• Home  
  • ಪುತ್ತೂರು : ವಿದ್ಯಾನಿಧಿ ಸಮಿತಿ 10.25 ಲಕ್ಷ ರೂ. ವಿದ್ಯಾ  ಸಹಾಯಧನ ವಿತರಣೆ (Puttur: Vidyanidhi Committee distributes Rs. 10.25 lakh in educational assistance)
- help

ಪುತ್ತೂರು : ವಿದ್ಯಾನಿಧಿ ಸಮಿತಿ 10.25 ಲಕ್ಷ ರೂ. ವಿದ್ಯಾ  ಸಹಾಯಧನ ವಿತರಣೆ (Puttur: Vidyanidhi Committee distributes Rs. 10.25 lakh in educational assistance)

Share: ಪುತ್ತೂರು : ವಿದ್ಯಾನಿಧಿ ಸಮಿತಿ 10.25 ಲಕ್ಷ ರೂ. ವಿದ್ಯಾ  ಸಹಾಯಧನ ವಿತರಣೆ  (Putturu) ಪುತ್ತೂರು: ಪುತ್ತೂರು ವಿದ್ಯಾನಿಧಿ  ಸಮಿತಿಯ ಮಹಾಸಭೆ ಮತ್ತು ವಿವಿಧ ವಿದ್ಯಾದಾನ ವಿತರಣಾ ಕಾರ್ಯಕ್ರಮ ವಿದ್ಯಾ ದೇಗುಲದ  ಸುಜ್ಞಾನ ಮಂಟಪದಲ್ಲಿ ಜರುಗಿತು.  ಮುಖ್ಯ ಅತಿಥಿ ಡಾ. ಪ್ರಕಾಶತ್ಮ ಎಂ ಬಿ ಬಿ ಎಸ್ ಬೆಳ್ಮಣ್ಣು ಇವರು ಈ ಅತ್ಯಲ್ಪ ಸಮಯದಲ್ಲಿ ಜನಮಾನಸದಲ್ಲಿ ನೆನಪಿರುವಂತೆ ಕೆಲಸ ಮಾಡುತ್ತಿರುವ ಈ ಸಂಸ್ಥೆಯ ಶಿಸ್ತು, ಬದ್ಧತೆ, ಕರ್ತವ್ಯ ಪ್ರಜ್ಞೆ, ದೇಶ ಸೇವೆ ನಿಜವಾಗಿಯೂ ಇತರರಿಗೆ ಅನುಕರಣಿಯವಾಗಿದೆ […]

(Putturu) ಪುತ್ತೂರು: ಪುತ್ತೂರು ವಿದ್ಯಾನಿಧಿ  ಸಮಿತಿಯ ಮಹಾಸಭೆ ಮತ್ತು ವಿವಿಧ ವಿದ್ಯಾದಾನ ವಿತರಣಾ ಕಾರ್ಯಕ್ರಮ ವಿದ್ಯಾ ದೇಗುಲದ  ಸುಜ್ಞಾನ ಮಂಟಪದಲ್ಲಿ ಜರುಗಿತು. 

ಮುಖ್ಯ ಅತಿಥಿ ಡಾ. ಪ್ರಕಾಶತ್ಮ ಎಂ ಬಿ ಬಿ ಎಸ್ ಬೆಳ್ಮಣ್ಣು ಇವರು ಈ ಅತ್ಯಲ್ಪ ಸಮಯದಲ್ಲಿ ಜನಮಾನಸದಲ್ಲಿ ನೆನಪಿರುವಂತೆ ಕೆಲಸ ಮಾಡುತ್ತಿರುವ ಈ ಸಂಸ್ಥೆಯ ಶಿಸ್ತು, ಬದ್ಧತೆ, ಕರ್ತವ್ಯ ಪ್ರಜ್ಞೆ, ದೇಶ ಸೇವೆ ನಿಜವಾಗಿಯೂ ಇತರರಿಗೆ ಅನುಕರಣಿಯವಾಗಿದೆ ಎಂದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ ವೆಂಕಟರಮಣ ಭಟ್ ಉಂಡಾರುರವರು 65 ಮಕ್ಕಳಿಗೆ  10.25ಲಕ್ಷ ಸಹಾಯಧನ ವಿತರಿಸಿದರು. 

ಸುರೇಖಾ ಎನ್ ಭಟ್ ಮತ್ತು ವಿಮಲಾ ಜಿ ರಾವ್ ಅವರನ್ನು ಅವರ ಸಹಾಯಧನದಿಂದ ಓದುತ್ತಿರುವ ಮಕ್ಕಳು ಸನ್ಮಾನಿಸಿದರು. 

ನಿವೃತ್ತ ಸುಬೇದಾರ್ ರಘುಪತಿ ರಾವ್ ಅವರನ್ನು ಸನ್ಮಾನಿಸಿ, ಜೀವದ ಹಂಗು ತೊರೆದು ದೇಶಕ್ಕಾಗಿ ದುಡಿದ ಸೈನಿಕರ ಕಲ್ಯಾಣ ನಿಧಿಗಾಗಿ ಸಮಿತಿಯ ಆರೋಗ್ಯ ನಿಧಿ ಯಿಂದ ಮತ್ತು ಸಹೃದಯ ದಾನಿಗಳು ನೀಡಿದ 2.10ಲಕ್ಷ  ಅಧ್ಯಕ್ಷ ವೀಣಾ ಹತ್ವಾರ್ ಹಸ್ತಾಂತರಿಸಿದರು. 

ಉಪಾಧ್ಯಕ್ಷ ದೇವರಾಜ ಭಟ್ ಸ್ವಾಗತಿಸಿದರು. ಗೌರವಾಧ್ಯಕ್ಷ ಮಾಧವ ಭಟ್, ಮಾಯಾಗುಂಡಿ, ಸ್ಥಾಪಕ ಅಧ್ಯಕ್ಷ ಮಾಧವ ಉಪಾಧ್ಯಾಯ, ಕೋಶಾಧಿಕಾರಿ ಕೃಷ್ಣರಾಜ ರಾವ್, ಹರಿಪ್ರಸಾದ್, ವಾಸುದೇವ ಭಟ್, ಪುರಂದರ ರಾವ್ ಸಹಕರಿಸಿದರು .

ಡಾ. ಶ್ರೀಧರ ಬಾಯಿರಿ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.