ಕಾಪು: ಬ್ಲಾಕ್ ಕಾಂಗ್ರೆಸ್ (ದ) ನೂತನ ಅಧ್ಯಕ್ಷ ವೈ ಸುಕುಮಾರ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಪದಪ್ರದಾನ
(Kaup) ಕಾಪು : ಕಾಪು ಬ್ಲಾಕ್ ಕಾಂಗ್ರೆಸ್ (ದ) ನೂತನ ಅಧ್ಯಕ್ಷ ವೈ ಸುಕುಮಾರ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಪದಪ್ರದಾನ ಕಾರ್ಯಕ್ರಮ ಕಾಪು ರಾಜೀವ ಭವನದಲ್ಲಿ ಮಂಗಳವಾರ ಸಂಜೆ ನೆರವೇರಿತು.
ಪದಪ್ರದಾನ ಕಾರ್ಯಕ್ರಮ ನೆರವೇರಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಮನೆ ಮನೆಗೆ ಭೇಟಿ ನೀಡಿ ಕಾರ್ಯಕರ್ತರು, ಜನರೊಂದಿಗೆ ಬೆರೆಯುವ ಮನಸ್ಥಿತಿ ಕಾಂಗ್ರೆಸ್ಸಿಗರಿಗೆ ಇರಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದಿಂದ 57ಸಾವಿರ ಕೋಟಿ ಜನರಿಗೆ ಸೌಲಭ್ಯ ಸಿಗುತ್ತಿದೆ. ಇದರ ಸಂಪೂರ್ಣ ಲಾಭವನ್ನು ನಮ್ಮ ಪಕ್ಷ ಪಡೆಯಬೇಕಿದೆ ಎಂದರು.
ಸುಹಾಸ್ ಶೆಟ್ಟಿ ಪ್ರಕರಣನ್ನು ಎನ್ಐಎ ಗೆ ಕೊಡುವ ಕೇಂದ್ರ ಸರಕಾರ, ಕರಾವಳಿಯಲ್ಲಿ ನಡೆದ ಇನ್ನುಳಿದ ಪ್ರಕರಣಗಳನ್ನು ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ ಐವಾನ್ ಡಿಸೋಜಾ, ಒಟ್ಟಾರೆಯಾಗಿ ಬಿಜೆಪಿ ಪಕ್ಷ ಕೊಲೆಯಲ್ಲೂ ರಾಜಕೀಯ ಮಾಡುತ್ತಿದೆ ಎಂದರು.
ಸಮರ್ಪಣೆ, ಸಂಕಲ್ಪ ಮತ್ತು ಸಂಘರ್ಷದ ಧ್ಯೇಯದಂದಿಗೆ ನಮ್ಮ ಕಾರ್ಯಕರ್ತರು ಕಾರ್ಯ ನಿರ್ವಹಿಸಿದರೆ ವಿಜಯ ನಮ್ಮದೇ ಎಂದ ಅವರು, ನೂತನ ಕಾರ್ಯಕಾರಿ ಸಮಿತಿಗೆ ಶುಭ ಹಾರೈಸಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಮುಂದಿನ ಚುನಾವಣೆ ಕಾರ್ಯಕರ್ತರ ಚುನಾವಣೆ. ಸಂವಿಧಾನದ ಆಶಯ ಶಿಥಿಲಗೊಳಿಸುವವರ ಮಧ್ಯೆ ಅದರ ಆಶಯವನ್ನು ಉಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯ ನಿರ್ವಹಿಸುತ್ತಿದೆ. ಬದುಕು ಕಟ್ಟುವ ಕಾರ್ಯ ಕಾಂಗ್ರೆಸ್ ಪಕ್ಷದಿಂದ ಆಗಿದೆ. ಬಡವರ ಸವಲತ್ತಿಗೆ ಬಿಟ್ಟಿ ಗ್ಯಾರಂಟಿ ಎನ್ನುವ ಬಿಜೆಪಿ ಪಕ್ಷ, ಬಂಡವಾಳ ಷಾಹಿಗಳ ಸಾಲ ಮನ್ನಾ ಕಾರ್ಯ ಮಾಡುತ್ತಿದೆ ಎಂದರು.
ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ಕಾಪು ಕಾಂಗ್ರೆಸ್ ಮಾಜಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ನವೀನ್ ಚಂದ್ರ ಜೆ ಶೆಟ್ಟಿ, ನವೀನ್ ಎನ್ ಶೆಟ್ಟಿ, ವಿಶ್ವಾಸ್ ಅಮೀನ್, ನಾಗೇಶ್ ಉದ್ಯಾವರ, ಶಾಂತಲತಾ ಶೆಟ್ಟಿ, ಶರ್ಫುದ್ದೀನ್ ಶೇಖ್, ಗಂಗಾಧರ ಸುವರ್ಣ ಎರ್ಮಾಳು, ಮಹಾಬಲ ಕುಂದರ್, ಪ್ರಶಾಂತ್ ಜತ್ತನ್ನ, ದಿನೇಶ್ ಕಿಣಿ, ಗೀತಾ ವಾಗ್ಳೆ, ಶಿವಾಜಿ ಸುವರ್ಣ, ವೈ ಸುಧೀರ್ ಕುಮಾರ್, ರಮೇಶ್ ಕಾಂಚನ್, ನಿಯಾಝ್ ಅತ್ರಾಡಿ, ರಿಯಾಝ್ ಪಡುಬಿದ್ರಿ, ಕಾಪು ದಿವಾಕರ ಶೆಟ್ಟಿ, ಸುಮಲತಾ ಸುವರ್ಣ, ಆಶಾ ಕಟಪಾಡಿ, ಜ್ಯೋತಿ ಮೆನನ್, ತಸ್ಲೀನ್ ಅರ್ಹಾ, ಗ್ಲಾಡಿಸ್ ಅಲ್ಮೇಡಾ, ಸುನೀಲ್ ಡಿ ಬಂಗೇರ, ಸುಲೋಚನಾ ಬಂಗೇರಾ, ರಮೀಝ್ ಹುಸೈನ್, ಸುಚರಿತ ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.
ಅಮೀರ್ ಕಾಪು ನಿರೂಪಿಸಿ, ವಂದಿಸಿದರು.
