• Home  
  • ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಗ್ನಿ ಮತ್ತು ಸುರರಕ್ಷತೆ ಕುರಿತು ಜಾಗೃತಿ ಕಾರ್ಯಾಗಾರ (Awareness program on “Fire and Safety” At SMVIT)
- ಶಾಲಾ ಕಾಲೇಜು

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಗ್ನಿ ಮತ್ತು ಸುರರಕ್ಷತೆ ಕುರಿತು ಜಾಗೃತಿ ಕಾರ್ಯಾಗಾರ (Awareness program on “Fire and Safety” At SMVIT)

Share: ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಗ್ನಿ ಮತ್ತು ಸುರರಕ್ಷತೆ ಕುರಿತು ಜಾಗೃತಿ ಕಾರ್ಯಾಗಾರ (Bantkal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೌನ್ಸೆಲಿಂಗ್ ಘಟಕ, ರಾಷ್ರೀಯ ಸೇವಾ ಯೋಜನೆ ಮತ್ತು ಕರ್ನಾಟಕ ರಾಜ್ಯದ ಅಗ್ನಿ ಸುರಕ್ಷತೆ ಸಂಸ್ಥೆ ಜಂಟಿಯಾಗಿ “ಅಗ್ನಿ ಮತ್ತು ಸುರರಕ್ಷತೆ” ಕುರಿತು ಜಾಗೃತಿ ಕಾರ್ಯಾಗಾರವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಯಿತು.    ಕಾರ್ಯಾಗಾರದಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ್ ಕಲ್ಗುಟಿಕರ್ (District Fire Officer Vinayak Kalgutikar) ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.  ಇವರು ಮಾತನಾಡಿ, […]

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಗ್ನಿ ಮತ್ತು ಸುರರಕ್ಷತೆ ಕುರಿತು ಜಾಗೃತಿ ಕಾರ್ಯಾಗಾರ

(Bantkal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೌನ್ಸೆಲಿಂಗ್ ಘಟಕ, ರಾಷ್ರೀಯ ಸೇವಾ ಯೋಜನೆ ಮತ್ತು ಕರ್ನಾಟಕ ರಾಜ್ಯದ ಅಗ್ನಿ ಸುರಕ್ಷತೆ ಸಂಸ್ಥೆ ಜಂಟಿಯಾಗಿ “ಅಗ್ನಿ ಮತ್ತು ಸುರರಕ್ಷತೆ” ಕುರಿತು ಜಾಗೃತಿ ಕಾರ್ಯಾಗಾರವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಯಿತು.  

 ಕಾರ್ಯಾಗಾರದಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ್ ಕಲ್ಗುಟಿಕರ್ (District Fire Officer Vinayak Kalgutikar) ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

 ಇವರು ಮಾತನಾಡಿ, ಸುಡುವ ವಸ್ತುಗಳ ಸರಿಯಾದ ಶೇಖರಣೆ, ವಿದ್ಯುತ್ ವ್ಯವಸ್ಥೆಗಳ ಸಮರ್ಪಕ ನಿರ್ವಹಣೆ ಮತ್ತು ತೆರೆದ ಜ್ವಾಲೆಯ ಎಚ್ಚರಿಕೆ ಬಳಕೆಯಿಂದ ಬೆಂಕಿದುರಂತ ತಡೆಗಟ್ಟಬಹುದು ಎಂದು ತಿಳಿಸಿದರು.

ಉಡುಪಿ ಅಗ್ನಿಶಾಮಕ ಕಛೇರಿಯ ಸಿಬ್ಬಂದಿಗಳು ಅಗ್ನಿ ದುರಂತ ಸಂಭವಿಸಿದಾಗ ವಹಿಸಬೇಕಾದ ಮುಂಜಾಗ್ರತೆ, ಸುರಕ್ಷತಾ ಸಲಕರಣೆಗಳ ಸರಿಯಾದ ಬಳಕೆಯ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಾಗೂ  ಉತ್ತಮ ಆರೋಗ್ಯವನ್ನು ಪಡೆಯಲು ಒಳ್ಳೆಯ ಜೀವನ ಶೈಲಿಯನ್ನು ಅನುಸರಿಸಬೇಕು ಎಂದು ಮಾಹಿತಿ ನೀಡಿದರು.

ಅಗ್ನಿ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿತ್ತು.

ಕಾರ್ಯಾಗಾರದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್(Dr. Thirumaleshwara Bhat, Principal), ಉಪ ಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್(Dr. Ganesh Aithal, Vice Principal) ಕಾರ್ಯಾಗಾರವನ್ನು ಆಯೋಜಿಸಿದಕ್ಕಾಗಿ ರಾಷ್ಟ್ರೀಯ ಸೇವಾ ಯೋಜನೆ, ಕೌನ್ಸೆಲಿಂಗ್ ಘಟಕದ ಸಂಯೋಜಕರನ್ನು ಮತ್ತು ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಯೋಜಕರಾದ ಡಾ. ರವೀಂದ್ರ ಎಚ್ ಜೆ (Dr. Ravindra H J)ಅವರನ್ನು ಅಭಿನಂದಿಸಿದರು. 

Leave a comment

Your email address will not be published. Required fields are marked *

eMedia Kannada  @2025. All Rights Reserved.