ಪಣಿಯಾಡಿ ಪ್ರಶಸ್ತಿಗೆ ಬರಹಗಾರರಿಂದ ತುಳು ಕಾದಂಬರಿ ಹಸ್ತಪ್ರತಿ ಆಹ್ವಾನ
ತುಳು ಚಳವಳಿಯ ಪ್ರವರ್ತಕರಾಗಿದ್ದ ದಿ. ಎಸ್.ಯು. ಪಣಿಯಾಡಿ ಅವರ ಸ್ಮರಣಾರ್ಥ ನೀಡುವ ಪ್ರಶಸ್ತಿ
(Udupi) ಉಡುಪಿ: ಉಡುಪಿ ತುಳುಕೂಟದ ಆಶ್ರಯದಲ್ಲಿ ನಡೆಯುವ ‘ಎಸ್.ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ’ಆಯ್ಕೆಗಾಗಿ ಬರಹಗಾರರಿಂದ ತುಳು ಕಾದಂಬರಿಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ.
ತುಳು ಚಳವಳಿಯ ಪ್ರವರ್ತಕರಾಗಿದ್ದ ದಿ. ಎಸ್.ಯು. ಪಣಿಯಾಡಿ ಅವರ ಸ್ಮರಣಾರ್ಥ ನೀಡಲಾಗುವ ಈ ಪ್ರಶಸ್ತಿಗೆ ಈವರೆಗೆ ಯಾವುದೇ ಬಹುಮಾನಕ್ಕೆ ಆಯ್ಕೆಯಾಗಿರದ ಮತ್ತು ಮುದ್ರಣಗೊಳ್ಳದ ತುಳು ಕಾದಂಬರಿಗಳ ಹಸ್ತಪ್ರತಿಗಳನ್ನು ಆಸಕ್ತ ಬರಹಗಾರರು ಕಳುಹಿಸಿಕೊಡಬಹುದಾಗಿದೆ. ಅನುವಾದಿತ ಕೃತಿಗಳಿಗೆ ಅವಕಾಶವಿರುವುದಿಲ್ಲ.
ಕಾದಂಬರಿಯ ಹಸ್ತಪ್ರತಿಯು ಪ್ರಶಸ್ತಿಗೆ ಆಯ್ಕೆಯಾದಲ್ಲಿ ಬರಹಗಾರರು ಡೆಮಿ 1/8 ಆಕಾರದಲ್ಲಿ 120 ಪುಟಗಳಿಗೆ ಮೀರದಂತೆ ತುಳುಕೂಟದ ಮಾರ್ಗದರ್ಶನದಂತೆ ಮುದ್ರಿಸತಕ್ಕದ್ದು. ಕಾದಂಬರಿಯು ತುಳುನಾಡಿನ ಭೌಗೋಳಿಕ ಚಿತ್ರಣ, ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಅಂಶಗಳಿಂದ ಕೂಡಿದ್ದು, ಪೌರಾಣಿಕ, ಐತಿಹಾಸಿಕ, ಜಾನಪದ, ಸಾಮಾಜಿಕ ವಸ್ತುಗಳನ್ನು ಆಧರಿಸಿರಬಹುದು. ಕಾದಂಬರಿ ಪ್ರಶಸ್ತಿಯು 8 ಸಾವಿರ ರೂ. ನಗದು ಹಾಗೂ ಪ್ರಶಸ್ತಿಪತ್ರ, ಫಲಕಗಳನ್ನು ಒಳಗೊಂಡಿರುತ್ತದೆ.
ಕಾದಂಬರಿ ಹಸ್ತಪ್ರತಿಯನ್ನು ಪ್ರಕಾಶ ಸುವರ್ಣ ಕಟಪಾಡಿ (ಪಣಿಯಾಡಿ ಕಾದಂಬರಿ ಸ್ಪರ್ಧೆ ಸಂಚಾಲಕರು) ಯಶಸ್, ಕೋಟೆ ಬೀಡಿನ ಬಳಿ ಕೋಟೆ ಗ್ರಾಮ ಕಟಪಾಡಿ ಅಂಚೆ, ಉಡುಪಿ ಜಿಲ್ಲೆ-574105 ಇವರಿಗೆ ಏ. 30ರೊಳಗೆ ಕಳುಹಿಸಿಕೊಡಬಹುದು.
ಹೆಚ್ಚಿನ ಮಾಹಿತಿಗಳಿಗೆ ಮೊಬೈಲ್: 9964019229 ಸಂಪರ್ಕಿಸಬಹುದು ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

