• Home  
  • ಬಂಟಕಲ್‌ ತಾಂತ್ರಿಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಪುಸ್ತಕ ವಿತರಣಾ ಅಭಿಯಾನ (SMVITM Organized a  Book Donation Drive at SVH Kannada Medium High School, Innanje)
- ಶಾಲಾ ಕಾಲೇಜು - ಸನ್ಮಾನ, ಅಭಿನಂದನೆ

ಬಂಟಕಲ್‌ ತಾಂತ್ರಿಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಪುಸ್ತಕ ವಿತರಣಾ ಅಭಿಯಾನ (SMVITM Organized a  Book Donation Drive at SVH Kannada Medium High School, Innanje)

Share: ಬಂಟಕಲ್‌ ತಾಂತ್ರಿಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಪುಸ್ತಕ ವಿತರಣಾ ಅಭಿಯಾನ (bantaka) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಕೇಂದ್ರ ಗ್ರಂಥಾಲಯ, ರಾಷ್ಟ್ರೀಯ  ಸೇವಾ ಯೋಜನೆ ಹಾಗೂ ರೊರಕ್ಟ್‌ ಘಟಕದ ಸಹಯೋಗದೊಂದಿಗೆ ಇನ್ನಂಜೆ ಎಸ್. ವಿ.ಎಚ್. ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಪುಸ್ತಕ ವಿತರಣಾ ಅಭಿಯಾನವನ್ನು ಆಯೋಜಿಲಾಗಿತ್ತು. ಈ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಪರವಾಗಿ ಕೊಡುಗೆ ನೀಡಿದ ನೋಟ್‌ ಬುಕ್‌ಗಳು, ಸ್ಟೇಷನರಿ ವಸ್ತುಗಳು ಮತ್ತು ಕೊಡೆಗಳು ಸೇರಿದಂತೆ ಅಗತ್ಯ […]

(bantaka) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಕೇಂದ್ರ ಗ್ರಂಥಾಲಯ, ರಾಷ್ಟ್ರೀಯ  ಸೇವಾ ಯೋಜನೆ ಹಾಗೂ ರೊರಕ್ಟ್‌ ಘಟಕದ ಸಹಯೋಗದೊಂದಿಗೆ ಇನ್ನಂಜೆ ಎಸ್. ವಿ.ಎಚ್. ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಪುಸ್ತಕ ವಿತರಣಾ ಅಭಿಯಾನವನ್ನು ಆಯೋಜಿಲಾಗಿತ್ತು.

ಈ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಪರವಾಗಿ ಕೊಡುಗೆ ನೀಡಿದ ನೋಟ್‌ ಬುಕ್‌ಗಳು, ಸ್ಟೇಷನರಿ ವಸ್ತುಗಳು ಮತ್ತು ಕೊಡೆಗಳು ಸೇರಿದಂತೆ ಅಗತ್ಯ ಕಲಿಕಾ ಸಾಮಗ್ರಿಗಳನ್ನು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಇದುಅವರ ಶೈಕ್ಷಣಿಕ ಬೆಳವಣಿಗೆ ಮತ್ತು ಯೋಗ ಕ್ಷೇಮವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.

ಈ ಕಾರ್ಯಕ್ರಮದಲ್ಲಿ ಶ್ರೀ ಸೋದೆ ವಾದಿರಾಜ ಮಠದ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ  ಪ್ರೊ. ಡಾ. ರಾಧಾಕೃಷ್ಣಎಸ್ ಐತಾಳ್, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೊರಕ್ಟ್‌ ಘಟಕದ ಸಂಯೋಜಕ  ಸಚಿನ್ ಪ್ರಭು, ಎಸ್‌ಎಮ್ ವಿ ಐ ಟಿ ನ ಗ್ರಂಥಪಾಲಕ   ದೀಪಕ್‌ ಎಸ್ ಮತ್ತು ಇನ್ನಂಜೆ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ನಟರಾಜ್‌ ಉಪಾಧ್ಯಾಯ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.