ಪರ್ಯಾಯ ಕೃಷ್ಣಾಪುರ ಶ್ರೀಪಾದರಿಂದ “ಕೋಟಿ ತುಳಸಿ ಅಚ೯ನೆಯ ಕರಪತ್ರ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ.
(Udupi) ಉಡುಪಿ: ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯ ಹಾಗೂ ಅನುಜ್ಞೆಯ ಮೇರೆಗೆ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಸಭಾ ಕಡಿಯಾಳಿ ಶಾಖೆಯ ನೇತೃತ್ವದಲ್ಲಿ ಡಿಸೆಂಬರ್ 31ರಂದು ನಡೆಯಲಿರುವ ಋಕ್ಮಿಣೀಕರಾರ್ಚಿತ ಶ್ರೀಕೃಷ್ಣನಿಗೆ ಶ್ರೀ ವಿಷ್ಣು ಸಹಸ್ರ ನಾಮಾವಳೀ ಸಹಿತ “ಕೋಟಿ ತುಳಸಿ ಅರ್ಚನೆ” ಯ ಆಮಂತ್ರಣ ಪತ್ರಿಕೆ ಹಾಗೂ ಈ ಬಗ್ಗೆ ಶ್ರೀ ಮಠದಿಂದ ಪ್ರಕಟಿತ ಮನವಿಯ ಕರಪತ್ರವನ್ನು ಪರ್ಯಾಯ ಕೃಷ್ಣಾಪುರ ಮಠದ ಪರಮ ಪೂಜ್ಯ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು (sri Vidhya sagar teertha Swamiji) ಬಿಡುಗಡೆಗೊಳಿಸಿದರು.
ಈ ಸಂದರ್ಭ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ, ಬ್ರಾಹ್ಮಣ ವರ್ಗ ಈ ಪುಣ್ಯ ಕೈಂಕರ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಮುಕ್ತ ಮನಸ್ಸಿನಿಂದ ಭಾಗವಹಿಸಬೇಕು ಎ೦ದು ಕರೆ ನೀಡಿ, ಕಾರ್ಯಕ್ರಮಕ್ಕೆ ಯಶಸ್ಸನ್ನು ಹಾರೈಸಿದರು.
ಕೋಟಿ ತುಳಸಿ ಅರ್ಚನೆಯು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಬ್ರಾಹ್ಮಣ ಸಮುದಾಯದ ಸಹಾಯ ಸಹಕಾರದೊಂದಿಗೆ ನಡೆಯಲಿದೆ.
ಈ ಸಂದಭ೯ದಲ್ಲಿ ತುಶಿಮಾಮ ದ ಗೌರವಾಧ್ಯಕ್ಷ ಶ್ರೀ ಅರವಿಂದಾಚಾರ್ಯ, ಅಧ್ಯಕ್ಷ ರವಿ ಪ್ರಕಾಶ್ ಭಟ್, ಕಡಿಯಾಳಿ ಶಾಖೆಯ ಅಧ್ಯಕ್ಷ ರಘುಪತಿ ಉಪಾಧ್ಯ, ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ, ಕೋಶಾಧಿಕಾರಿ ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯ, ಮಂಜುನಾಥ ರಾವ್ ಮತ್ತಿತರರು ಉಪಸ್ಥಿತರಿದ್ದರು.

