ಬಂಟಕಲ್ ಇಂಜಿನಿಯರಿಂಗ್ ಕಾಲೇಜಿಗೆ “ಸ್ಪರ್ದಮ್ 2026” ರಲ್ಲಿ ಸಮಗ್ರ ಚಾಂಪಿಯನ್ಶಿಪ್
ಉಜಿರೆಯ ಎಸ್ ಡಿ ಎಮ್ ಇನ್ಸಿಟ್ಟ್ಯೂಟ್ಆಫ್ ಟೆಕ್ನಾಲಜಿ ಯಲ್ಲಿ ನಡೆದ ಸ್ಪರ್ಧೆ
(Bantakal) ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎಸ್ ಡಿ ಎಮ್ ಇನ್ಸಿಟ್ಟ್ಯೂಟ್ ಆಫ್ ಟೆಕ್ನಾಲಜಿ, ಉಜಿರೆಯಲ್ಲಿ ನಡೆದ “ಸ್ಪರ್ದಮ್ 2026” ರಲ್ಲಿ ಭಾಗವಹಿಸಿ ಸಮಗ್ರ ಚಾಂಪಿಯನ್ಶಿಪ್ ಪಡೆದಿರುತ್ತಾರೆ.
ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ತಾಂತ್ರಿಕ ಕೌಶಲ್ಯ, ಸೃಜನಶೀಲತೆ, ತಂಡದ ಕಾರ್ಯಕ್ಷಮತೆ ಹಾಗೂ ನಾವೀನ್ಯಪೂರ್ಣ ಚಿಂತನಾ ಸಾಮರ್ಥ್ಯವನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದರು.
ವಿದ್ಯಾರ್ಥಿಗಳು ಪ್ರಾಂಪ್ಟ್ ವಾರ್, ಟೆಕ್ ಟ್ರೆಕ್ ಮತ್ತು ರಿಕ್ರೂಟ್- ಎಕ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ಕೇಸ್ಕ್ರಾಫ್ಟ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಅಭಿನಂದಿಸಿದ್ದಾರೆ.

