ಪಾದೆಬೆಟ್ಟು : ಶ್ರೀ ಕಾಳಿಕಾಂಬಾ ಮಹಿಳಾ ಮಂಡಳಿಯ ವತಿಯಿಂದ ಆಟಿಯ ಐಸಿರಿ
35 ಬಗೆಯ ಆಟಿಯ ತಿಂಡಿ ತಿನಿಸುಗಳ ಉಣಬಡಿಸಿದ ಮಹಿಳಾ ಮಂಡಳಿಯ ಸದಸ್ಯರು
(Padubidri) ಪಡುಬಿದ್ರಿ : ಶ್ರೀ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಪಾದೆಬೆಟ್ಟು ಶ್ರೀ ದುರ್ಗಾ ದೇವಿ ಸನ್ನಿಧಿಯಲ್ಲಿ ಶ್ರೀ ಕಾಳಿಕಾಂಬಾ ಮಹಿಳಾ ಮಂಡಳಿಯ ವತಿಯಿಂದ ಆಟಿಯ ಐಸಿರಿ ಕಾರ್ಯಕ್ರಮ ನಡೆಯಿತು.
ಆ ಪ್ರಯುಕ್ತ ಶ್ರೀ ದುರ್ಗಾದೇವಿಗೆ ವಿಶೇಷ ಪೂಜೆ ಮತ್ತು ಸುಮಾರು 35 ಬಗೆಯ ಆಟಿಯ ತಿಂಡಿ ತಿನಿಸನ್ನು ಮಹಿಳಾ ಮಂಡಳಿಯ ಸದಸ್ಯರು ಮಾಡಿದ್ದರು.
ಆಟಿಯ ವಿಷಯದ ಬಗ್ಗೆ ಮಾಹಿತಿ ಮಾರ್ಗದರ್ಶನವನ್ನು ಸಮಾಜ ಸೇವಕಿ ಪ್ರಭಾವತಿ ವಿಶ್ವನಾಥ್ ಉಡುಪಿ ನೀಡಿದರು. ಅವರನ್ನು ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.
ಆಟಿಯ ಐಸಿರಿಯ ವೇದಿಕೆಯಲ್ಲಿ ಶ್ರೀ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಪಾದೆಬೆಟ್ಟು ಇದರ ಅಧ್ಯಕ್ಷ ವಸಂತ ಆಚಾರ್ಯ, ಸಮಾಜ ಸೇವಕಿ ಪ್ರಭಾವತಿ ವಿಶ್ವನಾಥ್ ಉಡುಪಿ, ಉಪಾಧ್ಯಕ್ಷ ವಿಠಲ ಆಚಾರ್ಯ, ಕಾರ್ಯದರ್ಶಿ ಶ್ರೀಧರ್ ಆಚಾರ್ಯ, ಜೊತೆ ಕಾರ್ಯದರ್ಶಿ ಸುಬ್ರಾಯ ಆಚಾರ್ಯ, ಕೋಶಾಧಿಕಾರಿ ವಾಮನ ಆಚಾರ್ಯ, ಗಾಯತ್ರಿ ಭಜನಾ ಮಂಡಳಿಯ ಅಧ್ಯಕ್ಷ ಜಿ. ಹರೀಶ್ ಆಚಾರ್ಯ, ಅಶ್ವಥ್ ಆಚಾರ್ಯ, ಶ್ರೀ ಕಾಳಿಕಾಂಬಾ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಪ್ರಶಾಂತ್ ಆಚಾರ್ಯ, ಸುಮಿತ್ರ ಸುಬ್ರಾಯ ಆಚಾರ್ಯ, ಶಾಂತ ಆಚಾರ್ಯ, ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಮಹಿಳಾ ಮಂಡಳಿಯ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ವಾಮನ ಆಚಾರ್ಯ ಪ್ರಾರ್ಥಿಸಿದರು. ಕಾರ್ಯದರ್ಶಿ ಶ್ರೀಧರ್ ಆಚಾರ್ಯ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

