮುಂತಾದ ಧಾರ್ಮಿಕ ಕಾರ್ಯಗಳು ಸಂಪನ್ನಗೊಂಡವು.

Leave a comment

Your email address will not be published. Required fields are marked *

eMedia Kannada  @2025. All Rights Reserved.