• Home  
  • ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಕರಿಗಾಗಿ ಶಿಕ್ಷಕರ ಅಭಿವೃದ್ಧಿ ಕಾರ್ಯಾಗಾರ (SMVITM Hosts Transformative Workshop for PU Educators on AI, Counselling, and Career Guidance)
- ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಕರಿಗಾಗಿ ಶಿಕ್ಷಕರ ಅಭಿವೃದ್ಧಿ ಕಾರ್ಯಾಗಾರ (SMVITM Hosts Transformative Workshop for PU Educators on AI, Counselling, and Career Guidance)

Share: ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಕರಿಗಾಗಿ ಶಿಕ್ಷಕರ ಅಭಿವೃದ್ಧಿ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿದ ಪ. ಪೂ ಶಿಕ್ಷಣ ಇಲಾಖಾ ಉಪನಿರ್ದೇಶಕ ಮಾರುತಿ ಮಾಲ್ಗೆ   (Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಮಂಗಳವಾರ ಉಡುಪಿ ಜಿಲ್ಲಾ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರ ಸಂಘದ ಸಹಯೋಗದಲ್ಲಿ “ಭವಿಷ್ಯ ರೂಪಿಸುವಲ್ಲಿ ಪ್ರೇರಣಾದಾಯಕ ಶಿಕ್ಷಕರು”ಎಂಬ ವಿಷಯದ ಕುರಿತು  ಪದವಿ ಪೂರ್ವ ಶಿಕ್ಷಕರ ಅಭಿವೃದ್ಧಿ ಕಾರ್ಯಾಗಾರ ಆಯೋಜಿಸಲಾಗಿತ್ತು.    […]

(Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಮಂಗಳವಾರ ಉಡುಪಿ ಜಿಲ್ಲಾ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರ ಸಂಘದ ಸಹಯೋಗದಲ್ಲಿ “ಭವಿಷ್ಯ ರೂಪಿಸುವಲ್ಲಿ ಪ್ರೇರಣಾದಾಯಕ ಶಿಕ್ಷಕರು”ಎಂಬ ವಿಷಯದ ಕುರಿತು  ಪದವಿ ಪೂರ್ವ ಶಿಕ್ಷಕರ ಅಭಿವೃದ್ಧಿ ಕಾರ್ಯಾಗಾರ ಆಯೋಜಿಸಲಾಗಿತ್ತು.

    ಕಾರ್ಯಕ್ರಮವನ್ನು ಉಡುಪಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಮಾಲ್ಗೆ ಉದ್ಘಾಟಿಸಿದರು.

    ಅವರು ಮಾತನಾಡಿ,  ವಿದ್ಯಾರ್ಥಿಗಳನ್ನು ಸದೃಢ ನಾಗರೀಕರನ್ನಾಗಿ ರೂಪಿಸಲು ಶಿಕ್ಷಕರನ್ನು ಕೃತಕ ಬುದ್ಧಿಮತ್ತೆ ಮತ್ತು ಸಮಾಲೋಚನಾ ಸಾಧನಗಳೊಂದಿಗೆ ಸಬಲೀಕರಣಗೊಳಿಸುವ ಮಹತ್ವ ವಿವರಿಸಿದರು.

    ಉಡುಪಿ ಜಿಲ್ಲಾ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಾ. ದಯಾನಂದ ಪೈ ಮಾತನಾಡಿ, ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ  ಸಂಸ್ಥೆಯು ನೀಡಿದ ಸಹಾಯದ ಬಗ್ಗೆ ಸ್ಮರಿಸಿ,  ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

     ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ರಾಧಾಕೃಷ್ಣಎಸ್ ಐತಾಳ್ ಮಾತನಾಡಿ, ಸಂಸ್ಥೆಯ ಇತ್ತೀಚಿನ ಸಾಧನೆಗಳು ಮತ್ತು ಶೈಕ್ಷಣಿಕ ಪರಿವರ್ತನೆಗಳ ಬಗ್ಗೆ ತಿಳಿಸಿ, ವಿದ್ಯಾರ್ಥಿ ಕೇಂದ್ರಿತ ನಾವೀನ್ಯತೆಯನ್ನು ಸಾಧಿಸುವಲ್ಲಿ ಇಂತಹಾ ಕಾರ್ಯಾಗಾರದ ಮಹತ್ವದ ಬಗ್ಗೆ ತಿಳಿಸಿದರು.

      ಉಡುಪಿ ಜಿಲ್ಲಾ ಖಾಸಗಿ ಅನುದಾನಿತ ಮತ್ತು  ಅನುದಾನ ರಹಿತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ದಿನೇಶ್‌ಕೊಡವೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಸಂಸ್ಥೆಯ ಶೈಕ್ಷಣಿಕ ಡೀನ್‌ ಡಾ. ನಾಗರಾಜ್ ಭಟ್  ಸ್ವಾಗತಿಸಿದರು. ಡೀನ್ (ಆಂತರಿಕಗುಣಮಟ್ಟ) ಡಾ. ಸುದರ್ಶನ್‌ ರಾವ್‌ ವಂದಿಸಿದರು.

     ಮಣಿಪಾಲ ತಾಂತ್ರಿಕ ಮಹಾ ವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ರಾಘವೇಂದ್ರ ಕೆ ಹೊಳ್ಳ, ಸಂಸ್ಥೆಯ ಪ್ರಾಧ್ಯಾಪಕರಾದ ಶ್ರೀಮತಿ ಲಹರಿ ವೈದ್ಯ , ಡಾ. ದೀಪಿಕಾ ಬಿ ವಿ, ಅರುಣ್‌ಉಪಧ್ಯಾಯ ಮತ್ತು ಡಾ. ಸುದರ್ಶನ್‌ ರಾವ್ ರವರು ಕಾರ್ಯಗಾರದಲ್ಲಿಉಪನ್ಯಾಸ ನೀಡಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.