ಪಡುಬಿದ್ರಿ ಸಹಕಾರಿ ವ್ಯವಸಾಯಿಕಾ ಸೊಸೈಟಿಗೆ ವಿವಿಧ ರಾಜ್ಯಗಳ ನಬಾಡ್೯ ಅಧಿಕಾರಿಗಳ ನಿಯೋಗ ಭೇಟಿ
ಮಾಹಿತಿ ನೀಡಿದ ಪಡುಬಿದ್ರಿ ಸಿ.ಎ.ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್
(Padubidri) ಪಡುಬಿದ್ರಿ : ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆ ತಿಳಿಯಲು ಮಂಗಳೂರಿನ ನಬಾಡ್೯ ಸಂಸ್ಥೆಯ ನೇತೃತ್ವದಲ್ಲಿ ವಿವಿಧ ರಾಜ್ಯಗಳ ನಬಾಡ್೯ ಅಧಿಕಾರಿಗಳ ನಿಯೋಗ ಶುಕ್ರವಾರ ಪಡುಬಿದ್ರಿ ಸಿ.ಎ. ಸೊಸೈಟಿಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದರು.
ಪಡುಬಿದ್ರಿ ಸಿ.ಎ.ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್ ಸಮಪ್ರಕ್ ಮಾಹಿತಿ ನೀಡಿದರು.
ಈ ಸಂದರ್ಭ ನಬಾರ್ಡ್ ಡಿಜಿಎಮ್ ಯೋಗೀಶ್ ಮಾತನಾಡಿ, ನಬಾಡ್೯ ತರಬೇತಿ ಸಂಸ್ಥೆ ಮಂಗಳೂರಿನಲ್ಲಿದ್ದು, ಇಲ್ಲಿ ಬ್ಯಾಂಕ್, ಎನ್ ಜಿ ಒ, ಸರಕಾರಿ ಸಂಸ್ಥೆಗಳ ಅಧಿಕಾರಿಗಳಿಗೆ ಬ್ಯಾಂಕಿಂಗ್ ಮತ್ತು ಕೃಷಿ ಅಭಿವೃದ್ಧಿ ಸಂಬಂಧಿಸಿದ ಮಾಹಿತಿ ತರಬೇತಿಗಳನ್ನು ನೀಡಲಾಗುತ್ತದೆ. ದೇಶದ ವಿವಿಧ ರಾಜ್ಯಗಳ ಅಧಿಕಾರಿಗಳಿಗೆ ಉಡುಪಿ, ದ.ಕ ಜಿಲ್ಲೆಯ ಸಹಕಾರಿ ಸಂಸ್ಥೆಗಳ ಯಶಸ್ಸಿನ ಬಗ್ಗೆ, ಕಾರ್ಯವೈಖರಿ ತಿಳಿಯಲು ಸಹಾಯಕವಾಗಿದೆ. ತರಬೇತಿ ನಂತರ ಅವರ ರಾಜ್ಯದ ನಬಾಡ್೯ ಮೂಲಕ ಮಾಡಬಹುದಾದ ಕಾರ್ಯಗಳಿಗೆ ಪೂರಕವಗಿದೆ. ಕರ್ನಾಟಕ ಸಹಿತ 44 ಅಧಿಕಾರಿಗಳು ಈ ತಂಡದಲ್ಲಿದ್ದಾರೆ ಎಂದರು.
ಈ ಸಂದರ್ಭ ಪಡುಬಿದ್ರಿ ಸಿ.ಎ.ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್, ಬ್ಯಾಂಕ್ ನಿರ್ದೆಶಕರುಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್. ಉಪಸ್ಥಿತರಿದ್ದರು.

