• Home  
  • ಬಂಟಕಲ್  ತಾಂತ್ರಿಕ ಕಾಲೇಜಿಗೆ ನ್ಯಾಷನಲ್ ಇನ್ಸಿಟ್ಯೂಟ್‌   ರ‍್ಯಾಂಕಿಂಗ್
- ಕರಾವಳಿ - ದೇಶ-ವಿದೇಶ - ವ್ಯವಹಾರ

ಬಂಟಕಲ್  ತಾಂತ್ರಿಕ ಕಾಲೇಜಿಗೆ ನ್ಯಾಷನಲ್ ಇನ್ಸಿಟ್ಯೂಟ್‌   ರ‍್ಯಾಂಕಿಂಗ್

Share: ಫ್ರೇಮ್ ವರ್ಕ್ ಆನ್ ಇನ್ನೋವೇಶನ್‌ನಿಂದ ರ‍್ಯಾಂಕ್ ರಾಷ್ಟ್ರೀಯ ಮಟ್ಟದ ಎನ್‌ಐಆರ್‌ಎಫ್ 2023ರ ಶ್ರೇಯಾಂಕವು ಪ್ರಕಟವಾಗಿದ್ದು, ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು “ಆವಿಷ್ಕಾರ ಮತ್ತು ಉದ್ಯಮಶೀಲತೆ”ಯಲ್ಲಿ ಸಮಗ್ರ ಪ್ರಗತಿ ಹೊಂದಿರುವುದಕ್ಕೆ ಉತ್ತಮ ಶ್ರೇಯಾಂಕ ಗಳಿಸಿದೆ. .  ಭಾರತದ ಸರಕಾರದ ಉನ್ನತ ಶಿಕ್ಷಣ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ ಶ್ರೇಯಾಂಕದಲ್ಲಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ರಾಷ್ಟ್ರೀಯ ಮಟ್ಟದಲ್ಲಿ 150-300 ಶ್ರೇಣಿಯಲ್ಲಿ ಒಳಗೊಂಡಿದೆ.   ಭಾರತದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು, […]

ಫ್ರೇಮ್ ವರ್ಕ್ ಆನ್ ಇನ್ನೋವೇಶನ್‌ನಿಂದ ರ‍್ಯಾಂಕ್ ರಾಷ್ಟ್ರೀಯ ಮಟ್ಟದ ಎನ್‌ಐಆರ್‌ಎಫ್ 2023ರ ಶ್ರೇಯಾಂಕವು ಪ್ರಕಟವಾಗಿದ್ದು, ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು “ಆವಿಷ್ಕಾರ ಮತ್ತು ಉದ್ಯಮಶೀಲತೆ”ಯಲ್ಲಿ ಸಮಗ್ರ ಪ್ರಗತಿ ಹೊಂದಿರುವುದಕ್ಕೆ ಉತ್ತಮ ಶ್ರೇಯಾಂಕ ಗಳಿಸಿದೆ. .

 ಭಾರತದ ಸರಕಾರದ ಉನ್ನತ ಶಿಕ್ಷಣ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ ಶ್ರೇಯಾಂಕದಲ್ಲಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ರಾಷ್ಟ್ರೀಯ ಮಟ್ಟದಲ್ಲಿ 150-300 ಶ್ರೇಣಿಯಲ್ಲಿ ಒಳಗೊಂಡಿದೆ.

  ಭಾರತದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ನಡುವೆ “ನಾವಿನ್ಯತೆ ಮತ್ತು ಉದ್ಯಮಶೀಲತೆ ಅಭಿವೃದ್ಧಿಗೆ” ಸಂಬಂಧಿಸಿದ ಸೂಚಕದ ಮೇಲೆ ಈ ಶ್ರೇಣಿಯನ್ನು ನೀಡಲಾಗಿದೆ.

   ಇನ್ನೋವೇಶನ್ ಮತ್ತು ಉದ್ಯಮಶೀಲತೆಯಲ್ಲಿ ಸಂಸ್ಥೆಯು ರಾಷ್ಟçಮಟ್ಟದಲ್ಲಿ ಈ ಶ್ರೇಯಾಂಕವನ್ನು ಪಡೆದಿರುವುದಕ್ಕೆ ಶ್ರೀ ಸೋದೆ ವಾದಿರಾಜ ಮಠದ ಶ್ರೀಪಾದರು ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಅಪಾರ ಸಂತಸ ವ್ಯಕ್ತಪಡಿಸಿರುತ್ತಾರೆ.

ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ವಿದ್ಯಾಸಂಸ್ಥೆಯ ಈ ಸಾಧನೆಗೆ ಅಭಿನಂದಿಸಿದ್ದಾರೆ.

  ಇದೇ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿಯು “ವಿಶ್ವವಿದ್ಯಾಲಯ ಶ್ರೇಣಿಯಲ್ಲಿ” ೭೨ ನೇ ಸ್ಥಾನದಿಂದ ೬೩ನೇ ಸ್ಥಾನ ಔನ್ನತ್ಯ ಹೊಂದಿರುವುದನ್ನು ಶ್ರೀಪಾದರು ಮುಕ್ತಕಂಠದಿಂದ ಶ್ಲಾಘಿಸಿ, ಸಂಬಂಧಪಟ್ಟ ಎಲ್ಲರನ್ನೂ ಅಭಿನಂದಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.