• Home  
  • ಬಂಟಕಲ್ ಕಾಲೇಜಿನಲ್ಲಿ “ಹ್ಯಾಕೋತ್ಸವ ೨೦೨೩ರ” ಸಮಾರೋಪ ಸಮಾರಂಭ
- Uncategorised - ಕರಾವಳಿ

ಬಂಟಕಲ್ ಕಾಲೇಜಿನಲ್ಲಿ “ಹ್ಯಾಕೋತ್ಸವ ೨೦೨೩ರ” ಸಮಾರೋಪ ಸಮಾರಂಭ

Share: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗವು ಕಾಲೇಜಿನ ಇನ್ನೋವೇಶನ್ ಘಟಕ ಮತ್ತು ಐಎಸ್‌ಟಿಇ ಘಟಕದ ಸಹಯೋಗದೊಂದಿಗೆ ರಾಜ್ಯಮಟ್ಟದ ೨೪ ಗಂಟೆಗಳ ಹ್ಯಾಕಥಾನ್ ಹ್ಯಾಕೋತ್ಸವ ೨೦೨೩ರ ಸಮಾರೋಪ ಸಮಾರಂಭವು  ಕಾಲೇಜಿನ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮಂಗಳೂರಿನ ಕಂಬಳ ಸೊಲ್ಯುಶನ್ಸ್, ಬಿವಾಮ್ ಇಂಡಿಯ ಮತ್ತು ನಿವ್ಯಸ್ ಸೊಲ್ಯುಶನ್ಸ್ ಪ್ರಾಯೊಜಕತ್ವ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವ್ಯಸ್ ಸೊಲ್ಯುಶನ್ಸ್ ಡಾಟಾ ಆರ್ಕಿಟೆಕ್ಟ್ ಶ್ರೀ ಪ್ರಸಾದ್ ಪೈ ಕೆ ಭಾಗವಹಿಸಿದ್ದರು.    ಸಂಸ್ಥೆಯ […]

ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗವು ಕಾಲೇಜಿನ ಇನ್ನೋವೇಶನ್ ಘಟಕ ಮತ್ತು ಐಎಸ್‌ಟಿಇ ಘಟಕದ ಸಹಯೋಗದೊಂದಿಗೆ ರಾಜ್ಯಮಟ್ಟದ ೨೪ ಗಂಟೆಗಳ ಹ್ಯಾಕಥಾನ್ ಹ್ಯಾಕೋತ್ಸವ ೨೦೨೩ರ ಸಮಾರೋಪ ಸಮಾರಂಭವು  ಕಾಲೇಜಿನ ಆವರಣದಲ್ಲಿ ನಡೆಯಿತು.

ಈ ಕಾರ್ಯಕ್ರಮಕ್ಕೆ ಮಂಗಳೂರಿನ ಕಂಬಳ ಸೊಲ್ಯುಶನ್ಸ್, ಬಿವಾಮ್ ಇಂಡಿಯ ಮತ್ತು ನಿವ್ಯಸ್ ಸೊಲ್ಯುಶನ್ಸ್ ಪ್ರಾಯೊಜಕತ್ವ ನೀಡಿದ್ದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವ್ಯಸ್ ಸೊಲ್ಯುಶನ್ಸ್ ಡಾಟಾ ಆರ್ಕಿಟೆಕ್ಟ್ ಶ್ರೀ ಪ್ರಸಾದ್ ಪೈ ಕೆ ಭಾಗವಹಿಸಿದ್ದರು.  

 ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಗುರುಪ್ರಸಾದ್ ವಂದಿಸಿದರು. ಗಣಕ ಯಂತ್ರ ವಿಭಾಗದ ವಿದ್ಯಾರ್ಥಿ ಕ್ಲಿಂಟನ್ ಮತ್ತು ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಶ್ರೇಯಾ ಕಾರ್ಯಕ್ರಮವನ್ನು ನಿರೂಪಿಸಿದರು

Leave a comment

Your email address will not be published. Required fields are marked *

eMedia Kannada  @2025. All Rights Reserved.