
ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಮನೋವಿಕಾಸ” ಬೀದಿ ನಾಟಕ ಪ್ರದರ್ಶನ
(Bantakal) ಬಂಟಕಲ್: ಬಂಟಕಲ್ ತಾಂತ್ರಿಕ ಕಾಲೇಜಿನ “ಆಸರೆ” ಸಮಾಲೋಚನಾ ಘಟಕವು “ಮನೋವಿಕಾಸ” ಎಂಬ ವಿಷಯದಡಿ ಬೀದಿ ನಾಟಕವನ್ನು ಆಯೋಜಿಸಿದೆ
ಈ ಬೀದಿ ನಾಟಕದಲ್ಲಿ ತೃತೀಯ ವರ್ಷದ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳು ಅಭಿನಯಿಸಿದರು.
ಬೀದಿ ನಾಟಕದ ಮುಖ್ಯ ಉದ್ದೇಶ ಮಾನಸಿಕ ಆರೋಗ್ಯದ ಮಹತ್ವ ಮತ್ತು ಜೀವನದಲ್ಲಿ ಎದುರಾಗುವ ಒತ್ತಡ ಸಮಸ್ಯೆಗಳನ್ನು ಎದುರಿಸುವಲ್ಲಿ ಸಮಾಲೋಚನಾ ಘಟಕದ ಅವಶ್ಯಕತೆಯ ಜಾಗೃತಿ ಮೂಡಿಸುವುದಾಗಿದೆ.
ಬೀದಿ ನಾಟಕವನ್ನು ದ್ವಿತೀಯ ವರ್ಷದ ಗಣಕ ಯಂತ್ರ ವಿಭಾಗದ ಚೈತನ್ಯ ಎಸ್ ಮಯ್ಯಾರವರು ನಿರ್ದೇಶಿಸಿದರು.
ನಾಟಕದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕವನ್ನು ಪಡೆಯದ ವಿದ್ಯಾರ್ಥಿಯ ಕಥೆ ಮತ್ತು ವೃತ್ತಿಪರ ಕೋರ್ಸಿಗೆ ಸೇರಿದ ನಂತರ ಕೆಟ್ಟ ಗೆಳೆಯರ ಒಡನಾಟದಿಂದ ತಪ್ಪು ಮಾರ್ಗದಲ್ಲಿ ನಡೆದ ವಿದ್ಯಾರ್ಥಿಯ ಕಥೆಯನ್ನು ಪ್ರದರ್ಶಿಸಲಾಯಿತು.
ಮನೋವಿಕಾಸ ಈ ಬೀದಿನಾಟಕದ ಮುಖ್ಯ ಸಂದೇಶ: ಸಹಾಯ ಕೇಳುವುದು ತಪ್ಪಲ್ಲ. ಸೂಕ್ತ ಮಾರ್ಗದರ್ಶನ ಮತ್ತು ಸಹಾಯದಿಂದ ಪ್ರತಿಯೊಬ್ಬರೂ ತಮ್ಮ ಸಮಸ್ಯೆಗಳನ್ನು ಜಯಿಸಿ ಶ್ರೇಷ್ಠ ವ್ಯಕ್ತಿಗಳಾಗಿ ರೂಪಾಂತರಗೊಳ್ಳಬಹುದು.

