ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಸೊಸೈಟಿ ವಾರ್ಷಿಕ ಮಹಾಸಭೆ
ಶೇ 15 ಡಿವಿಡೆಂಡ್ ಘೋಷಣೆ
(Udupi) ಉಡುಪಿ: ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋಪರೆಟಿವ್ ಸೊಸೈಟಿಯ 24 ನೇ ವಾರ್ಷಿಕ ಮಹಾಸಭೆ ಆರ್ ಎಸ್ ಬಿ ಸಭಾಭವನ ಮಣಿಪಾಲದಲ್ಲಿ ಸೊಸೈಟಿಯ ಅಧ್ಯಕ್ಷರಾದ ಅಶೋಕ್ ಕಾಮತ್ ಕೊಡಂಗೆಯವರ ಅಧ್ಯಕ್ಷತೆಯಲ್ಲಿ ಜರಗಿತು.
2024-25 ನೇ ಸಾಲಿನ ಅಂತ್ಯಕ್ಕೆ ರೂ 2.10 ಕೋಟಿ ಪಾಲು ಬಂಡವಾಳ, ರೂ 13.91 ನಿಧಿಗಳು, ರೂ 141.29 ಕೋಟಿ ಠೇವಣಿ, ರೂ 104.24 ಕೋಟಿ ಸಾಲ ಹೊರಬಾಕಿಯೊಂದಿಗೆ ರೂ 2.91 ನಿವ್ವಳ ಲಾಭ ಗಳಿಸಿ ಲೆಕ್ಕಪರಿಶೋಧನೆಯಲ್ಲಿ ’ಏʼಶ್ರೇಣಿಯ ಸಹಕಾರ ಸಂಘ ಎಂದು ವರ್ಗೀಕರಿಸಿರುವರು.
ಸಂಘದ ಲೆಕ್ಕಪತ್ರ, ಆಯವ್ಯಯ, ನಿವ್ವಳ ಲಾಭದ ವಿಂಗಡಣೆ, ಮುಂದಿನ ವರ್ಷದ ಯೋಜನೆಗಳ ವಿವರಗಳನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ನರಸಿಂಗೆ ಮಂಡಿಸಿದರು.
ಸಂಘವು 24 ವರ್ಷ ಪೂರೈಸಿ 25 ನೇ ವರ್ಷದಲ್ಲಿದ್ದು, ಇದನ್ನು ಬೆಳ್ಳಿ ಬೆಡಗು ಸಂಭ್ರಮವಾಗಿ ಆಚರಿಸುತ್ತಿದ್ದು, ಈ ವರ್ಷ ಪರ್ಕಳ ರಾಷ್ಟ್ರೀಯ ಹೆದ್ದಾರಿ ಪಾರ್ಶ್ವದಲ್ಲಿ ಸಂಘದ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಇದು ಆಕ್ಟೋಬರ್ ತಿಂಗಳ 12 ರಂದು ಲೋಕಾರ್ಪಣೆ ಗೊಳ್ಳಲಿದೆ. ಅಲ್ಲದೆ ಬೆಳ್ಳಿ ಬೆಡಗು ವಿಶೇಷ ಠೇವಣಿ ಯೋಜನೆ ಜಾರಿ ಗೊಳಿಸಿದ್ದು ಶೇ 9. 50 ಇತರರಿಗೆ,ಹಿರಿಯ ನಾಗರಿಕರಿಗೆ ಶೇ 10 ಬಡ್ಡಿದರ ನೀಡಿ ಎಲ್ಲರಿಗೂ ಒಳ್ಳೆಯ ಕೊಡುಗೆ ನೀಡಿದೆ ಎಂದು ಅಧ್ಯಕ್ಷರು ತಿಳಿಸಿದರು.
ಮಹಾಸಭೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಶೇ 80 ಯಾ ಅಧಿಕ ಅಂಕ ಗಳಿಸಿದ ಏ ವರ್ಗದ ಸದಸ್ಯರ 70 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಸಮಾಜದಲ್ಲಿ ವಿಶೇಷ ಸಾಧನೆ ಯೊಂದಿಗೆ, ಸೇವೆ ಗೈಯುತ್ತಿರುವ ಡಾ. ನಿತ್ಯಾನಂದ ನಾಯಕ್ ಬೆಳಂಜಾಲೆ ಡಿಸ್ಟ್ರಿಕ್ಟ್ ಸರ್ಜನ್, ಡಾ. ಸುಮತಿ ರಘುರಾಮ್ ಪ್ರಭು ಅಂಡಾರು ಸಾಹಿತ್ಯ ಕ್ಷೇತ್ರದ ಸಾಧನೆ, ರಾಘವೇಂದ್ರ ಪ್ರಭು ಕರ್ವಾಲು ರಕ್ತದಾನಿ, ಲೇಖಕರು ಮತ್ತು ಅನೇಕ ಪ್ರಶಸ್ತಿ ಗಳಿಸಿ ಸಾಧನೆ ಮಾಡಿರುವ ಗಣ್ಯರನ್ನು ಮಹಾಸಭೆಯಲ್ಲಿ ಗೌರವಿಸಿ ಅಭಿನಂದಿಸಲಾಯಿತು.
ನೂತನ ಕಟ್ಟಡದ ಉದ್ಘಾಟನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನ ಹಿರಿಯ ಸಹಕಾರಿ, ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ರವೀಂದ್ರ ಪ್ರಭು ಕಡಾರಿ ಬಿಡುಗಡೆ ಗೊಳಿಸಿದರು.
ಸಮಾರಂಭದಲ್ಲಿ ಸೊಸೈಟಿಯ ನಿರ್ದೇಶಕರುಗಳಾದ ರಾಮಕೃಷ್ಣ ನಾಯಕ್ ಪರ್ಕಳ, ಸದಾನಂದ ನಾಯಕ್ ಹೆರ್ಗ, ನರಸಿಂಹ ನಾಯಕ್ ಮಣಿಪಾಲ, ಮಹೇಶ್ ನಾಯಕ್ ಅಂಬಲ್ಬೆಟ್ಟು, ರವೀಂದ್ರ ಪಾಟ್ಕರ್ ಬಂಟಕಲ್, ವಿಜೇತ್ ಕುಮಾರ್ ಬೆಳ್ಳಾರ್ಪಾಡಿ, ಗಣಪತಿ ನಾಯಕ್ ದೇವಿನಗರ, ಶ್ರೀಮತಿ ಜಯಂತಿ ನಾಯಕ್ ಪರ್ಕಳ, ಶ್ರೀಮತಿ ರೂಪ ನಾಯಕ್ ದೇವಿನಗರ ಉಪಸ್ತಿತರಿದ್ದರು.
ಉಪಾಧ್ಯಕ್ಷ ಪ್ರಾಂಡುರಂಗ ಕಾಮತ್ ಸ್ವಾಗತಿಸಿದರು. ಶ್ರೀಶ ನಾಯಕ್ ನಿರೂಪಿಸಿದರು. ನಿರ್ದೇಶಕರಾದ ಗಣಪತಿ ಪ್ರಭು ಕುಕ್ಕೆಹಳ್ಳಿ ವಂದಿಸಿದರು.

