• Home  
  • ಪಡುಹಿತ್ಲು ಶ್ರೀ ಜಾರಂದಾಯ ದೈವಸ್ಥಾನದ 4 ನೇ ಗುರಿಕಾರ ಉಮಾನಾಥ್ ಗೋಪಾಲ್ ಅಮೀನ್‌ ನಿಧನ (Umanath Gopal Amin, the 4th Gurikara of Paduhitlu Shri Jarandaya Devasthanum, passed away)
- ನಿಧನ

ಪಡುಹಿತ್ಲು ಶ್ರೀ ಜಾರಂದಾಯ ದೈವಸ್ಥಾನದ 4 ನೇ ಗುರಿಕಾರ ಉಮಾನಾಥ್ ಗೋಪಾಲ್ ಅಮೀನ್‌ ನಿಧನ (Umanath Gopal Amin, the 4th Gurikara of Paduhitlu Shri Jarandaya Devasthanum, passed away)

Share: ಪಡುಹಿತ್ಲು ಶ್ರೀ ಜಾರಂದಾಯ ದೈವಸ್ಥಾನದ 4 ನೇ ಗುರಿಕಾರ ಉಮಾನಾಥ್ ಗೋಪಾಲ್ ಅಮೀನ್‌ ನಿಧನ (Paubidri) ಪಡುಬಿದ್ರಿ: ಪಡುಹಿತ್ಲು ಸೋಮನಾಥ ನಿಲಯದ ಉಮಾನಾಥ್ ಗೋಪಾಲ್ ಅಮೀನ್‌ರವರು ಇಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಉಮಾನಾಥ್ ಅಮೀನ್‌ರವರು ಪಡುಹಿತ್ಲು ಶ್ರೀ ಜಾರಂದಾಯ ದೈವಸ್ಥಾನದ 4 ನೇ ಗುರಿಕಾರರಾಗಿ,  ಜಾರಂದಾಯ ಸೇವಾಸಮಿತಿ ಇದರ ಅನ್ನದಾನ ಸೇವಾ ಸಮಿತಿಯಲ್ಲಿ  ಕಾರ್ಯದರ್ಶಿಯಾಗಿ, ಲೆಕ್ಕ ಪತ್ರದಲ್ಲಿ ಕೂಡ ಹಲವಾರು ವರ್ಷ ಸೇವೆ ಸಲ್ಲಿಸಿದ್ದಾರೆ.   ಬಿಲ್ಲವ ಸಂಘ ಪಡುಬಿದ್ರಿ ಇಲ್ಲಿಯೂ ಹಲವಾರು ವರ್ಷ ಸೇವೆಯನ್ನು […]

(Paubidri) ಪಡುಬಿದ್ರಿ: ಪಡುಹಿತ್ಲು ಸೋಮನಾಥ ನಿಲಯದ ಉಮಾನಾಥ್ ಗೋಪಾಲ್ ಅಮೀನ್‌ರವರು ಇಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.

ಉಮಾನಾಥ್ ಅಮೀನ್‌ರವರು ಪಡುಹಿತ್ಲು ಶ್ರೀ ಜಾರಂದಾಯ ದೈವಸ್ಥಾನದ 4 ನೇ ಗುರಿಕಾರರಾಗಿ,  ಜಾರಂದಾಯ ಸೇವಾಸಮಿತಿ ಇದರ ಅನ್ನದಾನ ಸೇವಾ ಸಮಿತಿಯಲ್ಲಿ  ಕಾರ್ಯದರ್ಶಿಯಾಗಿ, ಲೆಕ್ಕ ಪತ್ರದಲ್ಲಿ ಕೂಡ ಹಲವಾರು ವರ್ಷ ಸೇವೆ ಸಲ್ಲಿಸಿದ್ದಾರೆ.

  ಬಿಲ್ಲವ ಸಂಘ ಪಡುಬಿದ್ರಿ ಇಲ್ಲಿಯೂ ಹಲವಾರು ವರ್ಷ ಸೇವೆಯನ್ನು ಸಲ್ಲಿಸಿದ್ದು, ಪಡುಬಿದ್ರಿ ಶ್ರೀ ಕೊಡಮಣಿತಾಯ ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿಯೂ ಕೂಡ ಸೇವೆ ಸಲ್ಲಿಸಿದ್ದಾರೆ.

 ಉಮಾನಾಥ್‌ರವರು ಎಲ್ಲರ ಮೆಚ್ಚುಗೆಯ ಕಿನ್ನಯಣ್ಣ ಆಗಿದ್ದು, ಅವರ ನಿಧನದ ಶೋಕ ಸಮಸ್ತ ಆತ್ಮೀಯರಲ್ಲಿ ಕಾಡಿದೆ.

ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ, ಹಾಗೂ ಪರಮಾತ್ಮನು ಅವರ ಕುಟುಂಬ ಪರಿವಾರದವರೆಲ್ಲರಿಗೂ ಅವರಿಲ್ಲದ ದು:ಖ ಸಹಿಸುವ ಶಕ್ತಿಯನ್ನು ನೀಡಲಿ.

Leave a comment

Your email address will not be published. Required fields are marked *

eMedia Kannada  @2025. All Rights Reserved.