ಬಂಟಕಲ್: “ಕ್ಲೌಡ್ ಕಂಪ್ಯೂಟಿಂಗ್ನಲ್ಲಿ ವೃತ್ತಿ ಅವಕಾಶಗಳು”ಎಂಬ ವಿಷಯದ ಕುರಿತು ಉಪನ್ಯಾಸ
(Bantakal) ಬಂಟಕಲ್; ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗವು ಸಂಸ್ಥೆಯ ಐಎಸ್ಟಿಇ ವಿದ್ಯಾರ್ಥಿ ಘಟಕ, ಐಇಇಇ ವಿದ್ಯಾರ್ಥಿ ಘಟಕ, ಉದ್ಯೋಗ ಮತ್ತು ತರಬೇತಿ ಘಟಕ, ಸಹ ಪಠ್ಯೇತರ ಘಟಕ ಮತ್ತು ಹಳೆವಿದ್ಯಾರ್ಥಿ ಘಟಕದ ಸಹಯೋಗದೊಂದಿಗೆ “ಕ್ಲೌಡ್ ಕಂಪ್ಯೂಟಿAಗ್ನಲ್ಲಿ ವೃತ್ತಿ ಅವಕಾಶಗಳು”ಎಂಬ ವಿಷಯದ ಕುರಿತು ಉಪನ್ಯಾಸ ಆಯೋಜಿಸಲಾಯಿತು.
ಜರ್ಮನಿಯ ಸೀಮೆನ್ಸ್ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಸಂಸ್ಥೆಯ ಹಳೆವಿದ್ಯಾರ್ಥಿ ರಾಹುಲ್ ತಂತ್ರಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಇವರು ಮಾತನಾಡಿ, ಡಿಜಿಟಲ್ ಯುಗದಲ್ಲಿ ಕ್ಲೌಡ್ ಕಂಪ್ಯೂಟಿAಗ್ ಪ್ರತಿಯೊಂದು ಉದ್ಯಮದ ಅಗತ್ಯ ಭಾಗವಾಗಿದೆ. ಈ ತಂತ್ರಜ್ಞಾನವು ಒಂದು ಕೇಂದ್ರೀಕೃತ ಆನ್ಲೈನ್ ಸರ್ವರ್ನಿಂದ ಫೈಲ್ಗಳನ್ನು ಸಂಗ್ರಹಿಸುವ ಮತ್ತು ಪ್ರವೇಶಿಸುವ ವ್ಯವಹಾರಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಎಲ್ಲಾ ವೃತ್ತಿಪರರು ತಮ್ಮ ಸ್ವಂತ ಕ್ಷೇತ್ರಗಳಲ್ಲಿ ಈ ತಂತ್ರ ಜ್ಞಾನವನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮಾತನಾಡಿ, ವಿದ್ಯಾರ್ಥಿಗಳಿಗೆ ಈ ಉಪನ್ಯಾಸದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಈ ಉಪನ್ಯಾಸದಲ್ಲಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್, ಚಂದ್ರಶೇಖರ ರಾವ್ ಕುತ್ಯಾರ್, ಗಣಕ ಯಂತ್ರ ವಿಭಾಗದ ಮುಖ್ಯಸ್ಥರಾದ ಡಾ. ಸೌಮ್ಯ ಜೆ ಭಟ್, ಗಣಕ ಯಂತ್ರ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ಆದಿತ್ಯ ದೇಶ್ಪಾಂಡೆ ಪ್ರಾರ್ಥಿಸಿದರು. ಕಾತ್ಯಾಯಿನಿ ಕಾಮತ್ ಕಾರ್ಯಕ್ರಮ ಸಂಯೋಜಿಸಿ ವಂದಿಸಿದರು.

