ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಟೆಕ್ಝೋನ್ – 2024ರಲ್ಲಿ ಬಹುಮಾನ
(Bantakal) ಬಂಟಕಲ್: ಜೆ ಎನ್ ಎನ್ ಇಂಜಿನಿಯರಿಂಗ್ ಕಾಲೇಜ್, ಶಿವಮೊಗ್ಗ ಇಲ್ಲಿ ನಡೆದ ಟೆಕ್ಝೋನ್ – 2024 ರಲ್ಲಿ ಬಂಟಕಲ್ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ (Shri Madhwa Vadiraja Institute of Technology and Management) 7 ವಿದ್ಯಾರ್ಥಿಗಳು ಭಾಗವಹಿಸಿದ್ದು, ಇದರಲ್ಲಿ ಯು. ಪ್ರದ್ಯುನ್ಮಾ ಉಪಾಧ್ಯಾಯ, ಕಿರಣ್ ಭಟ್ ಮತ್ತು ಸಾತ್ವಿಕ್ ಭಟ್ ಇವರು Robo Sumo – Sumo War ನಲ್ಲಿ ಪ್ರಥಮ ಸ್ಥಾನ, ಪೂಜಾರಿ ಭೂಷನ್ ಭಾಸ್ಕರ್ ಮತ್ತು ಪ್ರಜ್ವಲ್ ಇವರು Paper Presentation ನಲ್ಲಿ ತೃತೀಯ ಸ್ಥಾನ ಮತ್ತು ಪೂಜಾರಿ ಭೂಷನ್ ಭಾಸ್ಕರ್ ಮತ್ತು ಚಿರಾಗ್ ಇವರು Ideathon ನಲ್ಲಿ ದ್ವಿತೀಯ ಸ್ಥಾನಗಳಿಸಿರುತ್ತಾರೆ .
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

