ಪಡುಬಿದ್ರಿ: ಸಂವಿಧಾನ ಶಿಲ್ಪಿ ಡಾ. ಬಿ.ಅರ್ ಅಂಬೇಡ್ಕರ್ ರವರ 133 ನೇ ಜಯಂತಿ ಅಚರಣೆ.
(Padubidri) ಪಡುಬಿದ್ರಿ: ಈ ದೇಶದ ಸಮಸ್ತ ಮಹಿಳೆಯರಿಗೆ ಅಸ್ತಿ ಹಕ್ಕು, ಉದ್ಯೋಗ ಹೆರಿಗೆ ಭತ್ತೆ, ಸಮಾನ ವೇತನ ಅನೇಕ ಸಂವಿಧಾನ ಬದ್ದ ಹಕ್ಕುಗಳನ್ನು ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಕಾರಣರಾದವರು ಡಾ. ಬಿ.ಅರ್ ಅಂಬೇಡ್ಕರ್ ಎಂದು ದಲಿತ ಮುಖಂಡ, ಚಿಂತಕ, ಹೋರಾಟಗಾರ ಶೇಖರ್ ಹೆಜ್ಮಾಡಿ(Shekhar Hejmadi) ಹೇಳಿದರು.
ಅವರು ಪಡುಬಿದ್ರಿ ಬೋರ್ಡ್ ಶಾಲೆಯ ಸಭಾಭವನದಲ್ಲಿ ದ.ಸಂ.ಸ. ಅಂಬೇಡ್ಕರ್ ವಾದ ಪಡುಬಿದ್ರಿ ಗ್ರಾಮ ಶಾಖೆ ಹಾಗೂ ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಅರ್ ಅಂಬೇಡ್ಕರ್‌ರವರ 133 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಸಮಸ್ತ ದೇಶ ವಾಸಿಗಳಿಗೆ ದುಂಡು ಮೇಜಿನ ಪರಿಷತ್ ನಲ್ಲಿ ವಾದ ಮಾಡುವ ಮೂಲಕ ಮತದಾನದ ಹಕ್ಕನ್ನು ನೀಡಿರುತ್ತಾರೆ. ರಿಸರ್ವ್ ಬ್ಯಾಂಕ್ ಅನ್ನು ಸ್ಥಾಪಿಸುವುದರ ಮೂಲಕ ದೇಶದ ಆರ್ಥಿಕತೆಗೆ ಭಾಷ್ಯ ಬರೆದವರು ಡಾ! ಬಿ.ಅರ್ ಅಂಬೇಡ್ಕರ್. ದೇಶದ ಸಮಸ್ತ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು ಮಾತ್ರವಲ್ಲ ಈ ದೇಶದಲ್ಲಿ ಜಾರಿಯಾಲ್ಲಿರುವ ಕಾಯ್ದೆಗಳನ್ನು ರೂಪಿಸಿ, ಸಮಾಜದ ಬದುಕಿಗೆ ಸಂವಿಧಾನ ಬದ್ದವಾಗಿ ಒತ್ತು ಕೂಟ್ಟವರು ಡಾ. ಬಿ.ಅರ್ ಅಂಬೇಡ್ಕರ್. ವಿಶ್ವಶ್ರೇಷ್ಠ ಭಾರತದ ಸಂವಿಧಾನವನ್ನು ಉಳಿಸಿಕೂಳ್ಳುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಹಾಗೂ ಅಂಬೇಡ್ಕರ್ ರವರಿಗೆ ನೀಡುವ ವಿಶೇಷ ಗೌರವ ಎಂದು ಹೆಜ್ಮಾಡಿ ಹೇಳಿದರು
ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ್ ಪಡುಬಿದ್ರಿ (Santhosh padubidri), ದ.ಸಂ.ಸ ಅಂಬೇಡ್ಕರ್ ವಾದ ಪಡುಬಿದ್ರಿ ಗ್ರಾಮ ಶಾಖಾ ಪ್ರಧಾನ ಸಂಚಾಲಕ ಕೀರ್ತಿ ಕುಮಾರ್, ಪಡುಬಿದ್ರಿ ಗ್ರಾ.ಪಂ. ಸದಸ್ಯ ರಮೀಜ್ ಹುಸೇನ್ ಕರ್ನಾಟಕ ದಲಿತ ಸಂಘಷ ಸಮಿತಿ ಜಿಲ್ಲಾ ಖಜಾಂಚಿ ಸದಾಶಿವ ಕೋಟ್ಯಾನ್, ರಾಜ್ಯ ದ.ಸಂ.ಸ ಮಹಿಳಾ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ್
ದ.ಸಂ.ಸ. ಅಂಬೇಡ್ಕರ್ ವಾದ ಪಡುಬಿದ್ರಿ ಗ್ರಾಮ ಶಾಖಾ ಮಹಿಳಾ ಸಂಚಾಲಕಿ ಆಶಾ ಕರ್ಕೇರ, ದ.ಸಂ.ಸ ಅಂಬೇಡ್ಕರ್ ವಾದ ಪಡುಬಿದ್ರಿ ಗ್ರಾಮ ಶಾಖಾ ಕಾರ್ಯದರ್ಶಿ ಸುರೇಶ್ ಎರ್ಮಾಳು ಉಪಸ್ಥಿತರಿದ್ದರು.
ಶಿವಾನಂದ ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿಠಲ್ ಮಾಸ್ಟರ್ ವಂದಿಸಿದರು.

